ಬೇಲೂರು : ಸರ್ಕಾರದ ಯಾವುದೆ ಒಂದು ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅದರದೇ ಆದ ಅನೇಕ ಮಾರ್ಗಗಳಿರುತ್ತವೆ.
ಬೇಲೂರು ತಾಲ್ಲೂಕು ನಾಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಹನಿ ಹಾಕುತ್ತಿರುವುದು |
ಹೇಳಿ ಕೇಳಿ ಸರ್ಕಾರದ ಕಾರ್ಯಕ್ರಮ, ಹೇಗೊ ಹಾಗೆ ಮಾಡಿದರೆ ಸಾಕು, ದಾಖಲೆಗೆ ಒಂದೆರಡು ಫೋಟೊ ಇಟ್ಟುಕೊಂಡರೆ ಆದೀತು ಎನ್ನುವವರೂ ಇದ್ದಾರೆ. ಆದರೆ ಇದಕ್ಕೆ ಹೊರತಾಗಿ ತಾಲ್ಲೂಕಿನ ನಾಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಬ್ಬದ ವಾತಾವರಣದಲ್ಲಿ ನಡೆಸಲಾಗಿದೆ.
ಕೇಂದ್ರದ ಮುಂದೆ ಬಣ್ಣದ ರಂಗೋಲಿಯೊಂದಿಗೆ ಸ್ವಾಗತ ಬಯಸಿರುವುದು |
ಆರೋಗ್ಯ ಕೇಂದ್ರದ ವೈದ್ಯರು, ಎಲ್ಲಾ ನೌಕರರು ಒಂದುಗೂಡಿ ಪೋಲಿಯೋ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಆರೋಗ್ಯ ಕೇಂದ್ರದ ಮುಂದೆ ಬಣ್ಣದ ರಂಗೋಲಿ ಬಿಡಿಸಿ, ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸುಸ್ವಾಗತ ಕೋರಿದ್ದಾರೆ. ಕೇಂದ್ರದ ಒಳಗೂ ಪೋಲಿಯೋ ಹನಿ ಹಾಕುವ ಕೊಠಡಿಯನ್ನು ಅಲಂಕರಿಸಿದ್ದಾರೆ. ಕೇಂದ್ರದ ಹೊರಗೋಡೆ ಮೇಲೆ ಹಲವು ಮಾಹಿತಿ ಚಿತ್ತಾರಗಳು ಅರ್ಥಪೂರ್ಣವಾಗಿ ರಂಜಿಸುತ್ತಿವೆ. ನಾಗೇನಹಳ್ಳಿ ಗ್ರಾಮದ ಈ ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆಯನ್ನು ಕಂಡು ಗ್ರಾಮಸ್ಥರು, ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.