ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯಲ್ಲಿ ಯೋಧರ ಸಮ್ಮುಖದಲ್ಲಿ ಸ್ವಾತಂತ್ರೋತ್ಸವ





ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗಂಡಸಿ ಹೋಬಳಿಯ ಮಾಜಿ ಸೈನಿಕರುಗಳಾದ ಮಾರುತೇಶ್, ಸತೀಶ್, ರವಿ, ಅಫ್ರೋಜ್, ರಘು, ಹಾಗೂ ಚಿಕ್ಕ ಗಂಡಸಿ ಗ್ರಾಮದ JCO ಮಹೇಶ್ ಸಿ.ಎಚ್, ರವರುಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಗೌರವಗಳೊಂದಿಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಮಡಿದ ವೀರ ಯೋಧರಿಗೆ ನಮಿಸುತ್ತಾ ಅವರ ತ್ಯಾಗ ಬಲಿದಾನವನ್ನು ಸ್ಮರಿಸೋಣ ನಮ್ಮ ನೆಮ್ಮದಿಯ ನಿದ್ದೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಯೋಧರೇ ನಮ್ಮ ಆಯುಷ್ಯದ ರೂವಾರಿಗಳು. ಅಂತಹ ಯೋಧರಿಗೆ ಹಾಗೂ ಅವರ ಕುಟುಂಬದವರಿಗೂ ದೊಡ್ಡ ಸಲಾಂ ಹಗಲಿರುಳು ನಿದ್ದೆ ಬಿಟ್ಟು ಗಡಿ ಕಾಯುತ್ತಾ ನಮ್ಮನ್ನು ಇತರ ರಾಷ್ಟ್ರಗಳ ಶತ್ರುಗಳಿಂದ ರಕ್ಷಿಸುತ್ತಾ ಇರುತ್ತಾರೆ. ನಮ್ಮ ಸೈನಿಕರು ನಮಗಾಗಿ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಇವರಿಗೆ ನಮ್ಮೆಲ್ಲರ ಹೃತೂ³ರ್ವಕ ನಮನ ಎಂದು ಯೋಧರ ಬಗ್ಗೆ ಸ್ಮರಿಸುತ್ತಾ  ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಿದರು ಸಭೆಯಲ್ಲಿ ಅಧ್ಯಕ್ಷರು - ಕವಿತಾ ಪ್ರಸನ್ನ , ಉಪಾಧ್ಯಕ್ಷರು - ಪ್ರದೀಪ್ ಕೋಟಿ,  ವಿಶ್ವನಾಥ್ - ಮಾಜಿ ಗ್ರಾಮ ಪಂಚಾಯತ್ ಸದಸ್ಯರು,  ಸದಸ್ಯರುಗಳಾದ -ನಾಗರಾಜ್ G. H., ಕುಮಾರ್ ಜಿಮೈಕ್, ಶೀಮಾ ಸುಲ್ತಾನ್, ವೀಣಾ ಮಂಜುನಾಥ್, ಚಿಕ್ಕಮ್ಮ, ಚಂದ್ರು, ಮಂಗಳಾಪುರ ಸ್ವಾಮಿ, ದಿನೇಶ್ ದಸನಹಳ್ಳಿ, ಸರ್ದಾರ್ ಪಾಶ - ಮಾಜಿ ಅಧ್ಯಕ್ಷರು ಗಂಡಸಿ ಮತ್ತಿತರು ಉಪಸ್ಥಿತರಿದ್ದರು.

Post a Comment

Previous Post Next Post