ಬೇಲೂರು : ಇಲ್ಲಿನ ಸರ್ಕಾರಿ ಆಸ್ಪತ್ರೆಯಿಂದ ಹಾಸನಕ್ಕೆ ವರ್ಗಗೊಂಡ ಡಾ.ನರಸೇಗೌಡ ದಂಪತಿಗಳಿಗೆ ಪುರಸಭೆಯಲ್ಲಿ ಪೌರಸನ್ಮಾನ ನೀಡಲಾಯಿತು.
| ಬೇಲೂರಿನಲ್ಲಿ ಪುರಸಭೆಯಿಂದ ಡಾ.ನರಸೇಗೌಡರಿಗೆ ಪೌರಸನ್ಮಾನ ನೀಡಲಾಯಿತು |
ಸನ್ಮಾನಿಸಿದ ಶಾಸಕ ಕೆಎಸ್.ಲಿಂಗೇಶ್ ಮಾತನಾಡಿ, ಡಾ.ನರಸೇಗೌಡರು, ವೈದ್ಯಕೀಯ ಸೇವೆ ಮಹತ್ವ ಜನರಿಗೆ ತಲುಪಿಸಿದ್ದಾರೆ. ರೋಗಿಗಳಿಗೆ ಧೈರ್ಯ ತುಂಬುವುದು, ಸ್ವಚ್ಛತೆಗೆ ಗಮನ ಹರಿಸಿದ್ದಾರೆ. ಕೊರೊನಾ ಸಂದರ್ಭ ಹೆಚ್ಚು ಶ್ರಮವಹಿಸಿದ್ದಾರೆ. ನಗರೋತ್ಥಾನದಲ್ಲಿ ೧೦ ಕೋಟಿ ರೂ. ೧೫ನೇ ಹಣಕಾಸು ಯೋಜನೆಯಲ್ಲಿ ೧೦ ಕೋಟಿ ರೂ, ಮುಖ್ಯಮಂತ್ರಿ ಅನುದಾನದಲ್ಲಿ ೧೪ ಕೋಟಿ ರೂ. ಬಳಕೆ ಆಗಲಿದೆ. ಹೊಳೆಬೀದಿಯಲ್ಲಿ ಬದಲಿ ರಸ್ತೆ ಅಭಿವೃದ್ಧಿಗಾಗಿ ಈ ಬಜೆಟ್‌ನಲ್ಲಿ ೫೦ ಕೋಟಿ ರೂ. ಮೀಸಲಿಡಲಿದ್ದಾರೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಸಮುದಾಯ ಭವನವನ್ನು ೧ ಕೋಟಿರೂ.ಗಳಲ್ಲಿ ನವೀಕರಣಗೊಳಿಸಲಾಗಿದೆ. ಜೂನಿಯರ್ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ, ಮಿನಿವಿಧಾನಸೌದಧ ಮುಂದೆ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಪ್ರಾಸ್ಥವಿಕವಾಗಿ ಮಾತನಾಡಿದ ಸದಸ್ಯ ಜಿ.ಶಾಂತಕುಮಾರ್, ಡಾ.ನರಸೇಗೌಡರು ಹಾಗೂ ಡಾ.ವಿಜಯ್ ಅವರು ಕೋವಿಡ್ ಸಮಯದಲ್ಲಿ ಉತ್ತಮ ಸೇವೆ ಮಾಡಿದ್ದು ಪುನಃ ಬೇಲೂರಿಗೆ ಬರಲಿ ಎಂದರು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆAಕಟೇಶ್, ಸರ್ಕಾರಿ ಆಸ್ಪತ್ರೆ ಉತ್ತಮವಾಗಿದ್ದು ಡಾ.ನರಸೇಗೌಡರ ಸೇವೆ ಇನ್ನಷ್ಟು ಸಿಗಲಿ ಎಂದರೆ, ತಾ.ವೈದ್ಯಾಧಿಕಾರಿ ಡಾ.ವಿಜಯ್, ಡಾ.ನರಸೇಗೌಡರ ಪರಿಚಯ ಇಲ್ಲದವರಿಲ್ಲ, ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು ಕಣ್ಣಿನ ಕ್ಯಾಂಪ್ ಸಹ ನಡೆಯುತ್ತಿದೆ. ಈಗಿನ ಆಸ್ಪತ್ರೆಯನ್ನು ತಾಯಿಮಕ್ಕಳ ಆಸ್ಪತ್ರೆಯನ್ನಾಗಿ ಉಳಿಸಿಕೊಂಡು, ಬೇರೆ ಸ್ಥಳದಲ್ಲಿ ಸುಸಜ್ಜಿತ ಆಸ್ಪತ್ತೆ ನಿರ್ಮಾಣಗೊಂಡರೆ ಇನ್ನಷ್ಟು ಅನುಕೂಲ ಆಗಲಿದೆ. ಡಾ.ನರಸೇಗೌಡರು ಡೆಪ್ಯೂಟೇಷನ್ ಮೇಲೆ ಬೇಲೂರಿಗೆ ಬರಬಹುದಾಗಿದೆ ಎಂದರು.
ಸನ್ಮಾನಿತರಾದ ಡಾ.ನರಸೇಗೌಡ ಸೇವಾವಧಿಯ ಕೆಲವೊಂದು ಮಾಹಿತಿ ನೀಡಿದರು. ಗ್ರಾಮೀಣ ಸಿಪಿಐ ಶ್ರೀಕಾಂತ್, ಎಸ್‌ಐ ಎಸ್‌ಜಿ.ಪಾಟೀಲ್, ಪುರಸಭ ಉಪಾಧ್ಯಕ್ಷೆ ರತ್ನಮ್ಮ, ಡಾ.ಚಂದ್ರಮೌಳಿ, ತಾ.ಪಂ. ಇಒ ರವಿಕುಮಾರ್, ಡಾ.ರಾಜೀವ್, ಸನ್ಮಾನಿತರಾದ ಡಾ.ಅನುಪಮ, ಡಾ.ಸತೀಶ್, ಡಾ.ರಘುಚರಣ್, ಸಿಒ ಸುಜಯಕುಮಾರ್, ಸದಸ್ಯ ಜಮಾಲುದ್ದೀನ್ ಹಾಗೂ ಎಲ್ಲಾ ಸದಸ್ಯರು, ನೌಕರರು ಹಾಜರಿದ್ದರು.