ಹಾಸನ: ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ತಾಯಿ ಜತೆಗಿದ್ದ ಮೂರು ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಾಸನದ ಭೂವನಹಳ್ಳಿಯ ಸಮೀಪ ಈ ಅಪಘಾತ ಸಂಭವಿಸಿದೆ.
ಹಾಸನದ ಗವೇನಹಳ್ಳಿಯ ಶಿವಾನಂದ್-ಜ್ಯೋತಿ ದಂಪತಿಯ ಅವಳಿ ಮಕ್ಕಳು ಪ್ರಣತಿ (3), ಪ್ರಣವ್ (3) ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಹಾಸನ ಹೊರ ವಲಯದ ಬೂವನಹಳ್ಳಿ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಲಾರಿ ನಿಲ್ಲಿಸದೆ ಲಾರಿ ಚಾಲಕ ಪರಾರಿ ಆಗಿದ್ದ. ಅಪಘಾತ ಸ್ಥಳದಿಂದ ಮೂರು ಕಿಲೋಮೀಟರ್ ಮುಂದೆ ಹೋಗುವಾಗ ಮತ್ತೆ ಮೂರು ಬೈಕ್ಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 75ರ ರಿಂಗ್ ರಸ್ತೆಯ ಬೂವನಹಳ್ಳಿಯಿಂದ ಹೊಸಕೊಪ್ಪಲು ನಡುವೆ ಅದೇ ಲಾರಿ ನಾಲ್ಕು ಬೈಕ್ಗಳಿಗೆ ಡಿಕ್ಕಿ ಆಗಿದೆ. ಲಾರಿ ಹಿಂಬಾಲಿಸಿದ ಜನರು ಮೈಸೂರು ರಸ್ತೆಯ ಹೊಸಕೊಪ್ಪಲು ಬಳಿ ಲಾರಿ ತಡೆದು ನಿಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.