ಸಕಲೇಶಪುರ | ಕಾಡಾನೆ ಎದುರು ಗ್ರಾಮಸ್ಥರ ಹುಚ್ಚಾಟ

ಹಾಸನ : ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ.

ಈ ಮಧ್ಯೆ ಗ್ರಾಮದೊಳಗೆ ಎಂಟ್ರಿ ಕೊಟ್ಟ ಕಾಡಾನೆ ಮುಂದೆ ಗ್ರಾಮಸ್ಥರು ಹುಚ್ಚಾಟ ಮೆರೆದಿದ್ದಾರೆ.

ಹಾಸನ ಜಲ್ಲೆಯ ಸಕಲೇಶಪುರ ತಾಲೂಕಿನ ಚಿಕ್ಕನಾಯಕಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು.

ಆನೆಯನ್ನು ಕಂಡ ಗ್ರಾಮಸ್ಥರು ಕಾಡಾನೆ ಮುಂದೆ ಸೆಲ್ಫಿ, ವಿಡಿಯೋ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಗಾಬರಿಗೊಂಡ ಆನೆ ಯುವಕರನ್ನ ಅಟ್ಟಾಡಿಸಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆ ಬಳಿಕ ಆನೆ ಕಾಡಿನತ್ತ ಹೆಜ್ಜೆ ಹಾಕಿದೆ.

Post a Comment

Previous Post Next Post