80 ವರ್ಷ ಇತಿಹಾಸ ಇರುವ ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಕಾರ್ಯಕ್ರಮ ವರುಣನ ಆರ್ಭಟ ದಲ್ಲೂ ವಿಶೇಷವಾಗಿ ನೆರವೇರಿತು
ಆಸ್ಥಾನ ಮಂಟಪದಲ್ಲಿ ಮಹಾಮಂಗಳಾರತಿ ನೆರವೇರಿಸಿ ನಂತರ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ನಗರಸಭೆ ಅಧ್ಯಕ್ಷ ಗಿರೀಶ್ ವಿಸರ್ಜನಾ ಮಹೋತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಗರದ ಪೇಟೆಬೀದಿ ಮೂಲಕ ಬಿ.ಹೆಚ್.ರಸ್ತೆ ಮಾರ್ಗವಾಗಿ ಸರಳ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ನಿಕಟಪೂರ್ವ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ವಿಶೇಷವಾಗಿ ಮಳೆ ಇದ್ದರೂ ಸಹ ಉತ್ಸವ ನಿಲ್ಲಿಸದೆ ಗಣಪತಿ ಮಂಡಳಿಯವರು ಮತ್ತು ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಅವರು ಮಳೆಯಲ್ಲೇ ಉತ್ಸವ ನಡೆಸಿದ್ದು ಪ್ರಪ್ರಥಮ ಬಾರಿಗೆ ಈ ಹೊಸ ಬೆಳವಣಿಗೆ ಅರಸೀಕೆರೆಯಲ್ಲಿ ಪ್ರಾರಂಭವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ಕಂತೇನಹಳ್ಳಿ ಗ್ರಾಮಸ್ಥರು ಶ್ರೀಯವರಿಗೆ ಪೂಜೆ ಸಲ್ಲಿಸಿದ ನಂತರ ಕೆರೆಯ ಆವರಣವನ್ನು ಪ್ರವೇಶಿಸಿ, ಗಣಪತಿಯ ಸುರಕ್ಷಿತ ವಿಸರ್ಜನೆಗೆ ಕೆರೆಯ ಆವರಣದಲ್ಲಿ ನಿರ್ಮಿಸಿದ್ದ ಸ್ಥಳದಲ್ಲಿ ಗಂಗೆ ಪೂಜೆ ಸಲ್ಲಿಸಿ ಕ್ರೇನ್ ಮೂಲಕ ವಿಸರ್ಜಿಸಲಾಯಿತು.
ಜಿಲ್ಲಾಧಿಕಾರಿಯವರ ಆದೇಶದಂತೆ ಅರಸೀಕೆರೆ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್, ಡಿವೈಎಸ್ಪಿ ನಾಗೇಶ್ ಮತ್ತು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸೋಮೇಗೌಡ ಅವರು ವಿಸರ್ಜನಾ ಮಹೋತ್ಸವದ ಮೇಲುಸ್ತುವಾರಿ ವಯಸ್ಸಿ ಅಚ್ಚುಕಟ್ಟಾಗಿ ಗಣಪತಿ ವಿಸರ್ಜನೆಯನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಯಶಸ್ವಿಯಾಗಿ ನೆರವೇರಿಸಿದರು.
Tags
ಅರಸೀಕೆರೆ