ಅಭಿಮಾನಿ ಸಾಗರದ ನಡ್ವೆ ನಟ ರಾಕ್ಷಸನ ಕುಣಿತ- ‘ಬಡವ ರಾಸ್ಕಲ್’ ನೋಡಿದ ಪ್ರೇಕ್ಷಕ ಏನಂದ?

 ಒಂದು ಸಿನಿಮಾ ಮಾಡಿದ್ರೆ ಸಾಕು, ಒಂದೊಳ್ಳೆ ನಟರ ಜೊತೆ ಕಾಣಿಸಿಕೊಂಡ್ರೆ ಸಾಕು , ನಾನೊಬ್ಬ ಒಳ್ಳೆಯ ಕಲಾವಿದ ಅನ್ನಿಸಿಕೊಂಡ್ರೆ ಸಾಕು ಎಂದು ಕೊಂಡು ಅರಸೀಕೆರೆಯಿಂದ ಬೆಂಗಳೂರು ಬಸ್ ಹತ್ತಿದವರು ಧನಂಜಯ.. ಇವತ್ತು ಪ್ರೇಕ್ಷಕರ ಪಾಲಿಗೆ ಪ್ರೀತಿಯ ಡಾಲಿ ಧನಂಜಯನಾಗಿದ್ದಾರೆ.. ಬರಿ ನಟನಷ್ಟೆ ಅಲ್ಲ ಒಂದೊಳ್ಳೆ ಸಿನಿಮಾದ ನಿರ್ಮಾಪಕ ಕೂಡ ಆಗಿದ್ದಾರೆ.. ಇವತ್ತು ರಾಜ್ಯಾದ್ಯಂತ ಡಾಲಿ ನಿರ್ಮಾಣದ ‘ಬಡವ ರಾಸ್ಕಲ್’ ಸಿನಿಮಾ ತೆರೆಕಂಡಿದೆ.. ಹಾಗಾದ್ರೆ ಸಿನಿಮಾ ಹೇಗಿದೆ..? ಸಿನಿಮಾ ನೋಡಿದ ಪ್ರೇಕ್ಷಕ ಏನೆಂದ? ಬನ್ನಿ ಡಿಟೈಲ್ಡ್ ಆಗಿ ತಿಳಿಯೋಣ.

ಇವತ್ತು ಹೊಸ ನಿರ್ಮಾಪಕ ಉದಯ ಸ್ಯಾಂಡಲ್​ವುಡ್​​ನಲ್ಲಿ ಆಗಿದೆ.. ಬಡವರನ್ನ ಪ್ರತಿನಿಧಿಸುವ ಬಡವರ ಬಂದುವಾಗಿ ಆಟೋ ಡ್ರೈವರ್ ಗಳನ್ನ ಪ್ರತಿನಿಧಿಸುವ ಸಾರಥಿಯಾಗಿ ಇಂದು ಡಾಲಿ ಧನಂಜಯ್ ಮತ್ತೊಮ್ಮೆ ಪ್ರೇಕ್ಷಕ ಮನಸಿನ ಮಂದಿರದಲ್ಲಿ ನಿಂತಿದ್ದಾರೆ.. ಡಾಲಿ ಕಡೆಯಿಂದ ನಮ್ಮದೆ ಲೈಫಿನ ಬ್ಯೂಟಿಫುಲ್ ಕಥೆಯ ಸಿನಿಮಾವನ್ನ ಸಿಕ್ತು ಅಂತ ಅಭಿಮಾನಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದ್ದಾರೆ.


