ಪೂರ್ವಜರ ಕಾಲದಿಂದಲೂ ಪ್ರತಿವರ್ಷ ಬೆಳೆಕುಯಿಲು ವೇಳೆ ಪೂಜೆ ಸ್ವಪ್ನದಲ್ಲಿನ ಸೂಚನೆಯಂತೆ ಪೂಜೆ ನೆರವೇರಿಸಿದ ಅನ್ಯಧರ್ಮೀಯರು

ಬೇಲೂರು : ಯಾವುದೇ ಧರ್ಮವಾಗಿರಲಿ ಒಂದು ನಂಬಿಕೆ ಆಧರಿಸಿಯೆ ಇರುತ್ತದೆ. ಅತೀವ ನಂಬಿಕೆ ಮನುಷ್ಯನ ಬದುಕನ್ನೇ ಬದಲಾಯಿಸುತ್ತದೆ.

ಬೇಲೂರಿನ ದೀನದಯಾಳು ಬಡಾವಣೆಯ ನಿವೇಶನವೊಂದರಲ್ಲಿ ಪೂಜೆ ಸಲ್ಲಿಸುತ್ತಿರುವ ರಿಯಾಜ್‌ಪಾಷ ಕುಟುಂಬ ಹಾಗೂ ಮಲ್ಲಿಕಾರ್ಜುನ ಗ್ರೂಫ್ಸ್ ಕುಟುಂಬ ಸದಸ್ಯರು ಮತ್ತು ರಿಯಾಜ್ ಕುಟುಂಬಸ್ಥರನ್ನು ಗೌರವಿಸಿರುವುದು

ಇಂತಹದ್ದೊಂದು ಬೆಳವಣಿಗೆ ಬೇಲೂರು ಪಟ್ಟಣದಲ್ಲಿ ಜರುಗಿದೆಯೆಂದರೆ ಆಶ್ಚರ್ಯವಾಗದೇ ಇರದು. ಆದರೂ ಇದು ಸತ್ಯ-ವಾಸ್ತವ. ದೇವರ ಬಗ್ಗೆ ತಮ್ಮಲ್ಲಿರುವ ಆಳವಾದ ನಂಬಿಕೆಯಿಂದಾಗಿ ಸ್ವಪ್ನದಲ್ಲಿ ಕಾಣಿಸಿಕೊಂಡ ದೇವರ ಅಣತಿಯಂತೆ ಅನ್ಯಧರ್ಮೀಯ ಕುಟುಂಬಸ್ಥರು ದೇವರಿಗೆ ಪೂಜೆ ಸಲ್ಲಿಸಿದ ಅಪರೂಪದ ಪ್ರಸಂಗವೊಂದರ ಚಿತ್ರಣವಿದು.


ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿರುವ ದೀನದಯಾಳುಬಡಾವಣೆಯಲ್ಲಿ ಶ್ರೀಚನ್ನಕೇಶವಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿಯನ್ನು ಬೇಲೂರಿನ ಭಾಷಾಸಾಹೇಬ್ ಎನ್ನುವವರು ಪೂರ್ವಜರ ಕಾಲದಿಂದಲೂ ಜಮೀನು ಉಳುಮೆ ಮಾಡಿಕೊಂಡಿದ್ದರು. ಅಂದಿನಿಂದಲೂ ಈ ಜಮೀನಿನ ಬಳಿ ಜಂಟಿಯಾಗಿದ್ದ ನೇರಲೆ ಹಾಗೂ ಆಲದ ಮರದ ಬಳಿ ದೇಗುಲಕ್ಕೆ ಸಂಬಂಧಿಸಿದ ಶಿಲೆಯೊಂದಿದ್ದು ಅದನ್ನು ಬಹಳ ವರ್ಷದಿಂದಲೂ ಭಾಷಾಸಾಹೇಬ್ ಕುಟುಂಬದವರು ಪ್ರತಿವರ್ಷ ಭತ್ತ, ಬಾಳೆ ಇನ್ನಿತರ ಬೆಳೆ ಕುಯಲು ಸಂದರ್ಭ ಶುಕ್ರವಾರ ಅಥವಾ ಮಂಗಳವಾರ ಶ್ರೀಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಸಿ ಬೆಳೆ ಕುಯಲು ಆರಂಭಿಸುವುದು ನಡೆದುಬಂದಿದ್ದ ಪದ್ಧತಿ. 


