ಹೇಗಿದೆ ನಿಖಿಲ್ ಅಭಿನಯದ ‘ರೈಡರ್’ ಸಿನಿಮಾ -ಚಿತ್ರದ ಒನ್​ಲೈನ್ ಸ್ಟೋರಿ ಏನು?

 ಸ್ಯಾಂಡಲ್​ವುಡ್​​ನ ಯುವರಾಜ ನಿಖಿಲ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ರೈಡರ್​​.. ಇಷ್ಟು ದಿನ ಸಾಂಗ್ಸ್ ಆಂಡ್ ಟ್ರೈಲರ್​​ನಿಂದ ಸದ್ದು ಮಾಡುತ್ತಿದ್ದ ರೈಡರ್ ಇವತ್ತು ಪ್ರೇಕ್ಷಕರ ಮುಂದೆ ತನ್ನ ಅಸಲಿ ರಂಜನೆಯ ರೂಪವನ್ನ ತೋರಿದ್ದಾನೆ.. ಮನಸಿಗೆ ಮುಟ್ಟೋ ಕಥೆ , ಕಣ್ ತಂಪು ಪ್ಲಸ್ ಸಂಪಾಗೋ ಅದ್ಧೂರಿ ದೃಶ್ಯಗಳ ಆಗರ ರೈಡರ್​​.. ರೈಡರ್ ಸಿನಿಮಾದ ಫಸ್ಟ್ ಡೇ ಫಸ್ಟ್ ರಿಪೋರ್ಟ್.. ಸಮಸ್ತ ಚಿತ್ರಪ್ರೇಮಿಗಳಿಗಾಗಿ.

ಕುರುಕ್ಷೇತ್ರ ಹಾಗೂ ಸೀತಾರಾಮ ಕಲ್ಯಾಣ ಸಿನಿಮಾಗಳ ನಂತರ ಎರಡು ವರ್ಷದ ಗ್ಯಾಪ್ ತೆಗೊಂಡು ಕಲರ್​​ಫುಲ್ ಕಮಾಲ್ ಮಾಡಿದ್ದಾರೆ ಸ್ಯಾಂಡಲ್​ವುಡ್​​ನ ಯುವರಾಜ ನಿಖಿಲ್ ಕುಮಾರ್.. ಈ ಬಾರಿ ಕ್ರಿಸ್ಮಸ್ ಹಬ್ಬವನ್ನ ಬಲು ಜೋರಾಗಿಯೇ ಪ್ರೇಕ್ಷಕರ ಥಿಯೇಟರ್ ನಲ್ಲಿ ಮಾಡುವಂತೆ ಮಾಡಿದೆ ರೈಡರ್ ಸಿನಿಮಾ.. ಮತ್ತೊಮ್ಮೆ ಫ್ಯಾಮಿಲಿ ಎಂಟರ್​ಟೈನ್ಮೆಂಟ್ ಸಿನಿಮಾವೊಂದನ್ನ ಪ್ರೇಕ್ಷಕರ ಮಡಿಲಿಗೆ ತಂದು ಕೂರಿಸಿದ್ದಾರೆ ನಿಖಿಲ್ ಕುಮಾರ್​.


ಟಾಲಿವುಡ್​​ನ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಫಸ್ಟ್ ಟೈಮ್ ಸ್ಯಾಂಡಲ್​ವುಡ್ ಸಿನಿಮಾ ರಂಗಕ್ಕೆ ಬಂದು ಮಾಡಿರುವ ಸಿನಿಮಾ ರೈಡರ್​.. ಬಹುದಿನಗಳ ನಂತರ ಲಹರಿ ಮ್ಯೂಸಿಕ್ ಕಂಪನಿ ಅದ್ಧೂರಿ ಸಿನಿಮಾವೊಂದನ್ನ ಕನ್ನಡ ಸಿಲ್ವರ್ ಸ್ಕ್ರೀನ್​​ಗೆ ಅರ್ಪಿಸಿದೆ.. ಅರ್ಜುನ್ ಜನ್ಯ ಸಂಗೀತ , ಶ್ರೀಶ ಕುದುವಳ್ಳಿ ಕ್ಯಾಮೆರಾ ರಿಚ್ ಆಂಡ್ ರಂಗೀನ್ ರಂಜನೆಯನ್ನ ನೀಡಿದೆ.. ರೈಡರ್ ಸಿನಿಮಾಕ್ಕೆ ಇಡೀ ರಾಜ್ಯಾದ್ಯಂತ ಅದ್ದೂರಿ ಸ್ವಾಗತ ಸಿಕ್ಕಿದೆ.

‘ರೈಡರ್’ ಚಿತ್ರದ ಒನ್​ಲೈನ್ ಸ್ಟೋರಿ ಏನು?

