"ಲಗಾನ್" ಖ್ಯಾತಿಯ ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಮುಂಬೈ: ಭಾರತ ಚಿತ್ರರಂಗದ ಹಿರಿಯ ನಟ ಅನುಪಮ್ ಶ್ಯಾಮ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಗೋರೆಗಾಂವ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 63 ವರ್ಷದ ಅನುಪಮ್ ಶ್ಯಾಮ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.


ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 'ಸತ್ಯ', 'ದಿಲ್ ಸೇ', 'ಲಗಾನ್' ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿಡ್ನಿ ವೈಫಲ್ಯದ ಕಾರಣ ಡಯಾಲಿಸಿಸ್ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೆಚ್ಚ ಭರಿಸುವಂತೆ ಅವರ ಸಹೋದರ ಅನುರಾಗ್ ನೆರವು ಯಾಚಿಸಿದ್ದರು.

ಅವರ ನಿಧನದ ಬಗ್ಗೆ ಮಾಹಿತಿ ನೀಡಿರುವ ಆಪ್ತ ಯಶ್ ಪಾಲ್ ಶರ್ಮಾ, ಅನುಪಮ್ ನಿಧನರಾದ ಬಗ್ಗೆ ವೈದ್ಯರು ನಮಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಲ್ಲಿರುವ ಅವರ ಮೃತದೇಹವನ್ನು MHADA ಕಾಲೋನಿಯಲ್ಲಿರುವ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ

Post a Comment

Previous Post Next Post