ಅರಸೀಕೆರೆ: ಖಾತೆ ಬದಲಾವಣೆಗಾಗಿ 5 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಗ್ರಾಮ ಲೆಕ್ಕಿಗ ನೊಬ್ಬ ಬಿದ್ದಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಸಿದ್ದೇಶ್ ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿಯ ಗ್ರಾಮಲೆಕ್ಕಿಗ.
ಪ್ರಕರಣದ ವಿವರ:
ತಾಲೂಕಿನ ಸೂಳೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವ್ಯಕ್ತಿಯೊಬ್ಬರ ಖಾತೆ ಬದಲಾವಣೆಗಾಗಿ 5 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಅದರ ಮೊದಲ ಮತ್ತು ಕೊನೆಯ ಕಂತಾಗಿ ಐದು ಸಾವಿರ ರೂಪಾಯಿಗಳನ್ನು ಕಚೇರಿಯಲ್ಲಿ ಪಡೆಯದೆ ಅರಸೀಕೆರೆಯ ನಗರ ಪ್ರವಾಸಿ ಮಂದಿರದಲ್ಲಿ ಪಡೆಯುವಾಗ ಎಸಿಬಿ ದಾಳಿ ನಡೆಸಿ ಬಲೆಗೆ ಬೀಳಿಸಿದ್ದಾರೆ.
ಪ್ರಭಾರ ಎಸ್ಪಿ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ದಾಳಿಯ ವೇಳೆ ಡಿಎಸ್ಪಿ ಸತೀಶ್, ಇನ್ಸ್ ಪೆಕ್ಟರ್ ಗಳಾದ ಶಿಲ್ಪ, ವೀಣಾ, ಸಿಬ್ಬಂದಿಗಳಾದ ಆದಿ, ರೇಖಾ ಹಾಗೂ ಇನ್ನಿತರರು ಭಾಗವಹಿಸಿದ್ದು, ಆರೋಪಿ ಸಿದ್ದೇಶನನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಸಂಜೆಯೊಳಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
Tags
ಅರಸೀಕೆರೆ