ಹಾಸನ : ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಳಿಯ ಕಾಮಸಮುದ್ರದ ಬಳಿಯಲ್ಲಿ ಕಾರು ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ ಉಂಟಾಗಿದೆ. ಇದರಿಂದಾಗಿ ಸ್ಥಳದಲ್ಲೇ ವ್ಯಕ್ತಿಯೋರ್ಪ ಮೃತಪಟ್ಟು, ಇತರರು ಗಾಯಗೊಂಡಿರೋ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರದ ಬಳಿಯಲ್ಲಿ ಆಟೋ-ಕಾರಿನ ಮಧ್ಯೆ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ರಬಸಕ್ಕೆ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಇನ್ನೂ ಆಟೋ - ಕಾರು ರಸ್ತೆ ಅಪಘಾತದಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಕೂಡ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಮೃತಪಟ್ಟ ಆಟೋ ಚಾಲಕ ಹೊಳೆನರಸಿಪುರದ ಬೈಚನಹಳ್ಳಿ ಗ್ರಾಮದ ವ್ಯಕ್ತಿಯೆಂದು ಹೇಳಲಾಗುತ್ತಿದೆ.