ಬೇಲೂರು : ಕೊವಿಡ್ ಇಂದ ಮೃತಪಟ್ಟ ವ್ಯಕ್ತಿಗಳ ಪೋಷಕರಿಗೆ ಸರ್ಕಾರದ ನಿಯಮಾನುಸಾರ ಈವರಗೆ ೩೯ ಲಕ್ಷರೂ.ಗಳನ್ನು ವಿತರಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ಯು.ಎಂ.ಮೋಹನಕುಮಾರ್ ತಿಳಿಸಿದರು.
ಬೇಲೂರಿನಲ್ಲಿ ಕೊವಿಡ್ ಇಂದ ಮೃತಪಟ್ಟವರ ಕುಟುಂಬಸ್ಥರಿಗೆ ತಹಸೀಲ್ದಾರ್ ಚಕ್ ವಿತರಿಸಲಾಯಿತು |
ತಹಸೀಲ್ದಾರ್ ಕಚೇರಿಯಲ್ಲಿ ಫಲಾನುಭವಿಗಳಿಗೆ ಚಕ್ ವಿತರಿಸಿ ಮಾತನಾಡಿದ ಅವರು, ನಿನ್ನೆ ೩೬ ಜನರಿಗೆ ತಲಾ ಒಂದು ಲಕ್ಷರೂ.ನಂತೆ ನೀಡಲಾಗಿದೆ. ಇಂದು ೩ ಜನ ಬಿಪಿಎಲ್ ಅರ್ಹ ಫಲಾನುಭವಿಗಳಿಗೆ ಚಕ್ ವಿತರಿಸಿದ್ದೇವೆ ಎಂದು ಹೇಳಿದರು.