ಹಕ್ಕಿಗೂಡು ಅನ್ನೋ ಬಾಲಾಶ್ರಮದೊಂದಿಂದ ರೈಡರ್ ಕಥೆ ಓಪನ್ ಆಗುತ್ತೆ. ಕಿಟ್ಟಿ ಅನ್ನೋ ಹುಡ್ಗನಿಗೆ ಆಶ್ರಮಕ್ಕೆ ಬರೋ ಚಿನ್ನುವಿನ ಪರಿಚಯವಾಗುತ್ತೆ, ಅವ್ರ ಮಧ್ಯೆ ಬೆಳೆಯೋ ಸ್ನೇಹ ಗಟ್ಟಿಯಾವಷ್ಟರಲ್ಲಿ, ಚಿನ್ನು ಕುಟುಂಬಸ್ಥರು ಬಂದು ಆಕೆಯನ್ನ ಕರೆದೋಯಿತ್ತಾರೆ.. ನಂತ್ರ, ಕಿಟ್ಟಿಯನ್ನೂ ಸಹ ಬೇರೊಬ್ಬರು ದತ್ತು ಪಡೆಯುತ್ತಾರೆ. ಸೂರ್ಯನಾಗಿ ಬದಲಾಗೋ ಕಿಟ್ಟಿ, ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಮಿಂಚ್ತಾನೆ. ರಾಷ್ಟ್ರಿಯ ಮಟ್ಟಿದಲ್ಲಿ ಆಡಬೇಕು ಅನ್ನೋ ಮಹದಾಸೆಯಿಂದ, ಸಾಕು ಮಗನಾದ್ರೂ ಫ್ರೆಂಡ್ಸ್, ಫ್ಯಾಮಿಲಿ ಅಂತ ಒಂದಷ್ಟು ಮೌಲ್ಯಗಳಲ್ಲಿ ಬೆಳೆಯುತ್ತಾನೆ. ಪವರ್ ಪ್ರಾಜೆಕ್ಟ್ ಹೆಸರಿನಲ್ಲಿ ಬ್ಯುಸಿನೆಸ್ ಮ್ಯಾನ್​ ಒಬ್ಬ ಆ ಆಶ್ರಮದ ಮೇಲೆ ಕಣ್ಣುಹಾಕುತ್ತಾನೆ. ಆಗ ಆತನೊಂದಿಗೆ ಸೂರ್ಯ ಹೋರಾಠ ಹೇಗಿರುತ್ತೆ..? ಈ ಮಧ್ಯೆ ಚಿನ್ನು ಎಲ್ಲಿ ಹೋಗ್ತಾಳೆ..? ದೊಡ್ಡವರಾದ ಬಳಿಕ ಇವರಿಬ್ಬರೂ ಒಂದಾಗ್ತಾರಾ ಇಲ್ವಾ ಅನ್ನೋದೇ ಚಿತ್ರದ ಒನ್ ಲೈನ್ ಪವರ್​​ಫುಲ್ ಸ್ಟೋರಿ.


ರೈಡರ್ ಬಳಗದ ಕಲಾವಿದರ ಅಭಿನಯ ಹೇಗಿದೆ?

ಸೂರ್ಯನಾಗಿ ಹೀರೋ ಪಾತ್ರದಲ್ಲಿ ಸೂರ್ಯನಂತೆ ಸಮಯಕ್ಕೆ ತಕ್ಕನಾಗಿ ಬೆಳಕು ಚೆಲ್ಲುವ ಹಾಗೆ ಸೀನ್​​​​ಗೆ ತಕ್ಕಹಾಗೆ ಪ್ರಜ್ವಲಿಸಿದ್ದಾರೆ ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್. ಯಾವುದೇ ಅಬ್ಬರ, ಆಡಂಬರ ಇಲ್ಲದೆ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಯುವಕನೊಬ್ಬ ಹೇಗಿರ್ತಾನೋ ಆ ರೀತಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ಟೈಲು, ಲುಕ್ಕು , ಆ್ಯಕ್ಷನ್​ಗಳ ಜೊತೆಗೆ ಪಾತ್ರಕ್ಕೆ ತಕ್ಕನಾಗಿ ಸಹಜ ಸುಂದರ ಅಭಿನಯವನ್ನ ನಿಖಿಲ್ ಮಾಡಿದ್ದಾರೆ.


ಕಾಶ್ಮಿರಾ ಪರದೇಶಿ ಪರಭಾಷೆಯ ನಟೀಮಣಿಯಾದ್ರೂ ಸಹ ಚಿನ್ನು ಪಾತ್ರವನ್ನ ಬಹಳ ಸುಂದರವಾಗಿ ನಿಭಾಯಿಸಿದ್ದಾರೆ. ಅಪ್ಪಟ ಕನ್ನಡದ ಚೆಲುವೆಯಂತೆ ಮುದ್ದಾಗಿ ಕಾಣೋ ಈಕೆಯ ಬೆಡಗು ಬಿನ್ನಾಣದ ಜೊತೆ ಮನೋಜ್ಞ ಅಭಿನಯ ಎಲ್ಲರ ಗಮನ ಸೆಳೆಯಲಿದೆ.


