ಹಾಸನ :- ದತ್ತಜಯಂತಿ ಅಂಗವಾಗಿ ನಾಳೆ ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೆಯ ಕ್ಷೇತ್ರಕ್ಕೆ ನಾವು ಭೇಟಿ ನೀಡಲಿದ್ದೇವೆ, ದತ್ತಮಾಲಾ ದಾರಿಗಳನ್ನು ಕುಡುಕರೆಬಂತೆ ಬಣ್ಣಿಸಿರುವ ಹಾಸನದ ಜಿಲ್ಲಾಧಿಕಾರಿ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕ ಸಿ ಟಿ ರವಿ ಒತ್ತಾಯಿಸಿದ್ದಾರೆ.
ಬೇಲೂರು ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ ಹೇರುವ ಸುತ್ತೋಲೆಯಲ್ಲಿ ದತ್ತಮಾಲಾ ದಾರಿಗಳನ್ನು ಅವಹೇಳನ ಅಪಮಾನ ರೀತಿಯಲ್ಲಿ ಆದೇಶ ಹೊರಡಿಸಿದ್ದು, ಸಾವಿರಾರು ದತ್ತಮಾಲಾಧಾರಿಗಳು ಬೇಲೂರು ಮೂಲಕ ಚಿಕ್ಕಮಂಗಳೂರಿನ ದತ್ತಪೀಠಕ್ಕೆ ಹೋಗಲಿದ್ದು ಬರುವಾಗ ವಾಹನಗಳನ್ನು ನೆನೆಸಿಕೊಂಡು ಮದ್ಯಸೇವನೆ ಮಾಡಿಕೊಂಡು ಅನ್ಯ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಘೋಷಣೆ ಹೋಗುವ ಸಾಧ್ಯತೆ ಇದೆ ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಬೇಲೂರು ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಹಾಸನ ಡಿಸಿ ಆದೇಶ ಮಾಡಿದ್ದರು ಇದು ರಾಜ್ಯಾದ್ಯಂತ ಇರುವ ದತ್ತಮಾಲಧಾರಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿದ್ದು.