ಬೇಲೂರು :
ಇಲ್ಲಿನ ಬಸ್ ನಿಲ್ದಾಣ ವಿಸ್ತರಣೆಗೆ ನಿಲ್ದಾಣದ ಸಮೀಪವಿರುವ ಲೋಕೋಪಯೋಗಿ ಇಲಾಖೆ ಸ್ಥಳವನ್ನು ಪಡೆದುಕೊಂಡು ಶೀಘ್ರವೆ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಲಿ ಉಪಾಧ್ಯಕ್ಷ ಈಶ್ವರಪ್ಪ ತಿಳಿಸಿದರು
| ಬೇಲೂರಿನ ಬಸ್ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ಉಪಾಧ್ಯಕ್ಷ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು |
ಬೇಲೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಸ್ ನಿಲ್ದಾಣ ಅಗಲೀಕರಣವಾಗಬೇಕು ಎಂದು ಇಲ್ಲಿನ ಸಂಘಟನೆಗಳು ಹಾಗೂ ಸಾರ್ವಜನಿಕರು ಬಹುಕಾಲದಿಂದ ಹೋರಾಟ ನಡೆಸಿದ್ದಾರೆ. ಆದರೆ ಅಗಲೀಕರಣ ನೆನಗುಂದಿಗೆ ಬಿದ್ದಿದೆ. ಇದೀಗ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ರವರಲ್ಲಿ ಮನವಿ ಮಾಡಿದ್ದು ಸ್ಥಳ ನೀಡುವುದಾಗಿ ತಿಳಿಸಿದ್ದಾರೆ. ೬ ಆರು ತಿಂಗಳ ಅವಧಿಯಲ್ಲಿ ಬಸ್ ನಿಲ್ದಾಣ ವಿಸ್ತರಣೆ ಕಾರ್ಯ ಆರಂಭಗೊಳ್ಳಲಿದೆ ಎಂದರು.
ಕೋವಿಡ್ ಕಾರಣದಿಂದ ರಸ್ತೆ ಸಾರಿಗೆ ನಿಗಮ ತೀವ್ರ ಸಂಕಷ್ಟ ಅನುಭವಿಸಿದ್ದು, ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು.ಸರ್ಕಾರದ ನೆರವಿನಿಂದ ಸದ್ಯ ರಸ್ತೆ ಸಾರಿಗೆ ನಿಗಮ ಅಲ್ಪಮಟ್ಟಿನ ಚೇತರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಬಸ್ ಖರೀದಿ ವಿಳಂಭವಾಗಿದೆ. ಮುಂದಿನ ದಿನದಲ್ಲಿ ಗ್ರಾಮೀಣ ಭಾಗಕ್ಕೆ ಹೆಚ್ಚು ಸಾರಿಗೆ ಬಸ್ ಸಂಚಾರ ಮಾಡಲಾಗುವುದು. ಸಿಬ್ಬಂದಿಗಳ ಕೊರತೆಯಿದ್ದು, ಚಾಲಕರು, ನಿರ್ವಾಹಕರು, ಸಿಬ್ಬಂದಿಗಳು ನಿವೃತ್ತಿಯಾಗಿದ್ದರಿಂದ ಹೊಸ ಸಿಬ್ಬಂದಿಗಳ ನೇಮಕ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ಜೊತೆಗೆ ಮಾತನಾಡಿದ್ದೇನೆ ಎಂದು ಮುಖಂಡರು ಹೇಳಿದ್ದಾರೆ.
ಪರವಾನಗಿ ಪಡೆದು ಸಿಬ್ಬಂದಿ ನೇಮಕ ಮಾಡುತ್ತೇವೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಚಾಲಕರು, ನಿರ್ವಾಹಕರ ಕೊರತೆ ಹೆಚ್ಚಿದೆ. ಬೇರೆ ಕಡೆಗಳಲ್ಲಿ ನೇಮಕ ಆಗಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶೀಘ್ರವೇ ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು. ವಿಶೇಷವಾಗಿ ಬಸ್ ನಿಲ್ದಾಣದಲ್ಲಿ ಕೆಲ ಭಾರಿ ಗುಂಪುಗಾರಿಗೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಸಾರಿಗೆ ನಿಗಮ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಎಲ್ಲಾ ಬಸ್ ನಿಲ್ದಾಣಕ್ಕೆ ಸಿಸಿ ಟಿವಿ ಅಳವಡಿಸಲು ಸಂಬAಧ ಪಟ್ಟ ಸಾರಿಗೆ ಮಂತ್ರಿಗಳು ಮತ್ತು ನಿಗಮದ ಅಧ್ಯಕ್ಷ ಗಮನಕ್ಕೆ ತರಲಾಗುತ್ತದೆ ಎಂದರು.
ಈ ಸಂದರ್ಭ ಚಿಕ್ಕಮಗಳೂರು ಸಾರಿಗೆ ವಿಭಾಗಾಧಿಕಾರಿ ವಿರೇಶ್, ಬೇಲೂರು ಬಸ್ ಘಟಕದ ವ್ಯವಸ್ಥಾಪಕ ಬೈರೇಗೌಡ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.