ಬೇಲೂರು : ಇಲ್ಲಿನ ಚನ್ನಾಪುರ ಗ್ರಾಮದ ಬಳಿ ಇರುವ ಶ್ರೀರೇಣುಕಾ ಯಲ್ಲಮ್ಮ ದೇವಿ ಜಾತ್ತಾಮಹೋತ್ಸವವು ಅರ್ಥಪೂರ್ಣವಾಗಿ ಜರುಗಿತು.
| ಬೇಲೂರಿನ ರೇಣುಕಾಎಲ್ಲಮ್ಮದೇವಿ ಜಾತ್ರಾ ಮಹೋತ್ಸವ ಅರ್ಥಪೂರ್ಣವಾಗಿ ಜರುಗಿತು |
ಜಾತ್ರಾಮಹೋತ್ಸವದ ಪ್ರಯುಕ್ತ ದೇವಿಗೆ ಅಭಿಷೇಕ, ಪುಷ್ಪಾಲಂಕಾರದೊAದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆಯೆ ದೇವರ ಭಕ್ತರು ಕರೆಯಿಂದ ಗಂಗೆಯನ್ನು ಕಳಸದೊಂದಿಗೆ ಹೊತ್ತುತಂದು ಪೂಜೆ ಸಲ್ಲಿಸಿದರು.
ಕೊರೊನಾ ಕಾರಣದಿಂದ ಸುಮಾರು ಐದು ವರ್ಷಗಳಿಂದ ದೇವಿಗೆ ಹರಕೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗಿರಲಿಲ್ಲ. ಹೋಮ-ಹವನವನ್ನು ಮಾಡಿ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ಪ್ರಧಾನ ಅರ್ಚಕರಾದ ಕುಮಾರ್, ಬಿ.ವೈ.ಜಗದೀಶ್, ಲಕ್ಷ್ಮಿಶ್ರೀನಿವಾಸ್, ಚೈತ್ರಜಗದೀಶ್, ರಾಗಿಣಿವೆಂಕಟೇಶ್, ದಿವ್ಯತೀರ್ಥಕುಮಾರ್, ಲತಾಲೋಕೇಶ್, ವಿಶಾಲ್, ಜೀವನ್ ಇತರರು ಇದ್ದರು.
Tags
ಬೇಲೂರು