ವಿಶೇಷ ಎಂದರೆ ಈ ಜಮೀನಿನ ಬಳಿ ದೊಡ್ಡದಾದ ಮುಖದಲ್ಲಿ ಕೂದಲನ್ನು ಹೊಂದಿದ್ದ ದಪ್ಪನಾದ ಹಾವೊಂದು ಕಾಣಿಸಿಕೊಳ್ಳುತ್ತಿತ್ತಂತೆ. ಇದನ್ನು ದೇವರ ಹಾವೆಂದು ನಂಬಿದ್ದ ಸ್ವತಃ ರಿಯಾಜ್‌ಪಾಷ ಹಾಗೂ ಜಮೀನಿನಲ್ಲಿ ಕೆಲಸ ಮಾಡಲು ಬರುತ್ತಿದ್ದ ವೆಂಕಟೇಶ್ ಎಂಬುವರು ದೃಢಿಪಡಿಸಿದ್ದಾರೆ. 


ಡಿ.ದೇವರಾಜಅರಸು ಅವರು ಮುಖ್ಯಮಂತ್ರಿ ಆಗಿದ್ದಂತ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ನಿಯಮದಡಿ ಭಾಷಾಸಾಹೇಬ್ ಹೆಸರಿಗೆ ಈ ಭೂಮಿಯ ಒಡೆತನ ದೊರೆತು ಖಾತೆಯೂ ಆಯಿತು. ಆನಂತರ ಭಾಷಾಸಾಹೇಬ್ ಅವರ ಪುತ್ರ ರಿಯಾಜ್‌ಪಾಷ ಅವರ ಹೆಸರಿಗೆ ಖಾತೆ ಆಯಿತು. ಆನಂತರ ರಿಯಾಜ್‌ಪಾಷ ಅವರಿಂದ ಮಲ್ಲಿಕಾರ್ಜುನ ಗ್ರೂಫ್‌ನ ನಾಗಣ್ಣ ಅವರು ೮ ವರ್ಷದ ಹಿಂದೆ ಖರೀದಿಸಿ ನಿವೇಶನಗಳನ್ನಾಗಿ ಮಾರ್ಪಡಿಸಿದರು.


ಈ ನಡುವೆ ರಿಯಾಜ್‌ಪಾಷ ಅವರ ಸಹೋದರರ ಪುತ್ರರೊಬ್ಬರಿಗೆ ಕಳೆದ ೬ ತಿಂಗಳಿನಿಂದ ಶ್ರೀಚನ್ನಕೇಶವಸ್ವಾಮಿಯು ಕನಸಿನಲ್ಲಿ ಬಂದು `ನನ್ನನ್ನು ಪೂಜಿಸುತ್ತಿಲ್ಲವೇಕೆ, ಪೂಜೆ ಮಾಡದೆ ಬಿಟ್ಟುಬಂದಿದ್ದೀರ' ಎಂದು ಹೇಳುವುದು ನಡೆಯುತ್ತಿದೆಯಂತೆ, ಈ ಕಾರಣದಿಂದ ಇಂದು ರಿಯಾಜ್‌ಪಾಷಾ ಹಾಗೂ ಕುಟುಂಬದ ಸದಸ್ಯರು ಮತ್ತು ಮಲ್ಲಿಕಾರ್ಜುನ ಗ್ರೂಫ್ಸ್ ಕುಟುಂಬ ಸದಸ್ಯರು ಸಂಯುಕ್ತವಾಗಿ ಮರದ ಬುಡದಲ್ಲಿ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಿದರು. ರಿಯಾಜ್ ಕುಟುಂಬಸ್ಥರನ್ನು ಶಾಲು ಹೊದಿಸಿ ಗೌರವಿಸಲಾಯಿತು.


