ಹಾಸನ: ರೈತರಿಂದ ಖರೀದಿಸುವ ಹಾಲಿನ ದರವನ್ನು ಜನವರಿಯಿಂದ ಹೆಚ್ಚಳ ಮಾಡಲಾಗುವುದು ಎಂದು ಹಾಸನ ಹಾಲು ಒಕ್ಕೂಟ (ಹಾಮೂಲ್)ದ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಹಾಸನ ಡೇರಿ ಆವರಣದಲ್ಲಿ ಭಾನುವಾರಹಮ್ಮಿಕೊಂಡಿದ್ದ ಹಾಸನ ಹಾಲು ಒಕ್ಕೂಟದ2020 – 21ನೇ ಸಾಲಿನ ಸರ್ವ ಸದಸ್ಯರವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದರು.
ಬೆಂಗಳೂರು ಒಕ್ಕೂಟವು ಸಂಗ್ರಹಿಸುವ25.50 ಲಕ್ಷ ಲೀ. ಹಾಲಿನಲ್ಲಿ ನೇರವಾಗಿ 24.50ಲಕ್ಷ ಲೀ. ಹಾಲನ್ನು ಮಾರಾಟ ಮಾಡುತ್ತಿದೆ. ಆದರೆ ಹಾಸನ ಒಕ್ಕೂಟವು 12 ಲಕ್ಷ ಲೀ.ಸಂಗ್ರಹಿಸುತ್ತಿದ್ದು, ಅದರಲ್ಲಿ ಕೇವಲ 3 ಲಕ್ಷ ಲೀ. ಮಾತ್ರ ನೇರವಾಗಿ ಮಾರಾಟ ಮಾಡುತ್ತಿದ್ದು, ಉಳಿದ 9 ಲಕ್ಷ ಲೀ. ಹಾಲಿನ ಪುಡಿ ಮತ್ತಿತರ ಹೈನುಉತ್ಪನ್ನಗಳ ಪರಿವರ್ತನೆಗೆ ಬಳಸುತ್ತಿದೆ ಎಂದು ಹೇಳಿದರು.
ಪ್ರತಿ ಹಳ್ಳಿಯಲ್ಲೂ ಡೇರಿಗಳ ಆರಂಭ: ಮುಂದಿನ 5ವರ್ಷಗಳಲ್ಲಿ ಹಾಸನ ಜಿಲ್ಲೆಯಪ್ರತಿ ಹಳ್ಳಿಯಲ್ಲೂ ಹಾಲು ಉತ್ಪಾದಕರಪ್ರಾಥಮಿಕ ಸಹಕಾರ ಸಂಘಗಳನ್ನುಆರಂಭಿಸುವ ಗುರಿಯನ್ನು ಹಾಸನ ಹಾಲುಒಕ್ಕೂಟವು ಹೊಂದಿದೆ. ಈಗಾಗಲೇ ಒಕ್ಕೂಟವುಹಾಲು ಉತ್ಪಾದಕರಿಗೆ ಪ್ರತಿ ತಿಂಗಳು100 ಕೋಟಿರೂ. ಬಟವಾಡೆ ಮಾಡುತ್ತಿದೆ. ಈಗ ಒಕ್ಕೂಟದ ವಾರ್ಷಿಕ ವಹಿವಾಟು 1378 ಕೋಟಿ ರೂ.ಗೆ ಏರಿದೆ ಎಂದು ತಿಳಿಸಿದರು.
ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಒಕ್ಕೂಟದ ನಿರ್ದೇಶಕ ಎನ್.ಸಿ.ನಾರಾಯಣ ಗೌಡ ಮಾತನಾಡಿದರು. ಹಲವು ಸದಸ್ಯರುತಮ್ಮ ಸಂಘಗಳಲ್ಲಿನ ಕೊರತೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಡೇರಿ ಮುಂಭಾಗ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಮೆಸ್ಥಾಪಿಸಬೇಕೆಂದು ಆಗ್ರಹಿಸಿದರು.
ನಿರ್ದೇಶಕ ಹೊನ್ನವಳ್ಳಿ ಸತೀಶ್‌ದೊಡ್ಡಬೀಕನಹಳ್ಳಿ ನಾಗರಾಜ್,ರಾಮಚಂದ್ರೇಗೌಡ , ಸಹಕಾರ ಸಂಘಗಳಜಂಟಿ ನಿಬಂಧಕ ಪ್ರಕಾಶ್‌ರಾವ್, ಪಶು ಪಾಲನೆ ಇಲಾಖೆ ಉಪ ನಿದೇಶಕ ಡಾ.ರಮೇಶ್ ಇತರರಿದ್ದರು.
4000 ಕೋಟಿ ರೂ. ಹೂಡಿಕೆ :
ಒಕ್ಕೂಟವು ಸುವಾಸಿತ ಹಾಲಿನ ಪೆಟ್ ಬಾಟಲ್ ಉತ್ಪಾದನೆ ಆರಂಭಿಸಿದೆ. 255 ಕೋಟಿ ರೂ. ಸ್ವಂತ ಬಂಡವಾಳದಿಂದ ಈ ಘಟಕವನ್ನು ಹಾಸನ ಡೇರಿಯಲ್ಲಿ ನಿರ್ಮಾಣ ಮಾಡಿದೆ. ಐಸ್ ಕ್ರೀಂ ಘಟಕ, ಯುಎಚ್‌ಟಿ ಹಾಲಿನ ಘಟಕ ಸೇರಿ ಸುಮಾರು 4000 ಕೋಟಿರೂ. ಗಳ ವಿವಿಧ ಘಟಕಗಳನ್ನು ಹಾಸನ ಹಾಲು ಒಕ್ಕೂಟ ನಿರ್ವಹಿಸುತ್ತಿದೆ. ಈ ಎಲ್ಲ ಘಟಕಗಳನ್ನೂ ಹಾಸನ ಹಾಲು ಒಕ್ಕೂಟವು ಸ್ವಂತ ಬಂಡವಾಳ ದಿಂದಲೇ ನಿರ್ಮಿಸಿದೆ. ಈಗ ಹಾಸನದಲ್ಲಿ ಕೆಎಂಎಫ್ ಒಡೆತನದಲ್ಲಿರುವ ಎರಡು ಪಶು ಆಹಾರ ಘಟಕಗಳು ಹಾಸನ ಹಾಲು ಒಕ್ಕೂಟಕ್ಕೆ ಬರಬೇಕಾಗಿದೆ. ಆದರೆ ಕೆಎಂಎಫ್ ಬಿಟ್ಟುಕೊಡುತ್ತಿಲ್ಲ ಎಂದರು.