ಕಳಪೆ ರಸ್ತೆ ಕಾಮಗಾರಿ : ಕಣ್ಮುಚ್ಚಿ ಕುಳಿತ ಮಲ್ಲಿಪಟ್ಟಣ ಗ್ರಾಮಪಂಚಾಯಿತಿ ಹಾಗೂ ಅಧಿಕಾರಿಗಳು..


ಅರಕಲಗೂಡು :- ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡು ಗ್ರಾಮದಲ್ಲಿ ಕಳಪೆಯಾಗಿ ರಸ್ತೆ ಕಾಮಗಾರಿ ನಡೆದಿದ್ದರೂ. ಸಂಬಂಧಿಸಿದ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
 ಈ ವಿಚಾರವಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣದ ಮೂಲಕ  ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿರುವ ಗ್ರಾಮಸ್ಥರು,2020-2021 ನೇ ಸಾಲಿನಲ್ಲಿ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡು ಗ್ರಾಮದ HRP ಕಾಲೋನಿಯಿಂದ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದವರೆಗೆ ರಸ್ತೆ ನಿರ್ಮಾಣಕ್ಕೆ ಸರ್ಕಾರದಿಂದ 4 ಲಕ್ಷ ಅನುದಾನ ಮಂಜೂರಾಗಿದೆ ಈ ಹಣವನ್ನು ಸರಿಯಾಗಿ ಬಳಸಿಕೊಳ್ಳದ ಗುತ್ತಿಗೇದಾರರು ರಸ್ತೆ ಕಾಮಗಾರಿಯನ್ನು ಸಂಪೂರ್ಣವಾಗಿ ಕಳಪೆಯಾಗಿ ನಿರ್ಮಾಣ ಮಾಡಿದ್ದಾರೆ  ನೂತನ ರಸ್ತೆಗೆ ಹಾಕಿರುವ ಜಲ್ಲಿ ಈಗಾಗಲೇ  ರಸ್ತೆಯ ಎರಡೂ ಬದಿಗೆ ಬಿದ್ದಿದ್ದು ವಾಹನ ಸವಾರರು ಚಲಿಸಲು ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ಸಂಬಂಧಿಸಿದ ಗ್ರಾಮ ಪಂಚಾಯತಿ ಹಾಗೂ ಇಲಾಖೆ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಿ  ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Post a Comment

Previous Post Next Post