ಮಹಾಲಿಂಗೇಶ್ವರ ದೇವಾಲಯ. ಹೊಯ್ಸಳ ವಾಸ್ತುಶಿಲ್ಪ.೧೨/೧೩ನೇ ಶತಮಾನದ ಕಾಲಘಟ್ಟ

ಮಹಾಲಿಂಗೇಶ್ವರ ದೇವಾಲಯ. ಹೊಯ್ಸಳ ವಾಸ್ತುಶಿಲ್ಪ.೧೨/೧೩ನೇ ಶತಮಾನದ ಕಾಲಘಟ್ಟ. 

ಸಂತೆ ಬಾಚಹಳ್ಳಿ. ಕೆ ಆರ್ ಪೇಟೆ (ಕೃಷ್ಣರಾಜಪೇಟೆ), ಮಂಡ್ಯ ಜಿಲ್ಲೆ. 
ಕೆ ಆರ್ ಪೇಟೆ ಒಂದರ್ಥದಲ್ಲಿ ಹೇಳಬೇಕು ಅಂದರೆ ಹೊಯ್ಸಳ ದೇವಸ್ಥಾನಗಳ ಕೇಂದ್ರವಾಗಿದೆ.  ಕೆಆರ್ ಪೇಟೆಯ ಅಂತಹ ಒಂದು ಸಣ್ಣ ಹಳ್ಳಿ ಸಂತೆ ಬಾಚಹಳ್ಳಿಯೂ ಹೊಯ್ಸಳ ದೇಗುಲ ಹೊಂದಿದೆ. ೧೨/೧೩ ನೇ ಶತಮಾನದಲ್ಲಿ ನಿರ್ಮಿಸಲಾದ ಏಕಕೂಟ ಮಹಾಲಿಂಗೇಶ್ವರ ದೇವಾಲಯ ಇಲ್ಲಿದೆ. ದೇವಾಲಯ ಮುಂಭಾಗದಲ್ಲಿ ಮುಂಭಾಗದ ದ್ಯಾವನಕೆರೆಯ ಎದುರಿಗೆ ಪೂರ್ವಾಭಿಮುಖವಾಗಿ ಇರುವ ದೇವಾಲಯ ಇದೆ. ಪ್ರಸುತ್ತ ಜೀರ್ಣೋದ್ಧಾರಗೊಂಡು ದರ್ಶನಯೋಗ್ಯವಾಗಿದೆ. ಆದರೆ ನಿರ್ವಹಣೆ ಕಳಪೆ ಮಟ್ಟದಲ್ಲಿದೆ. ಇತರೆ ಹೊಯ್ಸಳ ದೇವಾಲಯಗಳಿಗೆ ಹೋಲಿಸಿದರೆ ಈ ದೇವಾಲಯವು ಸರಳವಾದ ರಚನೆಯನ್ನು ಹೊಂದಿದೆ ಮತ್ತು ಅದರ ಒಳಭಾಗ ಮತ್ತು ಶಿಕಾರವು ಭವ್ಯವಾಗಿದೆ. 
ದೇವಾಲಯವು ಗರ್ಭಗೃಹ, ಶುಕನಾಸಿ ಹಾಗೂ ನವರಂಗವನ್ನು  ಹೊಂದಿದೆ. ಗೋಪುರದಲ್ಲಿರುವ ಉಗ್ರನರಸಿಂಹ,  ವೇಣುಗೋಪಾಲ, ತಾಂಡವೇಶ್ವರ, ಉಮಾಮಹೇಶ್ವರ, ಭೈರವ, ಲಕ್ಷ್ಮೀ ನಾರಾಯಣನ ಶಿಲ್ಪಗಳು ನಮ್ಮನ್ನು   ಆಕರ್ಷಿಸುತ್ತಿವೆ. 
ದೇವಾಲಯದ ನವರಂಗದ ಉತ್ತರದ ಸಣ್ಣಗುಡಿಯಲ್ಲಿ ಮಹಾವಿಷ್ಣುವಿನ ವಿಗ್ರಹವಿದ್ದರೆ, ದಕ್ಷಿಣದ ಗುಡಿಯಲ್ಲಿ  ಚತುರ್ಮುಖ  ಬ್ರಹ್ಮನ ಮೂರ್ತಿ ಇದೆ.   ಇವೆರಡರ  ಮಧ್ಯಭಾಗದಲ್ಲಿ ಪ್ರಧಾನ ಗರ್ಭಗೃಹದಲ್ಲಿ  ಶ್ರೀ ಮಹಾಲಿಂಗೇಶ್ವರ ಲಿಂಗರೂಪದಲ್ಲಿದೆ. 
ಸದ್ಯಕ್ಕೆ ಸ್ಥಳೀಯ ಯುವಕರು ಸ್ವಲ್ಪ ದೇವಾಲಯದ ಕಡೆ ಗಮನ ಹರಸಿ ದೇವಾಲಯದ ಸುತ್ತಮುತ್ತಲಿನ ಸ್ವಚ್ಛತೆಯನ್ನಾದರೂ ಮಾಡಬೇಕು. 
ದೇವಸ್ಥಾನದ ಹೊರಗೆ ಹಳೆಯ ಬೋರ್ಡ್ ಇದ್ದು ಅದು ದೇವಸ್ಥಾನದ ಬಗ್ಗೆ ಸಾಮಾನ್ಯ ಮಾಹಿತಿ ನೀಡುತ್ತದೆ. ಆದರೆ ಬೋರ್ಡ್ ಈಗ ರಸ್ಟ್ ಹಿಡಿದು ಹಾಳಾಗಿದೆ.

Post a Comment

Previous Post Next Post