ಬೇಲೂರು: ಬೇಲೂರು ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಸೇರಿದಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಪುರಸಭೆಯ ನೂತನ ಅಧ್ಯಕ್ಷ ಸಿ.ಎನ್.ದಾನಿ ಹೇಳಿದರು.
ನೂತನ ಕೊಠಡಿಗೆ ಪೂಜೆ ಸಲ್ಲಿಸಿ ಪದಗ್ರಹಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಮುಖ್ಯರಸ್ತೆ ಕಿರಿದಾಗಿದ್ದು ವಾಹನಗಳನ್ನು ನಿಲುಗಡೆ ಮಾಡಲು ತೊಂದರೆಯಾಗುತ್ತಿದೆ. ಸಮರ್ಪಕ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಶಾಸಕ ಕೆಎಸ್.ಲಿಂಗೇಶ್ ಅವರೊಂದಿಗೆ ಚರ್ಚಿಸಿ ಸದಸ್ಯರ, ಪ್ರಮುಖರ ಸಹಕಾರ ಪಡೆದು ವಿಸ್ತರಣೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷರ ಹಾಗೂ ಮುಖ್ಯಾಧಿಕಾರಿಗಳ ಕೊಠಡಿ ನೂತನವಾಗಿ ನಿರ್ಮಿಸಲಾಗಿದ್ದು ಈ ಕಾರಣದಿಂದ ಇಂದು ಪೂಜೆ ಸಲ್ಲಿಸಲಾಗಿದೆ. ಪಕ್ಷಬೇಧ ಮರೆತು, ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡಬೇಕೆಂಬುದು ಅಭಿಲಾಶೆಯಾಗಿದೆ. ಶಾಸಕರೂ ಸಹ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಪಟ್ಟಣದ ಅಭಿವೃದ್ಧಿಯಲ್ಲಿ ಗುಂಪುಗಾರಿಕೆ, ಪಕ್ಷಬೇಧ, ಮನಸ್ಥಾಪ ಇದಾವುದೂ ಇರುವುದಿಲ್ಲ ಎಂದು ಹೇಳಿದರು. ಕುಡಿಯುವ ನೀರಿನ ಯೋಜನೆ ಏನಾಗಿದೆ ಎಂಬುದನ್ನು ಅರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೆ ವೇಳೆ, ಪುರಸಭ ಮುಖ್ಯಾಧಿಕಾರಿ ಸುಜಯ್‌ಕುಮಾರ್ ಅವರು ಸಹ ನೂತನ ಕೊಠಡಿಗೆ ಪೂಜೆ ಸಲ್ಲಿಸುವ ಮೂಲಕ ಸ್ಥಾನ ಅಲಂಕರಿಸಿದರು. ಈ ಹಿಂದೆ ಇದ್ದಂತ ಉಪಾಧ್ಯಕ್ಷರ ಕೊಠಡಿಗೆ ಪೂಜೆ ಸಲ್ಲಿಸಿದ ನಂತರ ಉಪಾಧ್ಯಕ್ಷೆ ರತ್ನಮ್ಮಸತ್ಯನಾರಾಯಣ ಸಹ ಪದಗ್ರಹಣ ಮಾಡಿದರು. ನೂತನ ಕೊಠಡಿ ನಿರ್ಮಾಣಗೊಂಡಿದ್ದರೂ ಇನ್ನೂ ಉದ್ಘಾಟನೆಗೊಂಡಿರಲಿಲ್ಲ. ಆದರೂ ತುರ್ತು ಇದ್ದ ಕಾರಣ ಶಾಸಕರ ಸೂಚನೆಯಂತೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳು ಕೊಠಡಿಗಳ ಪಡೆದುಕೊಂಡರು.
ಇಂದಿನ ಪೂಜಾ ಕಾರ್ಯದಲ್ಲಿ ಅಧ್ಯಕ್ಷ ಸಿ.ಎನ್.ದಾನಿ, ಉಪಾಧ್ಯಕ್ಷೆ ರತ್ನಮ್ಮಸತ್ಯನಾರಾಯಣಗೌಡ, ಮುಖ್ಯಾಧಿಕಾರಿ ಸುಜಯ್‌ಕುಮಾರ್ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆAಕಟೇಶ್ ಸೇರಿದಂತೆ ಪಕ್ಷಬೇಧಮರೆತು ಪುರಸಭೆಯ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಜಾ.ದಳ ಮಾಜಿ ಪುರಸಭ ಅಧ್ಯಕ್ಷ ಶ್ರೀನಿಧಿ, ಜಿ.ಪಂ.ಸದಸ್ಯ ಸಯ್ಯದ್‌ತೌಫಿಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರು ಕಾಂಗ್ರೆಸ್ ಪಕ್ಷದ ಪ್ರಮುಖರು, ಪುರಸಭೆಯ ನೌಕರರು ಹಾಜರಿದ್ದು ಶುಭ ಹಾರೈಸಿದರು.
೭ ಬಿಎಲ್‌ಆರ್‌ಪಿ-೧
ಬೇಲೂರು ಪುರಸಭೆಯಲ್ಲಿನ ಅಧ್ಯಕ್ಷ-ಮುಖ್ಯಾಧಿಕಾರಿಗಳ ನೂತನ ಕೊಠಡಿಗೆ ಪೂಜೆ ಸಲ್ಲಿಸಲಾಯಿತು