ಸಾಧನೆಯ ಹಾದಿಯಲ್ಲಿ ಕೊಹ್ಲಿ " ಶತಕದ " ಮೈಲಿಗಲ್ಲು !

 ನವದೆಹಲಿ : ಭಾರತದ ಸೂಪರ್ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ನೂರನೇ ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿದ್ದಾರೆ . ಈ ಬಾರಿ ಅವರು ನಾಯಕರಾಗಿ ಅಲ್ಲ , ಬರೀ ಬ್ಯಾಟರ್ ಆಗಿ ಕಣಕ್ಕೆ ಇಳಿಯಲಿದ್ದಾರೆ . ಮುಂಬೈಕರ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಮೈಲುಗಲ್ಲು ಸಾಧಿಸಲಿದ್ದಾರೆ .

 ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಸಾಧ್ಯವಾಗದೇ ಇದ್ದರೂ ಉಪಖಂಡದ ಹೊರಗೆ ನಾಯಕತ್ವದಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ 33 ವರ್ಷದ ಈ ಆಟಗಾರ ಟೆಸ್ಟ್ ಜೀವನದಲ್ಲಿ ಅಮೂಲ್ಯ ಮತ್ತು ಅಪರೂಪದ ಇನಿಂಗ್ಸ್‌ಗಳ ಮೂಲಕ ಅನೇಕ ಬಾರಿ ತಂಡದ ಕೈ ಹಿಡಿದಿದ್ದಾರೆ . 2014 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಸರಣಿ ಆರಂಭಕ್ಕೂ ಮೊದಲು ನಾಯಕ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡ ಕಾರಣ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು . ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ್ದರು . 


ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 5 ರನ್ ಗಳಿಸಿದ ಅವರು 364 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡದ ಪರ 141 ರನ್ ಗಳಿಸಿದ್ದರು . ಈ ಮೂಲಕ ತಂಡದ ಸೋಲಿನ ಅಂತರವನ್ನು 48 ರನ್‌ಗಳಿಗೆ ಇಳಿಸಿದ್ದರು . ಈ ಎರಡು ಇನಿಂಗ್ಸ್ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು , 2017 ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಡಿಆರ್‌ಎಸ್ ತೆಗೆದುಕೊಳ್ಳುವ ಮುನ್ನ ಪ್ರವಾಸಿ ತಂಡದ ಸ್ಟೀವ್ ಸ್ಮಿತ್ ಅವರು ಡ್ರೆಸಿಂಗ್ ಕೊಠಡಿಯತ್ತ ನೋಡಿದ್ದರು . 

ಇದಕ್ಕೆ ಆಕ್ಷೇಪವೆತ್ತಿದ ಕೊಹ್ಲಿ ಎದುರಾಳಿ ತಂಡದವರು ಡಿಆರ್‌ಎಸ್ ನಿಯಮವನ್ನು ಗೇಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು . ಇದಾಗಿ ಎರಡು ವರ್ಷಗಳ ನಂತರ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು . ಮೆಲ್ಬರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅವರು ಗಳಿಸಿದ 82 ರನ್‌ಗಳು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು . 

ತಂಡ 2-1ರಲ್ಲಿ ಜಯ ಗಳಿಸಿತ್ತು . ಟೆಸ್ಟ್ ಬ್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ ತಂಡ ಮೂರು ವರ್ಷ ಅದನ್ನು ಉಳಿಸಿಕೊಂಡಿತ್ತು . ಈ ಅವಧಿಯಲ್ಲಿ ತವರಿನಲ್ಲೂ ವಿದೇಶದಲ್ಲೂ ಅನೇಕ ಪಂದ್ಯಗಳನ್ನು ಗೆದ್ದುಕೊಂಡಿತ್ತು . 

ಈ ಸಂದರ್ಭಗಳಲ್ಲೆಲ್ಲ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಸೊಗಯಿಸಿತ್ತು , ಟ್ವೆಂಟಿ 20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲಿಗೆ ಮೊಹಮ್ಮದ್ ಶಮಿ ಕಾರಣ ಎಂದು ದ್ವೇಷದ ಕಿಡಿ ಹಚ್ಚಿದವರ ಬಾಯಿ ಮುಚ್ಚಿಸಿದ ಮತ್ತು ಶಮಿ ಪರವಾಗಿ ನಿಂತಿದ್ದರು

Post a Comment

Previous Post Next Post