ಬೇಲೂರು : ರಾಜ್ಯ ಬಿಜೆಪಿ ಮಹಿಳಾ ಘಟಕದ ಕೋಶಾಧ್ಯಕ್ಷೆ ಹಾಗೂ ಉದ್ಯಮಿ ಸುರಭಿರಘು ಅವರು ತಮ್ಮ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸುವ ಮೂಲಕ ಆಚರಿಸಿಕೊಂಡರು.
ಬೇಲೂರಿನಲ್ಲಿ ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುರಭಿರಘು ಅವರು ತಮ್ಮ ಹುಟ್ಟು ಹಬ್ಬವನ್ನು ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸುವ ಮೂಲಕ ಆಚರಿಸಿಕೊಂಡರು |
ಮೊದಲಿಗ ಶ್ರೀಚನ್ನಕೇಶವಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ಆನಂತರ ದೇಗುಲದ ಮುಂಭಾಗದ ಆವರಣದಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಪ್ರಮುಖರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ಶುಭಕೋರಿದರು. ಹುಟ್ಟು ಹಬ್ಬದ ಅಂಗವಾಗಿ ಜಾವಗಲ್ ಗ್ರಾಮದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ಸುರಭಿರಘು ಅವರು, ಪ್ರತಿವರ್ಷನೂ ಹುಟ್ಟುಹಬ್ಬ ಬರುತ್ತದೆ. ಇಂದು ನನ್ನ ಹುಟ್ಟು ಹಬ್ಬವನ್ನು ನನ್ನ ತೌವರು ಮನೆಯಲ್ಲಿ ಆಚರಿಸಿಕೊಳ್ಳುತ್ತಿರುವುದು ಸಂತೋಷವಾಗಿದೆ. ನನಗೆ ಸಮಾಜಸೇವೆ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದು ಶ್ರೀಚನ್ನಕೇವವಸ್ವಾಮಿ ದೇವರಲ್ಲಿ ಕೇಳಿಕೊಂಡು ಪೂಜೆ ಸಲ್ಲಿಸಿದ್ದೇನೆ. ಈ ಕ್ಷೇತ್ರದ ಜನರ ಕಷ್ಟಸುಖದಲ್ಲಿ ನಾನು ಭಾಗಿಯಾಗುವಂತೆ ನನಗೆ ಆಶೀರ್ವದಿಸಲಿ ಎಂದರು.
ನನ್ನ ಹುಟ್ಟು ಹಬ್ಬದ ಅಂಗವಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಗುತ್ತಿದೆ. ಜಾವಗಲ್‌ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ೫ ಶಾಲೆಗಳಿಗೆ ಪುಸ್ತಕ ವಿತರಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭ ತಾಲ್ಲೂಕು ಮಹಿಳಾ ಬಿಜೆಪಿ ಘಟಕದ ಅಧ್ಯಕ್ಷೆ ಶೋಭಗಣೇಶ್, ತಾ.ಪಂ.ಸದಸ್ಯ ಶಶಿಧರ್, ಡಾ.ವಿಜಯ್, ಉಧ್ಯಮಿ ಸಂತೋಷ್, ಗ್ರಾ.ಪಂಸದಸ್ಯೆ ಸುಜಾತ, ಪ್ರಮುಖರಾದ ಶಮಂತ್, ತೀರ್ಥಕುಮಾರಿ ದೇಗುಲದ ಸಮಿತಿ ಸದಸ್ಯೆ ವಿಜಯಲಕ್ಷಿö್ಮÃ ಇತರರು ಇದ್ದರು.