ಇಂದಿನಿಂದ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

 ಬೆಂಗಳೂರು : ಬಹು ನಿರೀಕ್ಷಿತ ಬೆಂಗಳೂರು 13 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಗರದ ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ ) ಆವರಣದಲ್ಲಿ ಗುರುವಾರ ಸಂಜೆ 4.30 ಕ್ಕೆ ಚಾಲನೆ ದೊರೆಯಲಿದೆ . $ X 4G + all I C ಕರ್ನಾಟಕ ಚಲನಚಿತ್ರ ಅಕಾಡೆಮಿ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ . 2020 2021 ನೇ ಸಾಲಿನ ಅತ್ಯುತ್ತಮ ಚಿತ್ರಗಳ ಪ್ರದರ್ಶನಕ್ಕೆ ಈ ಉತ್ಸವ ವೇದಿಕೆಯಾಗಲಿದೆ . 


ಈಗಾಗಲೇ ಪ್ರದರ್ಶನಗೊಳ್ಳಲಿರುವ ಚಿತ್ರಗಳ ಪಟ್ಟಿಯೂ ಅಂತಿಮವಾಗಿದೆ . ಉದ್ಘಾಟನಾ ಚಿತ್ರವಾಗಿ ಸೋನಿಯಾ ಲಿಸಾ ನಿರ್ದೇಶನದ ' ಟೈಲರ್ ಚಿತ್ರ ಪ್ರದರ್ಶನಗೊಳ್ಳಲಿದೆ . ಉದ್ಘಾಟನೆಗೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ರಂಗು ತುಂಬಲಿವೆ . ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವವನ್ನು ಉದ್ಘಾಟಿಸಲಿದ್ದು , ನಟ ದರ್ಶನ್ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ . ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ , ಹೆಸರಾಂತ ಚಿತ್ರ ನಿರ್ದೇಶಕ ಪ್ರಿಯದರ್ಶನ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಮಾರ್ಚ್ 4 ರಿಂದ ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿರುವ ' ಪಿವಿಆರ್ ಸಿನಿಮಾ'ದ 11 ಪರದೆಗಳಲ್ಲಿ , ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿ ಅಕಾಡೆಮಿಯಲ್ಲಿ ಪ್ರದರ್ಶನಗಳು ನಡೆಯಲಿವೆ ' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಹೇಳಿದರು .


