ಮನುಷ್ಯ ನಾನು-ನಾನು ಎನ್ನದೇ ನಾವು ಎಂದರೇ ಯಾವುದೇ ದ್ವೇಷ ಕಲಹಗಳು ಬರುವುದಿಲ್ಲ.

ಹಾಸನ-.   ಮಾನವ ಕಾಯಕಯೋಗಿ ಅಗಬೇಕು, ತನ್ನ ಕಾಯಕದಿಂದ ತನ್ನನ್ನು ಗುರುತಿಸಬೇಕು, ವಿಶ್ವದ ಶ್ರೇಷ್ಥ ಸಂವಿಧಾನದಲ್ಲಿರುವ ವಿಷಯಗಳಲ್ಲ ಅಂದಿನ ವಚನಗಳಲ್ಲಿ ಅಡಕವಾಗಿದ್ದವು, ಮನುಷ್ಯ ನಾನು-ನಾನು ಎನ್ನದೇ ನಾವು ಎಂದರೇ ಯಾವುದೇ ದ್ವೇಷ ಕಲಹಗಳು ಬರುವುದಿಲ್ಲ.

ಕನ್ಮಡ ನಾಡಿನೆಲ್ಲಡೆ ಶರಣರ ವಿಚಾರಧಾರೆಗಳು ಹಾಗೂ ಪ್ರವಚನಗಳನ್ನು ನೀಡಿವ ಮೂಲಕ ಸಮಾಜದಲ್ಲಿ ಸಾಮರಸ್ಯದ ಬೀಜವನ್ನು ಬಿತ್ತಲು ಶ್ರಮಿಸಿದ ಸಮಾನತೆಯ ಮತ್ತು ಭಾವೈಕ್ಯತೆಯ  ಸಂದೇಶಗಳನ್ನು ಸಾರಿದ ಸಂತರು 12  ನೇ ಶತಮಾನದವರು  ಎಂದು ಹಾಸನ ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಡಾ. ಎಚ್.ಎಲ್ ಮಲ್ಲೇಶಗೌಡರು ತಿಳಿಸಿದರು.


ಹಾಸನ ತಣ್ಣೀರುಹಳ್ಳ ಮಠದಲ್ಲಿ  ಲಿಂ. ಗಂಗಮ್ಮನವರ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಶರಣರ ವಿಚಾರಧಾರೆಗಳನ್ನು ಬಿತ್ತುತ್ತಿರುವ ಸುತ್ತೂರು ಮಠದ ಸ್ವಾಮೀಜಿಯವರು  ಶರಣ ಸಾಹಿತ್ಯ ಪರಿಷತ್ತನ್ನು  ಶ್ಲಾಘಿಸಿದರು. 

ತಣ್ಣೀರುಹಳ್ಳ  ಮಠದ ಶ್ರೀ ವಿಜಯಕುಮಾರಸ್ವಾಮಿ ಅವರು ಅರ್ಶಿವಚನ ನೀಡಿದ ಅವರು  ಬಸವಾದಿ ಶರಣರು ಕಟ್ಟಕಡೆಯ ವ್ಯಕ್ತಿಯ ಕಡೆಗೂ ಗಮನ ಹರಿಸಿದವರು. ಕಲಬೇಡ ಕಲಬೇಡ ಈ ವಚನ ಇಡಿ ಮಾನವ ಕುಲಕ್ಕೆ  ಅನ್ವಯವಾಗುತ್ತದೆ. ೧೨ ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಆಧ್ಯ ಸ್ಥಾನವನ್ನು ಕೊಟ್ಟಿದ್ದು ನಮ್ಮ ಬಸವಾದಿ ಶರಣರು ಇಂತಹ ವಚನಗಳನ್ನು ನಾವೆಲ್ಲರೂ ಮನೆ-ಮನೆಗೂ ತಲಪಿಸಬೇಕಾಗಿದೆ ಎಂದರು.  

ಸುತ್ತೂರು ಶ್ರೀ ಶಿವರಾತ್ರಿ ಧಾರ್ಮಿಕ ಧತ್ತಿ ಶ್ರೀ ಸೋಮಶೇಖರಸ್ವಾಮಿಜಿ  ಅರ್ಶಿಚನ ನೀಡಿ  ವಚನಗಳನ್ನು ರಚಿಸಿ ಇಂದಿನವರೆಗೂ ಕಾರಣರಾದ   ಫ. ಗು. ಹಳಕಟ್ಟಿ ಅವರನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಶರಣ ಸಾಹಿತ್ಯ ಪರಿಷತ್ತು ಪ್ರಾರಂಭವಾದ ಬಗ್ಗೆ ಮತ್ತೆ ನಡೆದು  ಸಾಗಿಬಂದ ವಿಚಾರಗಳನ್ನು ತಿಳಿಸಿದರು. 

ಈ ಸಂದರ್ಭದಲ್ಲಿ ಶರಣೆ ಸೌಭಾಗ್ಯ ನಿರೂಪಿಸಿದರು , ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ,  ಉಪಾಧ್ಯಕ್ಷರು ಡಾ. ಪಾಟೀಲ್, ಜಿಲ್ಲಾ ಸಂಚಾಲಕರು ಕಟ್ಟಾಯ ಶಿವಕುಮಾರ್, ಬೇಲೂರು ತಾ. ಅಧ್ಯಕ್ಷರು ಬಿ.ಎಲ್. ರಾಜೇಗೌಡ, ಹಾಸನ ತಾಲ್ಲೂಕು ಪಿ.ಎಂ. ಪುಟ್ಟರಾಜು,  ಚನ್ನರಾಯಪಟ್ಟಣ ತಾಲ್ಲೂಕಿನ ಅಧ್ಯಕ್ಷರು ರುದ್ರಸ್ವಾಮಿ,  ಅರಸೀಕೆರೆ ತಾಲ್ಲೂಕು ಅಧ್ಯಕ್ಷರು  ಸಂಕೋಡ್ನಳ್ಳಿ ಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕೊಣನೂರು ಕೆ.ಎಸ್.  ಲೋಕೇಶ್,  

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರು ಎಂ.ಅರ್. ತೀರ್ಥ ಕುಮಾರಿವೆಂಕಟೇಶ್,ಹಾಸನ ತಾಲ್ಲೂಕು ಅಧ್ಯಕ್ಷರು  ಕಲಾವತಿಮಧುಸೂಧನ್,  ಅರಕಲಗೂಡು ತಾಲ್ಲೂಕು ಅಧ್ಯಕ್ಷರು ಎಂ.ಕೆ. ಕುಮಾರಿಪ್ರಸಾದ್, ಸಕಲೇಶಪುರ ತಾಲ್ಲೂಕು ಅಧ್ಯಕ್ಷರು ಮೀನಾಕ್ಷಿಖಾದರ್, ಬೇಲೂರು ತಾಲ್ಲೂಕು ಅಧ್ಯಕ್ಷರು ಹೇಮಾ ವಿರೂಪಾಕ್ಷ, ಬೇಲೂರು ತಾ. ಧನಂಜಯ, ತಾಲೂಕು ಯುವ ಘಟಕದ ಅಧ್ಯಕ್ಷ ಆರ್ ಎಸ್  ಮಹೇಶ್ ಜೆ.ಎಸ್.ಎಸ್. ಶಿಕ್ಷಕ ಪಂಚಾಕ್ಷರಿ, ಯುವ ವೇದಿಕೆ ಕಾರ್ಯದರ್ಶಿ ಧರ್ಮ ಮುಂತಾದವರು ಇದ್ದರು. 


.

Post a Comment

Previous Post Next Post