ಬೇಲೂರು : ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಸಂಘಟನೆ ಹಾಗೂ ಸದಸ್ಯತ್ವ ಹೆಚ್ಚಳದ ಹಿನ್ನಲೆಯಲ್ಲಿ ಬ್ರಾಹ್ಮಣ ಮಹಾಸಭಾದಲ್ಲಿನ ಬೈಲಾದಲ್ಲಿ ಕೆಲವೊಂದು ತಿದ್ದುಪಡಿ ತರಲಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಬಿ.ಎಸ್.ರಾಘವೇಂದ್ರಭಟ್ ಹೇಳಿದರು.
| ಬೇಲೂರಿನಲ್ಲಿ ಬ್ರಾಹ್ಮಣಸಭಾ ಹಾಗೂ ವಿಪ್ರ ಮಹಿಳಾ ಒಕ್ಕೂಟದಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿಧಾನಪರಿಷತ್ತು ಮಾಜಿ ಸದಸ್ಯ ಗೋ.ಮದುಸೂಧನ್ ಮಾತನಾಡಿದರು |
ತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರ ಮಹಿಳಾ ಒಕ್ಕೂಟ ಸಂಯುಕ್ತವಾಗಿ ಏರ್ಪಡಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಶೋಕ್‌ಹರ‍್ನಳ್ಳಿ ರಾಜ್ಯಾಧ್ಯಕ್ಷರಾದ ನಂತರ ಕಾರ್ಯಯೋಜನೆ ಚುರುಕುಗೊಂಡಿದೆ. ಸಮಿತಿಗೆ ಆಂದೋಲನದ ಮೂಲಕ ಕನಿಷ್ಠ ೩ ಲಕ್ಷ ಸದಸ್ಯರನ್ನಾಗಿಸುವ ಉದ್ದೇಶವಿದೆ. ರಾಜಕೀಯ ಸ್ಥಾನಮಾನಕ್ಕೆ ಸಂಘಟನೆ ಹಾಗೂ ಸಂಖ್ಯಾಬಲ ಮುಖ್ಯವಾಗಿದೆ. ನಮ್ಮದೇಶದ ಸಂಸ್ಕೃತಿ, ಸನಾತನಧರ್ಮವನ್ನು ಬ್ರಾಹ್ಮಣರು ಸಾವಿರಾರು ವರ್ಷದಿಂದ ಪೋಷಿಸಿಕೊಂಡು ಬಂದಿದ್ದಾರೆ. ಬ್ರಾಹ್ಮಣರನ್ನು ಉಪಜಾತಿಯ ಮೂಲಕ ಒಡೆದಾಳುವ ಹಿಂದುತ್ವನಾಶದ ಕೆಟ್ಟ ಆಲೋಚನೆ ಕೆಲವರದ್ದಾಗಿದೆ ಎಂದರು.
ವಿಧಾನಪರಿಷತ್ತು ಮಾಜಿ ಸದಸ್ಯ ಗೋ.ಮದುಸೂಧನ್ ಮಾತನಾಡಿ, ಬ್ರಾಹ್ಮಣರು ಸಂಘಟನೆಯಾದರೆ ಹಿಂದುತ್ವ ಉಳಿಯಲಿದೆ. ಹಿಂದುತ್ವದ ಜೊತೆ ಎಲ್ಲಿಯವರಗೆ ಬದುಕುತ್ತೇವೆಯೋ ಅಲ್ಲಿಯವರಗೆ ಬ್ರಾಹ್ಮಣರ ಅಸ್ತಿತ್ವ ಇರುತ್ತದೆ. ಬ್ರಾಹ್ಮಣರು ಸಂಘಟನೆ ಜೊತೆ ಜಾಗೃತರಾಗಬೇಕಿದೆ. ಸಮಾಜದಲ್ಲಿನ ಸವಾಲುಗಳಿಗೆ ನಾವೆ ಪರಿಹಾರ ಕಂಡುಕೊಳ್ಳಬೇಕು. ಯುವಕರು ದುಶ್ಚಟದಿಂದ ದೂರವಿರಬೇಕು. ಸಂಸ್ಕೃತಿ, ಸಂಸ್ಕಾರ ಉಳಿಸಿರುವ ಮಹಿಳೆಯರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ. ನಾವು ಸಂಘಟನೆಯಾಗೋಣ, ದೇಶವನ್ನೂ ಉಳಿಸೋಣ ಎಂದು ಸಲಹೆ ನೀಡಿದರು.