 ' ಈ ಚಲನಚಿತ್ರೋತ್ಸವದಲ್ಲಿ 2020 ಮತ್ತು 2021 ರಲ್ಲಿ ನಿರ್ಮಾಣವಾದ 55 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ . ಚಿತ್ರೋತ್ಸವ ವಿಶೇಷ : ಈ ಚಲನಚಿತ್ರೋತ್ಸವಕ್ಕೆ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಫಿಲ್ಟ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ( FIAPF ) ಮಾನ್ಯತೆ ಸಿಕ್ಕಿದೆ . ಜಗತ್ತಿನಲ್ಲಿ ನಡೆಯುವ ಐದು ಸಾವಿರ ಚಿತ್ರೋತ್ಸವಗಳ ಪೈಕಿ ಇದುವರೆಗೆ 45 ಚಿತ್ರೋತ್ಸವಗಳಿಗೆ ಮಾತ್ರ ಈ ಮಾನ್ಯತೆ ಇತ್ತು . ಇದು ಆ ಗೌರವಕ್ಕೆ ಪಾತ್ರವಾಗಿರುವ 46 ನೇ ಚಿತ್ರೋತ್ಸವವಿದು . ಸ್ಪರ್ಧಾ ವಿಭಾಗ : ಏಷ್ಯಾ ಚಲನಚಿತ್ರ ವಿಭಾಗ , ಭಾರತೀಯ ಚಲನಚಿತ್ರಗಳ ವಿಭಾಗ , ಕನ್ನಡ ಚಲನಚಿತ್ರಗಳ ವಿಭಾಗ , ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ವಿಭಾಗದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ . ' ಸಮಕಾಲೀನ ವಿಶ್ವ ಸಿನಿಮಾ , ವಿದೇಶವೊಂದರ ವಿಶೇಷ ನೋಟ ( ಫ್ರಾನ್ಸ್ ಸಿನಿಮಾ ಕ್ಷೇತ್ರ ) , ಈಶಾನ್ಯ ರಾಜ್ಯಗಳ ವಿಶೇಷ ನೋಟ ಇರಲಿದೆ . ಆಸ್ಕರ್ ಪ್ರಶಸ್ತಿಗೆ ಅರ್ಹ ಸಿನಿಮಾಗಳ ಆಸ್ಕರ್ ವಿಭಾಗ ಇರಲಿದೆ . ಜೊತೆಗೆ ವಿಮರ್ಶಕರ ಸಪ್ತಾಹವೂ ಇದೆ ' ಎಂದು ಪುರಾಣಿಕ್ ಹೇಳಿದರು . ' ಜರ್ಮನಿಯ ವೋಲ್ಕರ್‌ಸ್ಕೋಂಡ್ರಫ್ , ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ ಅವರ ಸಿನಿಬದುಕಿನ ಪುನರವಲೋಕನ ನಡೆಯಲಿದೆ . ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸಂಬಂಧಿಸಿದ ಐದು ಚಿತ್ರಗಳ ವಿಶೇಷ ಪ್ರದರ್ಶನ ನಡೆಯಲಿದೆ . ತುಳು ಚಿತ್ರರಂಗದ ಸುವರ್ಣ ಮಹೋತ್ಸವದ ಹಿನ್ನೆಲೆ ತುಳು ಚಿತ್ರರಂಗದ ಅವಲೋಕನ , ವಿಚಾರ ಸಂಕಿರಣ ನಡೆಯಲಿದೆ . ಚಿತ್ರೋತ್ಸವವು ಅಪ್‌ಲೈನ್ ಮತ್ತು ಆನ್‌ಲೈನ್ ಮಾದರಿಗಳಲ್ಲಿ ( ಹೈಬ್ರಿಡ್ ) ನಡೆಯಲಿದೆ ' ಎಂದರು . ' ಪುನೀತ್ ರಾಜ್‌ಕುಮಾರ್ , ಸಂಚಾರಿ ವಿಜಯ್ ಅವರ ಸ್ಮರಣೆಯೂ ನಡೆಯಲಿದೆ . ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರ , ಉಪನ್ಯಾಸ , ಸಂವಾದ ಗಳು ನಡೆಯಲಿವೆ ' ಎಂದು ತಿಳಿಸಿದರು . ಐಐಎಸ್‌ಸಿಯ ಟಾಟಾ ಸಭಾಂಗಣ ದಲ್ಲಿ ಮಾ .10 ರಂದು ಸಮಾರೋಪ ನಡೆಯಲಿದೆ . ಏನಿದು ಫಿಯಾಫ್ ? ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಫಿಲ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ( ಚಲನಚಿತ್ರ ನಿರ್ಮಾಪಕರ ಅಂತರರಾಷ್ಟ್ರೀಯ ಒಕ್ಕೂಟ ) ಹೃಸ್ವರೂಪವೇ ಫಿಯಾಫ್ ( FIAPF ) 30 ದೇಶಗಳ 37 ಚಲನಚಿತ್ರ ನಿರ್ಮಾಪಕರ ರಾಷ್ಟ್ರಮಟ್ಟದ ಸಂಘಗಳ ಒಕ್ಕೂಟವಿದು . Bengaluru ಫಿಯಾಫ್ ಪ್ರತಿನಿಧಿಗಳು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯ ಪ್ರತಿಯೊಂದು ಹೆಜ್ಜೆಯನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿ ಈ ಮಾನ್ಯತೆ ನೀಡಿದ್ದಾರೆ . Film Festival ' ಫಿಯಾಫ್ ಮಾನ್ಯತೆಯಿಂದ ಸಿನಿ ಕ್ಷೇತ್ರದ ಹೊಸ ಪೀಳಿಗೆಗೆ ತುಂಬಾ ಅನುಕೂಲವಾಗುತ್ತದೆ . ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಜಾಗತಿಕಮಟ್ಟದಲ್ಲಿ ನೋಡುವ ರೀತಿಯೇ ಬೇರೆ . ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯುತ್ತದೆ . ಮಾರುಕಟ್ಟೆ ವೃದ್ಧಿ , ಗುಣಮಟ್ಟ ವರ್ಧನೆಗೆ ಕೂಡ ಅವಕಾಶ ತೆರೆದುಕೊಳ್ಳುತ್ತವೆ ' ಎಂದು ಪುರಾಣಿಕ್ ಹೇಳಿದರು . 

Post a Comment

Previous Post Next Post