ಇಂದು ರಾಜ್ಯಾದ್ಯಂತ ‘ಬಡವ ರಾಸ್ಕಲ್’ ಗ್ರ್ಯಾಂಡ್ ರಿಲೀಸ್

ಅಭಿಮಾನಿ ಸಾಗರದ ನಡುವೆ ನಟ ರಾಕ್ಷಸನ ಕುಣಿತ ಜೋರು

ಡಾಲಿ ಇವತ್ತಿನಿಂದ ಪ್ರಮೋಷನ್ ಸಿಕ್ಕಿದೆ ನಟ ಕಮ್ ನಿರ್ಮಾಪಕ ಅನ್ನೋ ಹೆಗ್ಗೆಳಿಕೆ ಸಿಕ್ಕಿದೆ.. ಅಷ್ಟೆ ಅಲ್ಲ ಮಧ್ಯಮ ವರ್ಗದ ಪ್ರತಿನಿಧಿಯಾಗಿ ಡಾಲಿ ಜೀವ-ಭಾವ ತುಂಬಿ ಅಭಿನಯ ಮಾಡಿದ್ದಾರೆ.. ಶಂಕರ್ ನಾಗ್ , ಉಪೇಂದ್ರ , ಗಣೇಶ್ ನಂತರ ಮತ್ತೊಬ್ಬ ಕನ್ನಡದ ಹೀರೋ ಆಟೋ ಡೈವರ್​​ಗಳ ಸಾರಥಿ ಪ್ಲಸ್ ಕೀರುತಿಯಾಗಿ ಕಂಗೊಳಿಸಿದ್ದಾರೆ.

ಮಧ್ಯಮ ವರ್ಗದ ಸುಂದರ ನಿಜ ಜಗತ್ತು ‘ಬಡವ ರಾಸ್ಕಲ್’

ಹೆಸರಿಗಷ್ಟೆ ಅಷ್ಟೆ ಬಡವ.. ಆದ್ರೆ ರಂಜನೆಯಲ್ಲಿ ಶ್ರೀಮಂತ

ಒಂದೊಳ್ಳೆ ಸಿನಿಮಾವಾಗಲು ಅದ್ದೂರಿ ತನ, ನೂರಿತ ತಂತ್ರಜ್ಞನರು , ಸ್ಟಾರ್ ನಟ ನಟಿಯರು ಮಾತ್ರ ಇರ್ಲೇ ಬೇಕು ಅಂತೇನು ಇಲ್ಲ.. ಒಳ್ಳೆಯ ಕಥೆ , ಕಥೆಗೆ ತಕ್ಕನಾದ ಸಂಭಾಷಣೆ, ಸಂಭಾಷಣೆಗೆ ಸನ್ನಿವಶೇಷ, ಸನ್ನಿವೇಷಕ್ಕೆ ತಕ್ಕನಾದ ಮ್ಯೂಸಿಕ್, ಜೀವ-ಭಾವ ತುಂಬಿದ ಅಭಿನಯ.. ಇವಿಷ್ಟು ಇದ್ದರೆ ಸಾಕು ಪ್ರೇಕ್ಷಕ ಸಿನಿಮಾವನ್ನ ಆನಂದದಿಂದ ಆರಾಧಿಸುತ್ತಾನೆ, ಪ್ರತಿ ಕ್ಷಣ ತಾವೇ ಪಾತ್ರಗಳಾಗಿ ಅನುಭವಿಸುತ್ತಾನೆ.. ಇವೆಲ್ಲ ಬಡವ ರಾಸ್ಕಲ್ ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ಆಗುತ್ತಿರುವ ಅನುಭವ.. ಒಂದು ಸಿಂಪಲ್ ಕಥೆಯನ್ನ ಸುಂದರವಾಗಿ ಹೇಳೋ ಸಿನಿಮಾವೇ ಬಡವ ರಾಸ್ಕಲ್.


ಡಾಲಿಯ ‘ಬಡವ ರಾಸ್ಕಲ್’ ಒನ್ ಲೈನ್ ಕಥೆ ಏನು?

