ಅನಂತರಾಜೇ ಅರಸು
ಬೇಲೂರು : ಪಟ್ಟಣದ ಕೆಂಪೇಗೌಡ ರಸ್ತೆಯ ಪಾತಾಳೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೇಲೂರಿನ ವಿವಿಧ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ದೇವರಿಗೆ, ಶಿವಲಿಂಗಕ್ಕೆ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು |
ದೇಗುಲದಲ್ಲಿ ಮುಂಜಾನೆಯಿAದ ಪರಮೇಶ್ವರನಿಗೆ ರುದ್ರಾಭಿಷೇಕದ ಮಜ್ಜನ, ಜಲಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಯಿತು. ರಾತ್ರಿ ಜಾಗರಣೆ ಹಿನ್ನೆಲೆ, ನಾಳೆ ಬೆಳಗ್ಗೆಯವರೆಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ತಾಲೂಕಿನ ವಿವಿಧ ಭಾಗಗಳಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ದೇಗುಲ ಸಮಿತಿಯ ಅಧ್ಯಕ್ಷ ಬಿ.ವಿ.ರವಿ ಮಾತನಾಡಿ, ಪ್ರತಿವರ್ಷವೂ ಕೂಡ ಪಾತಾಳೇಶ್ವರ ದೇವಾಲಯದಲ್ಲಿ ಪೂಜಾಕೈಂಕರ್ಯಗಳನ್ನು ವಿಜ್ರಂಭಣೆಯಿಂದ ನೆರವೇರಿಸಲಾಗುತ್ತಿದೆ. ದೇಗುಲ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಭಕ್ತರ ಸಹಕಾರ ಹೆಚ್ಚಾಗಿದೆ ಎಂದು ತಿಳಿಸಿದರು.
ದೇವಾಲಯದ ಪ್ರಧಾನ ಅರ್ಚಕ ವೇದಬ್ರಹ್ಮ ಕೆ.ಆರ್.ಮಂಜುನಾಥ್ ಮಾತನಾಡಿ, ಮಹಾಶಿವರಾತ್ರಿ ಎಂದರೆ ಶಿವನನ್ನು ಒಲಿಸಿಕೊಳ್ಳುವ ದಿನ, ಈ ದಿನ ಶಿವನ ಪೂಜೆ ಮಾಡಿದರೆ ನಮಗೆಲ್ಲಾ ಶಿವನ ಫಲ ಸಿಗುತ್ತದೆ. ಪೂಜೆ, ಉಪವಾಸ, ಜಾಗರಣೆ ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾರೆ. ಕೊರೋನಾದಂತ ಮಹಾಮಾರಿ ರೋಗ ದೇಶದೆಲ್ಲೆಡೆ ಪೂರ್ತಿ ತೊಲಗಲಿ, ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾಕಷ್ಟು ಪ್ರಾಣಹಾನಿಯಾಗಿದ್ದು, ಶಾಂತಿ ಮಾತುಕತೆ ಮೂಲಕ ದೇಶದಲ್ಲಿ ಯುದ್ಧ ನಿಂತು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕಬೇಕೆಂಬ ಸದುದ್ದೇಶದಿಂದ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ್, ಉಪಾಧ್ಯಕ್ಷ ಪೈಂಟ್ ರವಿ, ಕಾರ್ಯದರ್ಶಿ ಜಗದೀಶ್, ಸಹ ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಚಿ ಕುಮಾರಸ್ವಾಮಿ, ಬಸವರಾಜು, ಯಲ್ಲೇಶ್, ಮಂಜುನಾಥ್, ಬೇಕರಿ ಮಂಜು ಇದ್ದರು
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ಶಂಕರಲಿAಗೇಶ್ವರ ದೇಗುಲದಲ್ಲಿ ದೇವರಿಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ ಇಡೀ ದೇಗುಲದಲ್ಲಿ ಜಾಗರಣೆ ನಡೆಸಲಾಗುತ್ತಿದೆ. ಶ್ರೀಚನ್ನಕೇಶವಸ್ವಾಮಿ ದೇಗುಲ ರಸ್ತೆಯಲ್ಲಿರುವ ಶ್ರೀಶಿವನಂಜುಂಡೇಶ್ವರ ದೇಗುಲದಲ್ಲಿಯೂ ಸಹ ನಂಜುಂಡೇಶ್ವರ ದೇವರಿಗೆ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ಶಿವಕುಮಾರಸ್ವಾಮಿ ಸಮುದಾಯಭವನದ ಆವರಣದಲ್ಲಿರುವ ಶಿವನ ದೇಗುಲದಲ್ಲಿಯೂ ಪೂಜೆ ನೆರವೇರಿಸಲಾಯಿತು. ಯಗಚಿ ನದಿ ದಂಡೆಯಲ್ಲಿರುವ ಈಶ್ವರ ದೇಗುಲ, ಹೊಳೆಬೀದಿಯಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಭಕ್ತರು ಎಲ್ಲಾ ದೇಗುಲದಲ್ಲಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇಗುಲ ಸಮಿತಿಯವರು ಹಾಜರಿದ್ದು ವ್ಯವಸ್ಥೆ ನೋಡಿಕೊಂಡರು.