ಬೇಲೂರು ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಅನಾವರಣಗೊಂಡ ಹತ್ತು ಹಲವು ಸಮಸ್ಯೆಗಳು-ಅಭಿವೃದ್ಧಿ ಕ್ರಿಯಾಯೋಜನೆಗಳು

ಬೇಲೂರು : ಇಲ್ಲಿ ಪುರಸಭೆಯ ಪಸ್ತುತ ಸಾಲಿನ ಬಜೆಟ್ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಪ್ರಮುಖವಾಗಿ ಮುಖ್ಯರಸ್ತೆ ಅಗಲೀಕರಣ, ಕಣ್ಮರೆಯಾಗಿರುವ ಉದ್ಯಾನವನ ಗುರುತಿಸುವುದು, ಶೌಚಾಲಯ ನಿರ್ಮಾಣ, ಉದ್ಯಾನವನ ಅಭಿವೃದ್ಧಿ ವಿಷಯ ಕುರಿತು 

ಬೇಲೂರು ಪುರಸಭೆ ಆವರಣದಲ್ಲಿ ನಡೆದ ಬಜೆಟ್‌ಪೂರ್ವಭಾವಿ ಸಭೆ ಅಧ್ಯಕ್ಷ ಸಿ.ಎನ್.ದಾನಿ ಅಧ್ಯಕ್ಷತೆಯಲ್ಲಿ ನಕಾಂಪೌಂಡ್

ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಚಂದ್ರಶೇಖರ್, ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಒಳಗಡೆ ವ್ಯಾಪಾರಿಗಳಿಗೆ ಅನುಕೂಲ ಆಗುವಂತೆ ಮೇಲ್ಚಾವಣೆ ಅಳವಡಿಸಬೇಕು, ನೆಹರೂನಗರದಲ್ಲಿ ಚಿಕ್ಕಮಗಳೂರು ರಸ್ತೆಯ ಬದಿಯಲ್ಲಿರುವ ಪೆಟ್ಟಿಗೆ ಅಂಗಡಿ, ಕಲ್ಲು ಇನ್ನಿತರ ವಸ್ತುಗಳ ತೆರವುಗೊಳಿಸಬೇಕು, ಪಟ್ಟಣದಲ್ಲಿರುವ ೩೫ ಉದ್ಯಾನವನದ ಸ್ಥಳ ಕಂಡವರ ಪಾಲಾಗುತ್ತಿದ್ದು ಗುರುತಿಸಿ ಅಭಿವೃದ್ಧಿಪಡಿಸಬೇಕು, ಹಳೆ ತರಕಾರಿ ಮಾರುಕಟ್ಟೆ ಆವರಣದಲ್ಲಿ ಶೌಚಾಲಯ ಶೀಘ್ರ ನಿರ್ಮಿಸಬೇಕೆಂದು ಒತ್ತಾಯಿಸಿದರು.

ವೆಂಕಟೇಶ್ ಮಾತನಾಡಿ, ಮಾಧ್ಯಮಿಕ ಶಾಲಾ ಆಟದ ಮೈದಾನ ಉಳಿವಿಗೆ ಪುರಸಭೆಯ ಆಡಳಿತ ಮುಂದಾಗಬೇಕು, ಈ ಬಗ್ಗೆ ಆಡಳಿತ ಚಕಾರವೆತ್ತುತ್ತಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದರು. ಡಾ.ರಾಜ್ ಸಂಘದ  ಬಿ.ಆರ್.ತೀರ್ಥಂಕರ್, ಪಟ್ಟಣದ ಪ್ರವೇಶ ಧ್ವಾರಗಳಿಗೆ ಸ್ವಾಗತ ಕಮಾನು ಅಳವಡಿಸದೆ ಪ್ರತಿ ಬಜೆಟ್‌ಪೂರ್ವಸಭೆಯಲ್ಲಿ ಭರವಸೆ ಮಾತ್ರ ದೊರೆಯುತ್ತಿದೆ ಎಂದು ಫಲಕ ಪ್ರದರ್ಶಿಸಿದರು. ಕರವೇ ಖಾದರ್, ರಸ್ತೆಪಕ್ಕದ ವ್ಯಾಪಾರಿಗಳಿಗೆ ರ‍್ಯಾಯ ವ್ಯವಸ್ಥೆ ಕಲ್ಪಿಸುವಂತೆ, ಪೌರಕಾರ್ಮಿಕರಿಗೆ ನಿವೇಶನ ನೀಡುವಂತೆ ಹಾಗೂ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆ ಮೇಲ್ಭಾಗದಲ್ಲಿ ಒತ್ತಾಯಿಸಿದರು.

