ಬೇಲೂರು : ತಾಲೂಕಿನ ಹಳೇಬೀಡು ಹೋಬಳಿಯ ಬಂಡಿಲಕ್ಕನಕೊಪ್ಪಲು ಗ್ರಾಮದಲ್ಲಿ ಸಂತ ಶ್ರೀ ಸೇವಾಲಾಲ್ ರ 283 ನೇ ಜಯಂತ್ಯೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು.
ಬೇಲೂರು ತಾಲ್ಲೂಕು ಬಂಡಿಲಕ್ಕನಕೊಪ್ಪಲಿನಲ್ಲಿ ಸಂತಸೇವಾಲಾಲ್ ಜಯಂತಿ ಆಚರಿಸಲಾಯಿತು |
ಶಾಸಕ ಕೆ.ಎಸ್.ಲಿಂಗೇಶ್ ಅವರನ್ನು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸಂತ ಶ್ರೀ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು ಮಾತನಾಡಿ, ಅತೀ ಪುರಾತನ ಸಂಸ್ಕೃತಿ, ಸಂಸ್ಕಾರ ಹಾಗೂ ಪುರಾತನ ಕಲೆ ಹೊಂದಿರುವಂತ ಸಮಾಜ ಬಂಜಾರ ಸಮಾಜ. ಈ ಸಮಾಜ ದೇಶದೆಲ್ಲೆಡೆ ಪಸರಿಸಿ ಎಲ್ಲರ ಜೊತೆ ಸಹಬಾಳ್ವೆ ಮಾಡುತ್ತಾ ಜೀವಿಸುತ್ತಿದ್ದು ಹೆಚ್ಚಿನ ಭಾಗ ಕೃಷಿ ಅವಲಂಬಿತರಾಗಿದ್ದಾರೆ. ದೇಶಕ್ಕೇ ಅನ್ನ ನೀಡುವ ಕಾಯಕಕ್ಕೆ ಕೈ ಜೋಡಿಸಿದ್ದಾರೆ ಎಂದರು.
ಇದೆ ವೇಳೆ ಆಲ್ ಇಂಡಿಯಾ ಬಂಜಾರ ಸಂಘದ ತಾಲೂಕು ಅಧ್ಯಕ್ಷ ಚಂದ್ರಾನಾಯಕ್ ನೀಡಿದ ಮನವಿಗೆ ಸ್ಪಂಧಿಸಿದ ಶಾಸಕರು ಈಗಾಗಲೆ ಮರಿಯಮ್ಮ ದೇವಸ್ಥಾನ ಕಟ್ಟಲು 5 ಲಕ್ಷ ರೂ ಅನುದಾನ ನೀಡಿದ್ದು, ಈಗ ಕೇಳಿರುವ ಗ್ರಂಥಾಲಯ, ನ್ಯಾಯಬೆಲೆ ಅಂಗಡಿ, ಬಂಜಾರ ಸಾಂಸ್ಕೃತಿಕ ಭವನ ಹಾಗೂ ಒಂದು ನಿವೇಶನವನ್ನು ನನ್ನ ಅವಧಿಯಲ್ಲೇ ಹಂತ ಹಂತವಾಗಿ ನೀಡುವುದಾಗಿ ತಿಳಿಸಿದರು.
ನಂತರ ಮಾತನಾಡಿದ AIBSS ನ ಜಿಲ್ಲಾದ್ಯಕ್ಷ ಸೋಮನಾಯಕ್, ಬಂಜಾರ ಸಂಸ್ಕೃತಿ ಪ್ರಪಂಚದ ಅತ್ಯಂತ ಪುರಾತನ ಸಮಾಜವಾಗಿದ್ದು, ಹರಪ್ಪಾ ಮೆಹೆಂಜೊದಾರೊ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂಥ ಏಕೈಕ ಸಮಾಜವಾಗಿದೆ ಎಂದು ಹೇಳಿದರು. ಈ ಸಂದರ್ಭ ಬಂಜಾರ ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಬಾಯಿ, ಶಾಸಕರ ಆಪ್ತ ಕಾರ್ಯದರ್ಶಿ ತಾರಾನಾಥ್, ಪುಣ್ಯಕೋಟಿ ಟ್ರಸ್ಟ್ ನ ವ್ಯವಸ್ಥಾಪಕರು ಹಾಗೂ ಸಮಾಜಸೇವಕ ತೊಳಚಾನಾಯಕ್, AIBSS ಹಾಸನ ಜಿಲ್ಲಾ ಕಾರ್ಯಕ್ರಮ ಕಾರ್ಯದರ್ಶಿ ಸುರೇಶ್ ಅ.ಭೀ ಹಾಗೂ AIBSS ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಗೂ ಊರಿನ ಪ್ರಮುಖರು ಹಾಜರಿದ್ದರು.