ಬೇಲೂರಿನಲ್ಲಿ ಇಂದಿನಿಂದ ದಾಸೋಹ ಪುನಃ ಆರಂಭ

 ಬೇಲೂರು: ಕೊರೊನಾ ಕಾರಣದಿಂದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಇಂದಿನಿಂದ ಪುನಃ ಆರಂಭಗೊಂಡಿದೆ.

ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಪೂಜೆ ಸಲ್ಲಿಸುತ್ತಿರುವ ಶಾಸಕರು ಇತರರು

ಮಧ್ಯಾಹ್ನ ೧ ಗಂಟೆಗೆ ಸರಿಯಾಗಿ ದೇಗುಲದಿಂದ ಆಗಮಿಸಿದ ಆಗಮಿಕ ಅರ್ಚಕ ಕೃಷ್ಣಸ್ವಾಮಿಭಟ್ಟರ್ ಹಾಗೂ ಅರ್ಚಕರ ತಂಡ ದಾಸೋದಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಶಾಸಕ ಕೆಎಸ್.ಲಿಂಗೇಶ್, ತಹಸೀಲ್ದಾರ್ ಮೋಹನಕುಮಾರ್, ದೇಗುಲದ ಕಾರ್ಯ ನಿರ್ವಾಹಕಾಧಿಕಾರಿ ವಿದ್ಯುಲ್ಲತಾ, ತಾ.ಪಂ.ಇಒ ರವಿಕುಮಾರ್, ಬಿಇಒ ಲೋಕೇಶ್ ಅವರುಗಳು ಸಹ ದೇವರಿಗೆ ಹಾಗೂ ಅಡುಗೆ ಸಾಮಾಗ್ರಿಗಳಿಗೆ ಪೂಜೆ ನೆರವೇರಿಸಿದರು. ನಂತರ ಭಕ್ತರಿಗೆ ದಾಸೋಹಕ್ಕೆ ವ್ಯವಸ್ಥೆ ಮಾಡಲಾಯಿತು.





Post a Comment

Previous Post Next Post