ರಾಜ್ಯ ಬ್ರಾಹ್ಮಣ ಮಹಾಸಭಾದ ನಿರ್ದೇಶಕ ಎನ್.ಎಸ್.ನರಸಿಂಹಮೂರ್ತಿ ಮಾತನಾಡಿ, ಇಂದು ಬ್ರಾಹ್ಮಣರ ಯುವಕರಲ್ಲಿ ಸಂಘಟನೆ ಆಗಬೇಕಿದೆ. ಬ್ರಾಹ್ಮಣರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ತುಳಿತಕ್ಕೆ ಒಳಗಾಗುತ್ತೇವೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಅಷ್ಟೇ ಮಾಡದೆ ಇನ್ನಿತರ ಉದ್ಯೋಗಕ್ಕೂ ಕಳಿಸಿ ಎಂದು ಸಲಹೆ ನೀಡಿದರು. ತಾಲ್ಲೂಕು ಬ್ರಾಹ್ಮಣ ಸಭಾದ ಅಭಿಷೇಕ ಕಾರ್ಯಕ್ರಮಕ್ಕೆ ೧೦ ಸಾವಿರ ರೂ. ಕೊಡುಗೆ ನೀಡಿದರು.
ಬೆಂಗಳೂರಿನ ಬಿಎಂಎಸ್ ಇಂಜಿನಿಯರಿAಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಸೌಮ್ಯಲಕ್ಷಿö್ಮÃ ಮಾತನಾಡಿ, ಮನೆಯಲ್ಲಿ ಹೆಣ್ಣುಮಕ್ಕಳು ಕುಂಕುಮ ಅಥವಾ ಹಣೆಗೆ ಕುಂಕುಮ ಇಟ್ಟು, ಬಳೆ ತೊಟ್ಟು, ಹೂವು ಮುಡಿಯುವ ಮೂಲಕ ಹಿಂದೂ ಸಂಸ್ಕಾರವನ್ನು ಉಳಿಸಲು ಪೋಷಕರು ಗಮನಹರಿಸಬೇಕಿದೆ. ಪ್ಲಾಸ್ಟಿಕ್ ಬಳಕೆ ಮಾಡದೆ ಪರಿಸರ ಉಳಿಸುವ ಕೆಲಸ ಆಗಬೇಕಿದೆ ಎಂದು ಮನವಿ ಮಾಡಿದರು.
ಶ್ರೀಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿ ಸದಸ್ಯ ಗೋ.ಕೃ.ರವೀಂದ್ರ ಮಾತನಾಡಿ, ಸಮಾಜದ, ದೇಶದ ಸೇವೆಗೆ ಪೂರಕವಾದ ವಾತಾವಣ ಮನೆಯಲ್ಲಿರಬೇಕು. ಆರ್‌ಎಸ್‌ಎಸ್ ಸರ‍್ಪಡೆಯಿಂದ ವೇಧಪಾಠದಿಂದ ದೂರವಾದೆ. ದೇವರು ಕೊಟ್ಟಿರುವ ಮನುಷ್ಯಜನ್ಮ ಸಾರ್ಥಕಪಡಿಸಿಕೊಳ್ಳಬೇಕು, ದೇಶ ಸೇವೆ ಮಾಡುವಾಗಿನ ಖುಷಿ ಮತ್ತೊಂದಿಲ್ಲ ಎಂದರು.
