ಬೇಲೂರು :
ಸಂಗೊಳ್ಳಿರಾಯಣ್ಣ ಪುತ್ಥಳಿ ಭಗ್ನಗೊಳಿಸಿದ ಘಟನೆಯನ್ನು ಇಲ್ಲಿನ ಸಂಗೊಳ್ಳಿರಾಯಣ್ಣ ಅಭಿಮಾನಿಗಳು ಖಂಡಿಸಿದ್ದಾರೆ.
ಬೇಲೂರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಗೊಳ್ಳಿರಾಯಣ್ಣ ಅಭಿಮಾನಿಗಳು |
ಪುತ್ಥಳಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಪುರಸಭ ಮಾಜಿ ಸದಸ್ಯ ಬಿ.ಎಲ್.ಧರ್ಮೇಗೌಡ, ಘಟನೆ ಖಂಡಿಸಿ ಪ್ರತಿಭಟನೆ ಮಾಡುವ ಉದ್ದೇಶವಿತ್ತು. ಕಾರಣಾಂತರದಿಂದ ಪ್ರತಿಭಟನೆ ಕೈಬಿಟ್ಟು ಮನವಿ ಪತ್ರದ ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದರು.
ಸಂಗೊಳ್ಳಿರಾಯಣ್ಣ ಸಮಿತಿ ಅಧ್ಯಕ್ಷ ಜಯರಾಂ ಮಾತನಾಡಿ, ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನ ಮಾಡಿರುವ ಎಂಇಎಸ್ ಪುಂಡರನ್ನು ಗಿಡಪಾರು ಮಾಡಬೇಕು. ಸಂಗೊಳ್ಳಿರಾಯಣ್ಣ ಭಾರತದೇಶದ ಆಸ್ತಿಯಾಗಿದ್ದು ಇಂತಹವರಿಗೆ ಅವಮಾನ ಮಾಡಿರುವುದನ್ನು ಖಂಡಿಸುತ್ತೇವೆ. ನಮ್ಮ ನೆಲ, ಜಲದಿಂದ ಬದುಕುತ್ತಿರುವ ಎಂಇಎಸ್ ಪುಂಡರು ನಮ್ಮ ವಿರುದ್ಧವೆ ಕತ್ತಿ ಮಸೆಯುತ್ತಿದ್ದಾರೆ. ಇಂತಹವರ ಮೇಲೆ ನಿರ್ಧಾಕ್ಷö್ಯಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಗ್ರಾ.ಪಂ.ಸದಸ್ಯರಾದ ಪ್ರಸನ್ನ, ನಾಗರಾಜ್, ಮಧು, ಎಪಿಎಂಸಿ ನಿರ್ದೇಶಕ ನರಸಿಂಹೇಗೌಡ, ಪ್ರಮುಖರಾದ ಶಿವು (ಕಪ್ಪೆ), ಚಂದ್ರೇಗೌಡ ಇತರರು ಇದ್ದರು.