ಈ ಸಂದರ್ಭ ಮಾತನಾಡಿದ ರಿಯಾಜ್‌ಪಾಷ, ನಮ್ಮ ಪೂರ್ವಜರ ಕಾಲದಿಂದಲೂ ಈ ಜಮೀನನ್ನು ಉಳುಮೆ ಮಾಡಿಕೊಂಡು ಬರಲಾಗುತ್ತಿತ್ತು. ಅಂದಿನಿಂದಲೂ ಬೆಳೆ ಕುಯಲು ವೇಳೆ ಪೂಜೆ ಸಲ್ಲಿಸಲಾಗುತ್ತಿತ್ತು.  ಉಳುವವನೇ ಭೂಮಿ ಒಡೆಯ ನಿಯಮದಡಿ ನಮ್ಮ ತಂದೆಯವರಿಗೆ ಜಮೀನು ಬಂತು. ನಮ್ಮ ತಂದೆ ಹೆಸರಿಗೆ ಜಮೀನು ಬದಲಾವಣೆಯಾಗಿ ಆನಂತರ ನನ್ನ ಹೆಸರಿಗೆ ಬಂದಿತು. ನಾನು ಮಲ್ಲಿಕಾರ್ಜುನ ಗ್ರೂಫ್ಸ್ ನಾಗಣ್ಣನವರಿಗೆ ಮಾರಿದೆ. ಆದರೂ ನಮ್ಮ ಸಹೋದರನ ಮಗನಿಗೆ ಕನಸಿನಲ್ಲಿ ದೇವರ ಕಾಣಿಸಿಕೊಂಡು, ಪೂಜೆ ಸಲ್ಲಿಸದ ಬಗ್ಗೆ ಹೇಳಿತಂತೆ. ಅದರಂತೆ ಇಂದು ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.


ಅರ್ಚಕ ವೇ.ಬ್ರ.ಮಂಜುನಾಥಶಾಸ್ತಿç ಮಾಹಿತಿ ನೀಡಿ, ಜಮೀನಿನಲ್ಲಿ ಇದ್ದಂತ ವೃಕ್ಷರಾಜನಿಗೆ ಹಾಗೂ ನಾಗದೇವತೆ, ಶ್ರೀಚನ್ನಕೇಶವ, ಗಣಪತಿ  ಪೂಜಿಸಲಾಗಿದೆ. ಈ ಪೂಜೆಯಲ್ಲಿ ಜಾತಿ, ಮಥ, ಪಂಥ ಯಾವುದೂ ಇಲ್ಲ.  ಆರೋಗ್ಯ, ಐಶ್ಚರ್ಯ ಕೊಡಲಿ. ಜಮೀನಿನ ಮೂಲ ಮಾಲೀಕರು ಭಾಷಾಸಾಹೇಬರು, ಅವರೂ ಹಿಂದಿನಿಂದಲೂ ಪೂಜೆ ಮಾಡಿಕೊಂಡು ಬರುತ್ತಿದ್ದರಂತೆ, ಇದರಿಂದ ಅವರ ಕಟುಂಬದಲ್ಲಿ ಶಾಂತಿ, ನೆಮ್ಮದಿ ಇತ್ತೆಂದು ಸ್ವತಃ ರಿಯಾಜ್‌ಪಾಷಾ ಅವರೆ ತಿಳಿಸಿದ್ದಾರೆ ಎಂದು ವೇ.ಬ್ರ.ಮಂಜುನಾಥಶಾಸ್ತಿç ಹೇಳಿದರು. 


ಅರ್ಚಕರಾದ ವೇ.ಬ್ರ.ಮಂಜುನಾಥಶಾಸ್ತಿç, ಮಹೇಶ್, ಸಲ್ಲು, ಸನ್ನು, ಮಲ್ಲಿಕಾರ್ಜುನ ಗ್ರೂಫ್ಸ್ನ ನಾಗಣ್ಣ ಪೂಜಾಕಾರ್ಯ ನಡೆಸಿಕೊಟ್ಟರು. ಈ ಸಂದರ್ಭ ರಾಜೇಶ್ವರಿ, ವಸಂತಲಕ್ಷಿö್ಮÃ, ಹೇಮಾಕ್ಷಮ್ಮ, ವೆಂಕಟೇಗೌಡ, ಯೋಗೇಶ್, ವೆಂಕಟೇಶ್, ಅಜ್ಜೇಗೌಡ, ಯತೀಶ್, ನಾಗೇಗೌಡ ಇತರರು ಇದ್ದರು. 


Post a Comment

Previous Post Next Post