ತಾಲ್ಲೂಕು ಬ್ರಾಹ್ಮಣ ಮಹಾಸಭಾಧ್ಯಕ್ಷ ವಿಜಯಕೇಶವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ಸಂದರ್ಭ ಸರ್ಕಾರಿ ಆಸ್ಪತ್ರೆಗೆ ಬ್ರಾಹ್ಮಣ ಸಭಾದಿಂದ ೨೦ ಲಕ್ಷರೂ.ಗಳ ಉಪಕರಣ ನೆರವು ನೀಡಿದ್ದೇವೆ. ತಾಲ್ಲೂಕಿನಲ್ಲಿ ೧೭೩ ಜನರು ಮಾತ್ರವೆ ಸದಸ್ಯರಾಗಿದ್ದು ಇದನ್ನು ೧ ಸಾವಿರಕ್ಕೆ ಏರಿಸುವ ಉದ್ದೇಶವಿದೆ. ಬೇಲೂರಿನಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ ನಡೆಸುವ ಆಲೋಚನೆಯಿದೆ ಎಂದರು.
ಇದೆ ವೇಳೆ ರಾಜ್ಯ ಬ್ರಾಹ್ಮಣ ಮಹಾಮಂಡಳಿ ನಿರ್ದೇಶಕ ಡಾ.ಬಿ.ಎಸ್.ರಾಘವೇಂದ್ರಭಟ್, ದೇಗುಲ ಸಮಿತಿ ಸದಸ್ಯ ಜಿ.ಕೆ.ರವೀಂದ್ರ, ಬ್ರಾಹ್ಮಣ ಸಭಾಧ್ಯಕ್ಷ ಸಿ.ಆರ್.ವಿಜಯಕೇಶವ, ಬಿ.ಎಂ.ಎಸ್.ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಬಿ.ಎಸ.ಸೌಮ್ಯಲಕ್ಷಿö್ಮÃ, ರಾಜ್ಯ ಬ್ರಾಹ್ಮಣ ಸಭಾ ನಿರ್ದೇಶಕ ಎನ್.ಎಸ್.ನರಸಿಂಹಮೂರ್ತಿ ಹಾಗೂ ಮಂಜುನಾಥಶಾಸ್ತಿç ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಪ್ರ ಮಹಿಳಾ ತಾ.ಅಧ್ಯಕ್ಷೆ ಶ್ರೀವಿದ್ಯಾಶ್ರೀಹರಿ, ಜಿಆರ್‌ಎಸ್ ಪೆಂಟೆಸಿಪಾಕ್ ಮಾಲೀಕ ಯೋಗೇಶ್ ಇದ್ದರು. ಕಾರ್ಯಕ್ರಮಕ್ಕೆ ಮುಂಚೆ ಶ್ರೀಚನ್ನಕೇಶವಸ್ವಾಮಿ ಮಹಾಮೂರ್ತಿಗೆ ಸಭಾ ವತಿಯಿಂದ ಮಹಾಸಂಕಲ್ಪ, ಸಹಸ್ರನಾಮ ಪಾರಾಯಣ, ವೇದಪಾರಾಯಣದೊಂದಿಗೆ ಪಂಚಾಮೃತ ಮಹಾಭಿಷೇಕ ನಡೆಸಲಾಯಿತು. ಇದೆ ಸಂದರ್ಭ ಸದಸ್ಯತ್ವ ನಮೂನೆ ಬಿಡುಗಡೆ ಮಾಡಲಾಯಿತು.
ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಹಯವದನರಾವ್ ಪ್ರಾಸ್ಥವಿಕವಾಗಿ ಮಾತನಾಡಿದರು. ವೇ.ಬ್ರ.ಮಂಜುನಾಥಶಾಸ್ತಿç ವೇದಮಂತ್ರ ಪಠಿಸಿದರು. ಪುಟ್ಟಬಾಲಕ ೨ನೇ ತರಗತಿಯ ಸುಷೇನಬಾಯರಿ ವಿಷ್ಣುಸಹಸ್ರನಾಮ ಪಠಿಸಿ ಗೌರವ ಸ್ವೀಕರಿಸಿದರು. ಪ್ರಾರ್ಥನೆಯನ್ನು ವರ್ಷಅಪೂರ್ವ ಮಾಡಿದರು. ರಮೇಶಹಾಲಂಬಿ ಸ್ವಾಗತಿಸಿ, ವೇಣುಗೋಪಾಲ್ ನಿರೂಪಿಸಿದರು. ಹೆಚ್.ವಿ.ರಾವ್ ವಂದಿಸಿದರು.