ಚಿಕ್ಕಣ್ಣ, ಶಿವರಾಜ್ ಕೆಆರ್ ಪೇಟೆ ಹಾಗೂ ಸಂತೋಷ್ ಕಾಮಿಡಿ ಟೈಂ ನೋಡುಗರನ್ನ ನಕ್ಕು ನಲಿಸುತ್ತೆ. ಇತ್ತೀಚೆಗೆ ಶಿವರಾಜ್ ಕೆಆರ್ ಪೇಟೆ- ಚಿಕ್ಕು ಆಲ್ಮೋಸ್ಟ್ ಆಲ್ ಎಲ್ಲಾ ಸಿನಿಮಾಗಳಲ್ಲೂ ಕಾಮಿಡಿ ಕಿಕ್ ಕೊಡ್ತಿದ್ದು, ಈ ಚಿತ್ರದಲ್ಲಿ ಇವರಿಬ್ಬರ ಜೋಡಿ ಮೋಡಿ ಮಾಡಿದೆ. ಸಾಫ್ಟ್ವೇರ್ ಸಂತೋಷ್ ಪಾತ್ರದಲ್ಲಿ ಸಂತು ಹಾಸ್ಯದ ಹೊನಲನ್ನೇ ಸೂಸಿದ್ದಾರೆ. ದತ್ತಣ್ಣ, ಶೋಭರಾಜ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಅನುಷಾ ರೈ, ಸಂಪದ ಹುಲಿವಾನ್, ನಿಹಾರಿಕಾ ಹೀಗೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ. ಎರಡು ವಾರದ ಹಿಂದೆ ಮದಗಜ ಸಿನಿಮಾದಲ್ಲಿ ಘರ್ಜಿಸಿದ್ದ ಕೆಜಿಎಫ್ ಖ್ಯಾತಿಯ ಗರುಡ ರಾಮ್ ಖಡಕ್ ಖಳನಾಯಕನಾಗಿ ವಿಲನ್ ಖದರ್ ತೋರಿದ್ದಾರೆ.


ಲವ್, ಌಕ್ಷನ್, ಫ್ಯಾಮಿಲಿ ಎಮೋಷನ್ಸ್, ಕಾಮಿಡಿ ಹೀಗೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಇರೋ ಎಂಟರ್ಟೈನರ್ ಮೂವಿ ರೈಡರ್. ಟೈಟಲ್ ನೋಡಿ ಇದು ಸ್ಪೋರ್ಟ್ಸ್ ಜಾನರ್ ಅಂದುಕೊಳ್ಳೋ ಹಾಗಿಲ್ಲ. ನಾಯಕನಟ ನಿಖಿಲ್ ಯಾವ್ಯಾವ ಕಾರಣಕ್ಕೆ ರೈಡರ್ ಅನಿಸಿಕೊಳ್ತಾರೆ ಅನ್ನೋದನ್ನ ಥಿಯೇಟರ್ನಲ್ಲೇ ಕಣ್ತುಂಬಿಕೊಳ್ಳಿ. ನಾವು ಇಷ್ಟೆಲ್ಲ ಹೇಳಿದ್ಮೆಲೆ ಪ್ರೇಕ್ಷಕ ಮಹಾ ಪ್ರಭು ಏನೆಂದ್ರು ಅನ್ನೊದನ್ನ ನೀವೇ ನೋಡಿ.



ಅಭಿಮಾನಿಗಳ ಜೊತೆ ಸಿನಿಮಾ ನೋಡಿ ನಿಖಿಲ್ ಹ್ಯಾಪಿ

ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ನಿಖಿಲ್ ಕುಮಾರ್ ಚಿತ್ರ ಪ್ರೇಮಿಗಳೇ ತಂಡದ ಜೊತೆ ತಮ್ಮ ಸಂತಸವನ್ನ ಹಂಚಿಕೊಂಡರು. ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಮೂವಿ ಟೆಕ್ನಿಕಲಿ ಸ್ಟ್ರಾಂಗ್ ಆಗಿದೆ. ಒಂದೊಂದು ದೃಶ್ಯ ಕೂಡ ನೋಡುಗರಿಗೆ ಕನೆಕ್ಟ್ ಆಗಲಿದೆ. ಮಕ್ಕಳಿಂದ ಮುದುಕರವರೆಗೂ ನೋಡಬಹುದಾದ ಕ್ಲೀನ್ ಅಂಡ್ ನೀಟ್ ಸಿನಿಮಾ ರೈಡರ್. ಇಷ್ಟು ಹೇಳಿದ್ಮೆಲೆ ಮತ್ಯಾಕೆ ತಡ ಹೊಂಡ್ರಿ ಥಿಯೇಟರ್ ಕಡಿಗೆ.. ಕನ್ನಡ ಸಿನಿಮಾಗಳನ್ನ ಥಿಯೇಟರ್​​ನಲ್ಲೇ ನೋಡಿ ಕನ್ನಡ ಚಿತ್ರರಂಗವನ್ನ ಬೆಳಸಿ ದೇಶ್ಯಾದ್ಯಂತ ಬೆಳಗಿಸಿ.


ವಿಶೇಷ ಬರಹ: ಶ್ರೀಧರ್ ಶಿವಮೊಗ್ಗ 

Post a Comment

Previous Post Next Post