ಬೇಲೂರಿನಲ್ಲಿ ಸದ್ಗುರು ಶ್ರೀಸ್ವಾಮಿ ದೇಗುಲ: ಮೂರ್ತಿ ಮೆರವಣಿಗೆ

ಬೇಲೂರು: 

ತಾಲ್ಲೂಕಿನ ಬೆಟ್ಟದಕೇಶವಿ ಗ್ರಾಮದಲ್ಲಿ ಸದ್ಗುರು ಶ್ರೀಸ್ವಾಮಿಯವರ  ದೇವಾಲಯವನ್ನು ಲೋಕಾರ್ಪಣೆ ಮಾಡುವ ಮುನ್ನ ಪಟ್ಟಣದಲ್ಲಿ ಸದ್ಗುರು ಶ್ರೀಸ್ವಾಮಿಯವರ ಮೂರ್ತಿಯ ಮೆರವಣಿಗೆ ನಡೆಸಲಾಯಿತು.


ಈ ಸಂದರ್ಭ ಮಾತನಾಡಿದ ಪುರಸಭ ಮಾಜಿ ಅಧ್ಯಕ್ಷ ಟಿ.ಎ.ಶ್ರೀನಿಧಿ, ಬೆಟ್ಟದ ಕೇಶವಿ ಗ್ರಾಮದಲ್ಲಿ ಸದ್ಗುರು ಶ್ರೀಸ್ವಾಮಿಯವರ ದೇವಾಲಯವನ್ನು ನಿರ್ಮಿಸಲಾಗಿದ್ದು ಲೋಕಾರ್ಪಣೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪಟ್ಟಣದಲ್ಲಿ ಸದ್ಗುರು ಶ್ರೀಸ್ವಾಮಿಯವರ ಮೂರ್ತಿಯನ್ನು ಮೆರವಣಿಗೆ ಮಾಡಲಾಗಿದೆ. ಗುರುಗಳು ಸರ್ವರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ಉಧ್ಯಮಿ ಸಂತೋಷ್, ದಿನೇಶ್, ಚಂದ್ರಶೇಖರ್ ಇತರರು ಇದ್ದರು.


Post a Comment

Previous Post Next Post