ಬೇಲೂರು : ಇಲ್ಲಿನ ಲಯನ್ಸ್ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ಶಾಲಿನಿ ವಿ.ಎಲ್ ಶಿಶುವಿಗೆ ತಾಯಿ ಹಾಲು ಅಮೃತಕ್ಕೆ ಸಮ, ಇದು ತಾಯಿ ಮಗುವಿನ ಅವಿನಾಭಾವ ಸಂಬಂಧದ ಮೂಲವಾಗಿದೆ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ತಾಯಿಯ ಹಾಲು ಪೂರಕವಾದದ್ದು.ಮಗುವಿಗೆ ಹಾಲುಣಿಸಲು ಹೇಗೆ ತಯಾರಾಗಬೇಕು, ಎದೆಯ ಹಾಲಿನ ಮಹತ್ವ, ಎದುರಾಗಬಹುದಾದ ಸವಾಲುಗಳು, ಎದೆ ಹಾಲಿನಿಂದ ತಾಯಿ ಮಗುವಿಗೆ ಇರುವ ಪ್ರಯೋಜನಗಳ ಬಗೆಗೆ ವಿವರಿಸಿದರು.
ಲಯನ್ಸ್ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಪ್ರಾಸ್ತಾವಿಕವಾಗಿ ಡಾ ಸಂತೋಷ್ ನುಡಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಸಂಧ್ಯಾಶೆಟ್ಟಿ , ಡಾ ಚಂದ್ರಮೌಳಿ ಮಾತನಾಡಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ
ಮೇಲ್ವಿಚಾರಕರು ಶುಭದೇವಿ , ಲಯನ್ಸ್ ಕಾರ್ಯದರ್ಶಿ ಲತೀಪ್ , ಕುಮಾರ್ ,ನರಸಿಂಹಸ್ವಾಮಿ , ಪುಟಸ್ವಾಮಿ ,ಪೂವಯ್ಯ ಇತರರು ಉಪಸ್ಥಿತರಿದ್ದರು