ಬೇರೆ ಭಾಷೆ ಸಿನಿಮಾಗಳ ಲೆಕ್ಕ ಬೇಡ.. ಕನ್ನಡ ಸಿನಿಮಾ ರಂಗದಲ್ಲೇ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಾಗಿದೆ.. ಎಲ್ಲಿಂದ ಎಷ್ಟು ಅಂತ ಕಥೆ ಕವಿತೆಗಳನ್ನ ತರೋದು ಅನ್ನೋದೆ ರೈಟರ್ಸ್​​ಗಳ ಚಿಂತೆ ತುಂಬಿದ ಸಂತೆ.. ಆದ್ರೆ ನಮ್ಮ ನಮ್ಮಲೆ ಅದ್ರಲೂ ಮಧ್ಯಮ ವರ್ಗದ ಜನರಲ್ಲೇ ಅನೇಕ ಅನೇಕ ಅನನ್ಯ ಕಥೆ ಕವನಗಳು ಬದುಕುನಿಲ್ಲಿ ಬಂದಿರುತ್ತಾವೆ.. ಅಂಥದ್ದೆ ಒಂದು ಕಥೆಯ ಎಳೆಯನ್ನ ನಿರ್ದೇಶಕ ಶಂಕರ್ ಗುರು ಹೆಣೆದಿದ್ದಾರೆ.. ಬಡವ ರಾಸ್ಕಲ್ ತನ್ನ ಜೀವನದ ಕಥೆ ವ್ಯಥೆಯನ್ನ ಹೇಳೋದೆ ಬಡವ ರಾಸ್ಕಲ್.. ಎಂಬಿಎ ಓದಿಕೊಂಡಿರುವ ಶಂಕರ , ತನ್ನ ಕಾಲಮೇಲೆ ತಾನು ನಿಂತು ಸ್ವಂತ ದುಡಿಮೆ ಮಾಡ ಬೇಕು ಅನ್ನೋ ಗುರಿಯಲ್ಲಿದ್ದವ ಪ್ರೀತಿಯ ಝರಿಯಲ್ಲಿ ಜಾರಿದಾಗ ಹೊಡೆತಾಟದಲ್ಲಿ ಆಕಸ್ಮಿಕವಾಗಿ ಸಿಗೋ ಸ್ನೇಹಿತರ ಸಹಕಾರದಿಂದ ಪ್ರೀತಿ ಪ್ಲಸ್ ಜೀವ್ನ ಹೆಂಗ್ ಗೆಲ್ತಾನೆ ಅನ್ನೋದೆ ಬಡವ ರಾಸ್ಕಲ್ ಸಿನಿಮಾ.

ಬಡವನ ಬಳಗದಲ್ಲಿ ಯಾರ ಅಭಿನಯ ಬೊಂಬಾಟು?

ನಿರ್ದೇಶಕ ಶಂಕರ್ ಗುರು ತನ್ನ ಜೀವನದಲ್ಲಿ ನೋಡಿದ ಅನೇಕ ಪಾತ್ರಗಳನ್ನ ಹೆಕ್ಕೆ ಒಂದು ಕಥೆಯಲ್ಲಿ ಹೂಮಾಲೆ ಕಟ್ಟುವಂತೆ ಕಟ್ಟಿದ್ದಾರೆ.. ಕನ್ನಡದ ಮೇಲೆ ಅಭಿಮಾನ , ಸ್ನೇಹ ಪ್ರೀತಿ ತಲೆಭಾಗುವ ಜಾಯಮಾನ , ಪಾಲಿಗೆ ಬಂದದನ್ನ ಸ್ವೀಕರಿಸಿ ಬಿಂದಾಸ್ ಆಗಿರೋ ಶ್ರೀ ಸಮಾನ್ಯನಾಗಿ ಡಾಲಿ ಧನಂಜಯ್ ಶಂಕರ್ ಅಲಿಯಾಸ್ ಬಡವ ರಾಸ್ಕಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ.


