ಸದ್ದಿಲ್ಲದೇ ಎಂಗೇಜ್ ಆದ ಶ್ಯಾನೇ ಟಾಪಾಗವ್ಳೆ ಬೆಡಗಿ ಅದಿತಿ ಪ್ರಭುದೇವ!

 

ಕನ್ನಡ ಚಿತ್ರರಂಗದಲ್ಲಿ ಕಿರುತೆರೆಯಿಂದ ಸಿನಿ‌ ಜರ್ನಿ ಆರಂಭಿಸಿ, ಬಿಗ್ ಸ್ಕ್ರೀನ್​​ನಲ್ಲಿ ಮಿಂಚುತ್ತಿರುವ ಚಂದವನದದ ಗೊಂಬೆ ನಟಿ ಅದಿತಿ ಪ್ರಭುದೇವ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ..

ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡವುಡ್​ವುಡ್​​ನಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ಅದಿತಿ ಪ್ರಭುದೇವ ಗುಡ್ ನ್ಯೂಸ್ ನೀಡಿದ್ದಾರೆ.


ನಮ್ ಹುಡ್ಗಿ ಶ್ಯಾನೇ ಟಾಪಾಗವ್ಳೆ ಎಂದು ಎಲ್ಲರ ಮನದಲ್ಲಿ ಕಾಲೂರಿದ್ದ ಅದಿತಿ ಪ್ರಭುದೇವ, ಸದ್ದಿಲ್ಲದೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮದುವೆಯಾಗಲಿರುವ ತಮ್ಮ ಹುಡುಗನ ಜೊತೆಗೆ ಇರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ‌.

ದಾವಣಗೆರೆ ಮೂಲದ ಯಶಸ್ ಎಂಬ ಉದ್ಯಮಿಯ ಕೈಹಿಡಿಯಲಿದ್ದು ಒಬ್ಬರಿಗೊಬ್ಬರು ಕೈಹಿಡಿದುಕೊಂಡಿರುವ ಫೋಟೋವನ್ನು ನಟಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಪ್ತರ ಪ್ರಕಾರ, ನಿನ್ನೆ ಹೊಳೆನರಸೀಪುರದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಯಶಸ್ ಕಾಫಿ ಎಸ್ಟೇಟ್ ಹಾಗೂ ಬಿಲ್ಡರ್ ಕೂಡ ಹೌದಂತೆ. ತಂದೆ-ತಾಯಿ ನೋಡಿದ ಹುಡುಗನ ಜೊತೆ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಮಾದ್ಯಮದವರಿಗೆ ತಿಳಿಸಿದ್ದಾರೆ.


ಸದ್ಯ ಅದಿತಿ ಪ್ರಭುದೇವ ಎಂಗೇಜ್​ಮೆಂಟ್ ಮಾಡಿಕೊಂಡಿರುವ ಹುಡುಗನ ಜೊತೆ ಫೋಟೋ ಹಾಕಿಕೊಂಡು, 'ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್​ ಆಗಿದೆ.

ಇನ್ನು ಅದಿತಿ ಹಾಕಿರುವ ಫೋಟೋಗೆ ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ‌. ಇತ್ತೀಚೆಗೆ ಅದಿತಿ ಪ್ರಭುದೇವ ಅಭಿನಯದ ಆನ ಸಿನಿಮಾ ತೆರೆಗೆ ಬಂದಿತ್ತು. ಆದರೆ, ಸ್ಟಾರ್ ಸಿನಿಮಾಗಳ ಮಧ್ಯೆ, ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.



Post a Comment

Previous Post Next Post