ಹಾಸನ: ಮುಸ್ಲಿಮರಿಗೆ ಮಾವಿನಹಣ್ಣು ಮಾರಾಟ ಮಾಡದಂತೆ ಅಭಿಯಾನ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಇದು ಸರ್ಕಾರದ ನಿರ್ಧಾರ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊAದು ಪಕ್ಷದವರು ಒಂದೊAದು ರೀತಿ ಹೇಳುತ್ತಿದ್ದಾರೆ. ಆದರೆ ಇದು ಸರ್ಕಾರದ ನಿರ್ಧಾರ ಅಲ್ಲ ಎಂದರು.
ಯಾವ ಗ್ರಾಹಕರಿಗೆ ಯಾರ ಬಳಿ ಇಷ್ಟ ಇದೆಯೋ ಅಲ್ಲಿಗೆ ಹೋಗಿ ಮಾವಿನಹಣ್ಣು ತೆಗೆದುಕೊಳ್ಳುತ್ತಾರೆ. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ನಾವು ಹೇಳಿದರೂ, ಇನ್ನೊಂದು ಅಂಗಡಿಗೆ ಹೋಗುವುದಿಲ್ಲ. ಅವರು ತೀರ್ಮಾನ ಮಾಡಿರುವ ಕಡೆಗೇ ಹೋಗುತ್ತಾರೆ ಎಂದು ಹೇಳಿದರು. ಯಾರಿಗೆ ಯಾರ ಬಳಿ ಮಾವಿನಹಣ್ಣು ಖರೀದಿ ಅಥವಾ ಮಾರಾಟ ಇಷ್ಟವೋ ಅವರ ಬಳಿಗೆ ಹೋಗುತ್ತಾರೆ.
ಇದು ಸರ್ಕಾರದ ನಿಲುವಲ್ಲ, ಅವರವರ ವೈಯಕ್ತಿಕ ಸ್ವಂತ ನಿರ್ಧಾರ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ಸಮುದಾಯವದರು ಮಾವಿನಹಣ್ಣು ಬೆಳೆಯುತ್ತಾರೆ. ಮಾರುವವರೂ ಎಲ್ಲಾ ಸಮುದಾಯದವರೂ ಇದ್ದಾರೆ. ಕೆಲವು ಕಡೆ ಮಾವಿನಹಣ್ಣು ರಫ್ತು ಆಗಲಿದೆ. ಒಳ್ಳೆಯ ಬೆಲೆ ಕೊಡುವವರಿಗೆ ರೈತರು ಮಾವಿನ ಹಣ್ಣು ಕೊಡುತ್ತಾರೆ ಎಂದರು. ಎಲ್ಲಿ ಹಣ್ಣು ಚೆನ್ನಾಗಿರುತ್ತೋ, ಯಾವ ಹಣ್ಣು ರುಚಿಯಾಗಿರುತ್ತೋ ಅಲ್ಲಿಗೆ ಹೋಗುತ್ತಾರೆ.
ಯಾವುದೇ ಕಾರಣಕ್ಕೂ ಇದಕ್ಕೆ ಸರ್ಕಾರದ ಕುಮ್ಮಕ್ಕು ಇಲ್ಲ. ಈ ವಿಚಾರವನ್ನು ಇಲ್ಲಿಗೆ ಬಿಡೋಣ. ಮಾಡುವುದಕ್ಕೆ ಬೇರೆ ಕೆಲಸವಿದೆ ಎಂದು ಸಚಿವರು ನುಡಿದರು.
ಮಸೀದಿ ಮೇಲೆ ಆಜಾನ್ ಮೈಕ್ ತೆರವು ವಿಚಾರ ಕುರಿತ ಪ್ರಶ್ನೆಗೆ ನಮ್ಮ ಸರ್ಕಾರ ಬಂದ ಮೇಲೆ ಇದನ್ನು ಮಾಡಿರುವುದಲ್ಲ. ಈ ಹಿಂದೆ ಸರ್ಕಾರಗಳು ಕೆಲ ವರ್ಷಗಳ ಹಿಂದೆಯೇ ಮಾಡಿರುವ ಆದೇಶ ಇದು. ಈ ಕುರಿತಾದ ಮಾಹಿತಿ, ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದಷ್ಟೇ ಹೇಳಿದರು.