ನಾಯಕಿ ಅಮೃತಾ ಅಯ್ಯರ್ , ಹತ್ತಾರು ಜನ ಸ್ನೇಹಿತರು , ಸ್ವರ್ಶ ರೇಖಾ ಇವರೇಲ್ಲ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಆದ್ರೆ ಶಂಕರ್ ಅಲಿಯಾಸ್ ಬಡವ ರಾಸ್ಕಲ್​​​ನ ತಂದೆ ತಾಯಿಯ ಪಾತ್ರದಾರಿ ಕಾಣಿಸಿಕೊಂಡಿರುವ ರಂಗಾಯಣ ರಘು ಹಾಗೂ ತಾರಾ ಅದ್ಭುತವಾಗಿ ನಟಿಸಿದ್ದಾರೆ.. ಸಿನಿಮಾ ನೋಡಿದ ಪ್ರತಿಯೊಬ್ಬರು ನಮ್ಮನೆಯ ತಾಯಿ ನಮ್ಮನೆಯ ತಂದೆ ಎಂದು ಭಾವಿಸ ಬೇಕು ಅಷ್ಟರ ಮಟ್ಟಿಗೆ ಪೊಷಕ ನಟ ರಂಗಾಯಣ ರಘು ಹಾಗೂ ಪೋಷಕ ನಟಿ ತಾರಾ ಜೀವ ಭಾವ ತುಂಬಿ ಅಭಿನಯ ಮಾಡಿದ್ದಾರೆ.



ಡಾಲಿಯ ಬಡವ ರಾಸ್ಕಲ್ ಸಿನಿಮಾ ಶಕ್ತಿ ಯಾರು?

ಬಡವ ರಾಸ್ಕಲ್ ಸಿನಿಮಾ ಸಿಂಪಲ್ ಸೂಪರ್ ಸಿನಿಮಾ.. ಬೆಂಗಳೂರಿನ ಮಿಡಲ್ ಕ್ಲಾಸ್ ಫ್ಯಾಮಿಲಿಯ ಸ್ಟೋರಿ.. ಬೆಂದಕಾಳೂರಿನ ಕನ್ನಡದ ನಗರಗಳಾಗಿರುವ ಶ್ರೀನಗರ , ಗಿರಿನಗರ , ಹನುಮಂತ ನಗರ , ಮೆಜಿಸ್ಟಿಕ್, ಮಾರ್ಕೇಟ್ ಗಳಲ್ಲೇ ಸುತ್ತೋ ಸಿನಿಮಾ.. ನ್ಯಾಚುರಲ್ ಆಗಿ ಪ್ರೀತಾ ಜಯರಾಮನ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.. ವಾಸುಕಿ ವೈಭವ್ ಸಂಗೀತ ಕಿವಿ ಮತ್ತು ಮನಸಿಗೆ ಇಂಪು ಕಂಪನ್ನ ನೀಡುತ್ತದೆ.. ವಾಸುಕಿ ವೈಭವ್ ಕನ್ನಡ ವೈಭವದ ಮ್ಯೂಸಿಕ್ ಡೈರೆಕ್ಟರ್ ಆಗೋದ್ರಲ್ಲಿ ನೋ ಡೌಟ್​.


ಬಡವ ರಾಸ್ಕಲ್ ನೋಡಿದ ಶ್ರೀಮಂತ ಪ್ರೇಕ್ಷಕ ಏನೆಂದ?

ಬಡವರನ್ನ ಪ್ರತಿನಿಧಿಸುವ ಕನ್ನಡದ ಅಭಿಮಾನವನ್ನ ಹೆಚ್ಚಿಸುವ ಬಡವ ರಾಸ್ಕಲ್ ಸಿನಿಮಾ ನೋಡಿದ ಕನ್ನಡ ಶ್ರೀಮಂತ ಪ್ರೇಕ್ಷಕ ಏನೆಂದ ಅನ್ನೋದನ್ನ ನೀವೇ ಕೇಳಿ.


Post a Comment

Previous Post Next Post