ಅಂಗಡಿಹಳ್ಳಿ ಅಲೆಮಾರಿ ಮತ್ತು ಬುಡಕಟ್ಟು ಜನಾಂಗದವರಿಗೆ ಕೋವಿಡ್ ಲಸಿಕೆ

ಬೇಲೂರು :  ಪ್ರಾಥಮಿಕ ಆರೋಗ್ಯ ಕೇಂದ್ರ ಹಗರೆ ವತಿಯಿಂದ ವಿಶೇಷ ಕೋವಿಡ್‌ ಲಸಿಕಾ ಅಭಿಯಾನವನ್ನು ಅಂಗಡಿಹಳ್ಳಿ ಅಲೆಮಾರಿ ಮತ್ತು ಬುಡಕಟ್ಟು ಜನಾಂಗದವರಿಗೆ ಆಯೋಜಿಸಲಾಗಿತ್ತು.

 ಕಾರ್ಯಕ್ರಮವನ್ನು ಹಗರೆ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಪ್ರಭಾ ಮಹೇಶ್‌ ಉದ್ಘಾಟಿಸಿದರು. ವೈದ್ಯಾಧಿಕಾರಿಗಳಾದ ಡಾ. ಶಾಲಿನಿ ವಿ ಎಲ್‌ ಕೋವಿಡ್‌ ಲಸಿಕೆಯ ಪ್ರಯೋಜನ ಮತ್ತು ಅವಶ್ಯಕತೆಗಳ ಬಗೆಗೆ ವಿವರಿಸಿದರು. 

ನಂತರ ಅಭಿಯಾನದಲ್ಲಿ 641 ಜನರಿಗೆ ಲಸಿಕೆ ನೀಡಲಾಯಿತು. ಮಳೆಯ ನಡುವೆಯೂ ಸುತ್ತಮುತ್ತಲ ಗ್ರಾಮಸ್ಥರು ನಿರಂತರವಾಗಿ ಆಗಮಿಸಿ ಲಸಿಕೆ ಪಡೆದರು. ಅತಿ ಹೆಚ್ಚು ಕೋವಿಡ್‌ ಪ್ರಕರಣ ದಾಖಲಾಗಿದ್ದ ಮತ್ತು ಬಹುತೇತ ಹಿಂದುಳಿದ ಬುಡಕಟ್ಟು ಅಲೆಮಾರಿ ಜನ ನೆಲೆಸಿರುವ ಅಂಗಡಿಹಳ್ಳಿಯಲ್ಲಿ ಲಸಿಕಾ ಅಭಿಯಾನ ಆಯೋಜನೆ ಮಾಡಿದ್ದಕ್ಕೆ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು. 

ಅಭಿಯಾನದಲ್ಲಿ ಹಗರೆ ಗ್ರಾಮಪಂಚಾಯ್ತಿ ಸದಸ್ಯರುಗಳು, ಅಂಗಡಿಹಳ್ಳಿ ಶಾಲೆಯ ಸಿಬ್ಬಂಧಿ, ಜನಪ್ರತಿನಿಧಿಗಳು, ಹಗರೆ ಪೋಲೀಸ್‌ ಠಾಣೆಯ ಸಿಬ್ಬಂಧಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಗರೆಯ ಸಿಬ್ಬಂಧಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

Post a Comment

Previous Post Next Post