ಕಸಾಪ ಅಧ್ಯಕ್ಷ ರಾಜೇಗೌಡರು, ದೇಗುಲದ ಕಂದಕಕ್ಕೆ ಮಣ್ಣು ತುಂಬುತ್ತಿರುವುದನ್ನು ನಿಲ್ಲಿಸಬೇಕು, ಎಲ್ಲಾ ವಿದ್ಯುತ್ ಕಂಬಗಳಿಗೆ ಮರ್ಕ್ಯುರಿ ಲೈಟ್ ಅಳವಡಿಸಬೇಕು, ಪಟ್ಟಣದ ೨೩ ವಾರ್ಡುಗಳಿಗೆ ಸಾಹಿತಿಗಳ ಹೆಸರು ಇಡುವುದು ಹಾಗೂ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಬೇಕಿದೆ ಎಂದರು. ಸುಲೇಮಾನ್ ಮಾತನಾಡಿ, ಹೊಸನಗರಿಂದ ಹಾಸನ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಎಪಿಎಂಸಿ ಪಕ್ಕದಲ್ಲಿ ಸೇತುವೆ ನಿರ್ಮಿಸಬೇಕು, ೧ನೇ ವಾರ್ಡಿನ ಉದ್ಯಾನವನಕ್ಕೆ ಬೇಲಿ ಹಾಕಿದ್ದು ಬಳಕೆಗೆ ಬಾರದಂತೆ ಮಾಡಲಾಗಿದೆ, ದೇಗುಲದ ಸಮೀಪ ಪ್ರವಾಸಿ ವಾಹನಗಳ ಸಮರ್ಪಕ ನಿಲುಗಡೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಬ್ರಹಾರ್ ಮಾತನಾಡಿ, ನೆಹರೂನಗರದ ಅಮೀರ್ ಮೊಹಲ್ಲಾ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆ ಹಾಳಾಗಿದ್ದು ಮನೆಯೊಳಗೆ ತ್ಯಾಜ್ಯ ಶೇಖರಣೆ ಆಗುವಂತಾಗಿದೆ. ಪುರಸಭೆಯ ಅಧಿಕಾರಿಗಳು ಗಮನ ಹರಿಸಬೇಕಿದೆ, ನೆಹರೂನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಬೇಕು, ಪೆಟ್ರೋಲ್ ಬಂಕ್ ಸಮೀಪ ಅರಣ್ಯ ಇಲಾಖೆಯ ಚಕ್‌ಪೋಸ್ಟ್ ಸ್ಥಳ ಮಸೀದಿಗೆ ಸೇರಿದ್ದು ಖುಲ್ಲಾ ಮಾಡಿಸಿಕೊಡಬೇಕೆಂದು ಆಗ್ರಹಿಸಿದರು.

ಸಮಾಜ ಸೇವಕ ನೂರ್ ಅಹ್ಮದ್, ಜೆಪಿ.ನಗರದ ಮಸೀದಿ ಮುಂಭಾಗದ ರಸ್ತೆಯನ್ನು ಒಳಚರಂಡಿ ದುರಸ್ತಿ ನೆಪದಲ್ಲಿ ಮೂರು ಭಾರಿ ಅಗೆದು ಬಿಲ್ ಪಡೆಯಲಾಗಿದೆ. ಗುತ್ತಿಗೆದಾರರಿಗೆ ದುಡ್ಡುಮಾಡಿಕೊಡುವ ಕೆಲಸ ಇದಾಗಿದ್ದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನರಸಿಂಹಸ್ವಾಮಿ ಮಾತನಾಡಿ, ಉಚಿತ ಸಂಗೀತ ಶಾಲೆ ನಡೆಸುತ್ತಿರುವ ನನಗೆ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದರು. ಕರವೇ ರಾಜಣ್ಣ, ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಸೋರುತ್ತಿದ್ದು ದುರಸ್ತಿ ಮಾಡಿಸಬೇಕಿದೆ. ಘನತ್ಯಾಜ್ಯ ಸಂಗ್ರಹ ಕೇಂದ್ರದ ಕಾಂಪೌಂಡ್ ಬಿದ್ದು ಹೋಗಿದ್ದು ತ್ಯಾಜ್ಯ ಹೊರಗಡೆಗೆ ಬರುತ್ತಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿಕೊಂಡು ಹೊಗೆಯಿಂದ ಸುತ್ತಲಿನ ಪರಿಸರ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನೆಹರೂನಗರದ ಚಂದ್ರು ಮಾತನಾಡಿ, ನೆಹರೂನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು, ಚಿಕ್ಕಮಗಳೂರು ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಪುರಸಭ ಅಧ್ಯಕ್ಷ ಸಿ.ಎನ್.ದಾನಿ, ಸಾರ್ವಜನಿಕರಿಂದ ಬಂದಿರುವ ಹಲವಾರು ಅಹವಾಲುಗಳನ್ನು ಮನನ ಮಾಡಿಕೊಂಡಿದ್ದೇವೆ. ನೆಹರುನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಜೊತೆಗೆ ಬಸ್ ತಂಗುದಾಣ ನಿರ್ಮಿಸಲಾಗುವುದು. ಜೂನಿಯರ್ ಕಾಲೇಜು ಕಟ್ಟಡ ತೆರವುಗೊಳಿಸುತ್ತಿರುವ ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲಾಗುವುದು. ರಂಗಮAದಿರದ ಪಕ್ಕದ ಟ್ಯಾಂಕ್ ಇರುವ ಸ್ಥಳದಲ್ಲಿ ಈಜುಕೊಳ ನಿರ್ಮಾಣ, ದೇಗುಲ ರಸ್ತೆಯಲ್ಲಿ ಫುಡ್‌ಕೋರ್ಟ್, ಐಡಿಎಸ್‌ಎಂಟಿ ಮಳಿಗೆ ಮೇಲ್ಭಾಗ ಮಳಿಗೆ ಹಾಗೂ ಹಳೆತರಕಾರಿ ಮಾರುಕಟ್ಟೆ ಒಳಗೆ ಶೌಚಾಲಯ ನಿರ್ಮಾಣ ಮಾಡಲಾಗುವುದು.

