ಬೇಲೂರು :
ಕಾರ್ಮಿಕರ ಒಂದೊಪ್ಪತ್ತಿನ ದುಡಿಮೆಗೆ ತೊಂದರೆ ಆದರೂ ಕಷ್ಟ. ಇದನ್ನು ಅರಿತ ಆರೋಗ್ಯ ಇಲಾಖೆ ನೌಕರರು ಕಾರ್ಮಿಕರ ಮನೆ ಬಳಿಗೆ ರಾತ್ರಿವೇಳೆ ತೆರಳಿ ರಕ್ತ ಸಂಗ್ರಹಿಸಿದ್ದಾರೆ.
ಬೇಲೂರು ತಾ.ಮರೂರು ಬಳಿ ಮರದ ಸಾಮಿಲ್ ಕಾರ್ಮಿಕರಿಂದ ಮಲೇರಿಯಾ ಮತ್ತು ಫೈಲೇರಿಯಾ ರೋಗದ ಪರೀಕ್ಷೆಗಾಗಿ ರಕ್ತ ಸಂಗ್ರಹಿಸಲಾಯಿತು |
ತಾಲ್ಲೂಕಿನ ಮರೂರು ಸಮೀಪದ ಮರದ ಸಾಮಿಲ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ೧೪೮ ವಲಸೆ ಕಾರ್ಮಿಕರಿಗೆ ಮಲೇರಿಯಾ ಹಾಗೂ ಫೈಲೇರಿಯಾ ರೋಗದ ಪತ್ತೆ ಕುರಿತು ರಕ್ತಸಂಗ್ರಹ ಮಾಡಲಾಗಿದೆ.
ಹಗಲಿನಲ್ಲಿ ದುಡಿಮೆಗೆಂದು ಸಾಮಿಲ್‌ಗೆ ತೆರಳುವ ಕಾರ್ಮಿಕರು ಮನೆಗೆ ವಾಪಸ್ ಬರುವುದು ರಾತ್ರಿಯಾದಮೇಲೆ. ಇದನ್ನು ಅರಿತ ಆರೋಗ್ಯ ಇಲಾಖೆಯ ನೌಕರರು, ಕಾರ್ಮಿಕರ ದಿನದ ದುಡಿಮೆಗೆ ತೊಂದರೆ ಆಗದಂತೆ ಕಾರ್ಮಿಕರು ಮನೆಗೆ ಬಂದು ಊಟ ಮಾಡಿದ ನಂತರ ರಾತ್ರಿ ೧೧ ಗಂಟೆ ಸಮಯದಲ್ಲಿ ತೆರಳಿ ರಕ್ತ ಸಂಗ್ರಹಿಸಿದ್ದಾರೆ.
ಗೆAಡೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮರೂರು ಹಾಗೂ ಸಿಂಗಾಪುರಪೇಟೆಗೆ ಸೇರಲಿರುವ ಮರೂರು ಬಳಿ ಇರುವ ಮರದ ಸಾಮಿಲ್‌ಗಳಲ್ಲಿನ ೧೪೮ ಕಾರ್ಮಿಕರಿಂದ ರಕ್ತದ ಮಾದರಿ ಪಡೆಯಲು ಡಾ.ಸಂಕೇತ್ ಅವರ ನೇತೃತ್ವದಲ್ಲಿ ೩ ತಂಡದಲ್ಲಿ ಆರೋಗ್ಯ ಇಲಾಖೆ ನೌಕರರು ಕಾರ್ಯನಿರ್ವಹಿಸಿದ್ದಾರೆ.
ರಕ್ತದ ಮಾದರಿ ಪಡೆಯುವ ವೇಳೆ ಯಾರೊಬ್ಬರಲ್ಲೂ ರೋಗಲಕ್ಷಣಗಳು ಕಂಡುಬAದಿಲ್ಲವಾದರೂ ಎಲ್ಲರ ರಕ್ತದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಿಕೊಡಲಾಗುತ್ತಿದೆ ಎಂದು ವೈದ್ಯರಾದ ಡಾ.ಸಂಕೇತ್ ತಿಳಿಸಿದ್ದಾರೆ. ತಂಡದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಚಂದ್ರಮ್ಮ, ಪ್ರಯೋಗಶಾಲಾ ತಂತ್ರಜ್ಞರಾದ ಯೋಗೇಶ್ ಹಾಗೂ ಶಂಭುಗೌಡ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ವಿಜಯಲಕ್ಷಿö್ಮÃ, ತನುಜ, ಶ್ವೇತ, ಮಲ್ಲಿಗಮ್ಮ, ಜಯಲಕ್ಷಿö್ಮÃ, ಅಲೋನ್ ಮತ್ತು ಗೆಂಡೇಹಳ್ಳಿ ಪ್ರಾ.ಆ.ಕೇಂದ್ರದ ಡಿ.ಗ್ರೂಫ್ ನೌಕರರು, ಆಶಾ ಕಾರ್ಯಕರ್ತೆಯರು ಇದ್ದರು. ಚಿಕ್ಕಮೇದೂರು ಗ್ರಾ.ಪಂ. ಆಡಳಿತದ ಸಹಕಾರದಿಂದ ಈ ಕಾರ್ಯಕ್ರಮ ನಡೆಯಿತು.