ಹಾಸನದಲ್ಲಿ ಗೆಲ್ಲುವುದೇ ನಮ್ಮ ಗುರಿನೋಡಲ್ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಡಾ.ಸೂರಜ್ ಸ್ಪಷ್ಟನೆ

ಹಾಸನ: ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಹಾಸನ ತಾಲೂಕನ್ನು ನೋಡಲ್ ತಾಲೂಕಾಗಿ 
ಆಯ್ಕೆ ಮಾಡಿಕೊಳ್ಳಬೇಕೆಂದು ನಮ್ಮ ಪಕ್ಷದ ಹಿರಿಯರು ಮುಖಂಡರು ಹಾಗೂ ಯುವಕರ ಅಪೇಕ್ಷೆಯಾಗಿತ್ತು. ಆ ಕಾರಣದಿಂದ ಈ ತಾಲೂಕನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಯಾವುದಾದರೂ ಒಂದು ತಾಲೂಕನ್ನು ನೋಡಲ್ ತಾಲೂಕಾಗಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೊಳೆನರಸೀಪುರ ತಾಲೂಕನ್ನು ನಮ್ಮ ತಂದೆ ಹಾಗೂ ತಾಯಿ ನೋಡಿಕೊಳ್ಳುತ್ತಿದ್ದಾರೆ.
 ಅನೇಕರ ಅಪೇಕ್ಷೆ ಮೇರೆಗೆ ಈ ತಾಲೂಕನ್ನು ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಜಿಲ್ಲಾ ಕೇಂದ್ರ ಇರುವ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಅದನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದಷ್ಟೇ ನಮ್ಮ ಗುರಿ.ಅದಕ್ಕಾಗಿ ಜೆಡಿಎಸ್ ಸಂಘಟನೆ ಮುಂದುವರೆಸುವ ನಿಟ್ಟಿನಲ್ಲಿ ಹಾಗೂ ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಹೇಳಿದರು.
ಎಂದರು.
ನಮ್ಮ ಅಪೇಕ್ಷೆ ತಿಳಿಸಿಲ್ಲ:
ಹಾಸನ ಕ್ಷೇತ್ರದಿಂದ ರೇವಣ್ಣ ಇಲ್ಲವೇ ಭವಾನಿ ರೇವಣ್ಣ ಬಂದು ಸ್ಪರ್ಧಿಸಲಿ ಎಂಬ ಶಾಸಕ ಪ್ರೀತಂಗೌಡ ಅವರ ಪಂಥಾಹ್ವಾನ ಕುರಿತಂತೆ ಪ್ರತಿಕ್ರಿಯಿಸಿದ ಸೂರಜ್, ನಮ್ಮ ತಾಯಿ ಹಿಂದೆ ಕೆ.ಆರ್.ಪೇಟೆ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಲ್ಲೂ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಿದ್ದರು.
ಇದೀಗ ಹಾಸನದಿಂದ ಸ್ಪರ್ಧಿಸ್ತಾರೆ ಅಂಥಾ ಹೇಳ್ತಿದ್ದಾರೆ. ಇನ್ನೂ ಎಲ್ಲೆಲ್ಲಿ ಊಹಾಪೋಹ ಹಬ್ಬಿಸುತ್ತಾರೋ ಹಬ್ಬಿಸಲಿ ನನಗೇನು ಬೇಜಾರಿಲ್ಲ ಎಂದು ನಯವಾಗಿಯೇ ಹೇಳಿದರು.
ನಮ್ಮ ಕುಟುಂಬದವರು ಯಾರಾದ್ರು ಬಂದು ಸ್ಪರ್ಧೆ ಮಾಡಲಿ ಎಂಬ ಅಪೇಕ್ಷೆ ಅವರಿಗಿದೆ
ಆದರೆ ನಮ್ಮ ಅಪೇಕ್ಷೆಯನ್ನು ಇನ್ನೂ ತಿಳಿಸಿಲ್ಲ ಎಂದರು.
ಹಿರಿಯರಾದ ದೇವೇಗೌಡರು, ನಮ್ಮ ಪಕ್ಷದ ಆರು ಶಾಸಕರು ಹಾಗೂ ಹಿರಿಯ ರಾಜಕಾರಣಿಗಳು ಇದ್ದಾರೆ. ಅವರೆಲ್ಲಾ ಸೇರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಹೇಳಿದರು.
ಹಿಜಾಬ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸೂರಜ್, ಅದರ ಬಗ್ಗೆ ನನ್ನದೇ ಆದ ರೀತಿಯಲ್ಲಿ ಮಾತನಾಡಬೇಕು ಅಂದುಕೊAಡಿದ್ದೇನೆ, ಅದನ್ನು ಈಗ ಬಹಿರಂಗಪಡಿಸಲ್ಲ ಎಂದರು.

Post a Comment

Previous Post Next Post