ಮಾಧ್ಯಮಿಕ ಶಾಲಾ ಆಟದ ಮೈದಾನ ಉಳಿವಿಗಾಗಿ ೩೦ ಲಕ್ಷರೂ.ಗಳಲ್ಲಿ ಕಾಂಪೌಂಡ್ ನಿರ್ಮಿಸಲಾಗುವುದು. ಇನ್ನಷ್ಟು ವಿದ್ಯುತ್ ಕಂಬಗಳಿಗೆ ಮರ್ಕ್ಯೂರಿ ಲೈಟ್ ಅಳವಡಿಸಲಾಗುವುದು. ವಿಷ್ಣುಸಮುದ್ರಕೆರೆಯಲ್ಲಿ ದೋಣಿ ವಿಹಾರದ ವ್ಯವಸ್ಥೆಗೆ ಯೋಜನೆ ಸಿದ್ದವಾಗಿದೆ. ಮುಖ್ಯರಸ್ತೆ ಅಗಲೀಕರಣ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದಿಂದ ಆಗಬೇಕಿದೆ. ಈ ವಿಚಾರದಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಅಧಿಕಾರಿಗಳಲ್ಲಿ ಚರ್ಚಿಸಿದ್ದು ಶೀಘ್ರದಲ್ಲೆ ಒಂದು ಹಂತಕ್ಕೆ ಬರುವ ವಿಶ್ವಾಸವಿದೆ. ಹೊಸನಗರದ ಬಳಿ ಸೇತುವೆ ನಿರ್ಮಾಣ, ನೆಹರುನಗರದ ಸರ್ಕಾರಿ ಶಾಲೆ ಜೀರ್ಣೋದ್ದಾರ, ಕನ್ನಡ ಫಲಕಗಳಿಗೆ ಆಧ್ಯತೆ ಸೇರಿದಂತೆ ಹಲವು ಕಾರ್ಯಯೋಜನೆಗಳಿಗೆ ಪುರಸಭೆ ಮುಂದಾಗಿದೆ. ನಗರೋತ್ಥಾನ ಯೋಜನೆಯಡಿ ೧೦ ಕೋಟಿ ರೂ. ಅನುದಾನ ಬರಲಿದ್ದು ಇದರಲ್ಲಿ ಸಾಕಷ್ಟು ಕೆಲಸ ಮಾಡಿಸಲಾಗುವುದು. ಮುಖ್ಯರಸ್ತೆ ವಿಸ್ತರಣೆ ಚರ್ಚೆ ಇರುವುದರಿಂದ ಸ್ವಾಗತ ಕಮಾನು ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎಂದು ತಿಳಿಸಿದರು. ಪ್ರಾಸ್ಥವಿಕವಾಗಿ ಪುರಸಭಾ ಸದಸ್ಯ ಜಿ.ಶಾಂತಕುಮಾರ್ ಮಾಹಿತಿ ನೀಡಿದರು. ಉಪಾಧ್ಯಕ್ಷೆ ರತ್ನಮ್ಮಸತ್ಯನಾರಾಯಣ, ಸಿಒ ಸುಜಯಕುಮಾರ್ ಹಾಗೂ ಪುರಸಭಾ ಸದಸ್ಯರು ಹಾಜರಿದ್ದರು.


Post a Comment

Previous Post Next Post