ಹಾಸನದ ಹಿರಿಮೆ-ಗರಿಮೆ 19 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಎಸ್ಸೆಸ್ಸೆಲ್ಸಿ ಫಲಿತಾಂಶ

ಹಾಸನ: ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ 625ಕ್ಕೆ 625 ಅಂಕ ಪಡೆದಿರುವ 145 ವಿದ್ಯಾರ್ಥಿಗಳಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳೂ ಸೇರಿದ್ದಾರೆ. ಇವರಲ್ಲಿ 14 ಮಂದಿ ವಿದ್ಯಾರ್ಥಿನಿಯರಿದ್ದರೆ, ಐವರು ಬಾಲಕರು ಸೇರಿದ್ದಾರೆ.

ಈ ಮೂಲಕ ನಮ್ಮೂರ ಪ್ರತಿಭಾವಂತರು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಸಾಧಕರಲ್ಲಿ ಖಾಸಗಿ ಶಾಲೆ ಮಾತ್ರವಲ್ಲದೆ ಸರ್ಕಾರಿ ಹಾಗೂ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳೂ ಸೇರಿದ್ದಾರೆ. ಈ ಮೂಲಕ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಎ ಗ್ರೇಡ್ ಮಾನ್ಯತೆ ಪಡೆದಿದೆ. ಪ್ರತಿಭಾವಂತ 19 ವಿದ್ಯಾರ್ಥಿಗಳಲ್ಲಿ ವಿಜಯ ಆಂಗ್ಲ ಮಾಧ್ಯಮ ಶಾಲೆಯ 7 ವಿದ್ಯಾರ್ಥಿಗಳು ಟಾಪರ್ಸ್ ಆಗಿ ಹೊರ ಹೊಮ್ಮಿದ್ದಾರೆ. ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದರೆ, ಪೋಷಕರು ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. 

Ads

Ads

ಜಿಲ್ಲೆಯ ಟಾಪರ್ಸ್ಗಳ ಪಟ್ಟಿ

* ಅರ್ಜುನ್ ಇ.ನಾಯಕ್, ಮೊರಾರ್ಜಿ ವಸತಿ ಶಾಲೆ, ಎಚ್.ರಂಗಾಪುರ ಅರಸೀಕೆರೆ

* ಪ್ರಗತಿ ಎಚ್.ಎನ್., ಸರ್ಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ

* ಯಶ್ವಿತಾ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕುಂದೂರು ಮಠ ಚನ್ನರಾಯಪಟ್ಟಣ 

* ಭೂಮಿಕಾ ಬಿ.ಕೆ., ಶಾಲಿನಿ ಆಂಗ್ಲ ಮಾಧ್ಯಮ ಶಾಲೆ, ಚನ್ನರಾಯಪಟ್ಟಣ

* ಮೋಹಿತ್ ಎಚ್., ರಾಯಲ್ ಅಪೊಲೋ ಶಾಲೆ, ಹಾಸನ

* ತಸ್ಲೀನ್ ಫಿರ್ದೋಸ್, ರಾಯಲ್ ಅಪೊಲೋ, ಹಾಸನ

* ಮಹಾಲಕ್ಷ್ಮಿ ಸಿ., ಸೆಂಟ್ ಫಿಲೋಮಿನಾ ಶಾಲೆ, ಹಾಸನ 

* ಅಭಿಷೇಕ್ಗೌಡ, ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಹರ್ಷಿತ ಎಚ್.ಸಿ., ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಇಂಚರ ಎಲ್, ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಕಲ್ಯಾಣ್ ಎಂ.ಎ.,ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಮಧುರ ಎ., ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಸಂಸ್ಕೃತಿ ಪಿ.ಕುಮಾರ್, ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಸ್ಫೂರ್ತಿ ಜಿ.ಸಿ., ವಿಜಯ ಆಂಗ್ಲ ಮಾಧ್ಯಮ ಶಾಲೆ, ಹಾಸನ

* ಎಚ್.ವೈ.ನಿವೇದಿತಾ, ಸಗೇಷಿಯಸ್ ಶಾಲೆ, ಹಾಸನ

* ಪುನೀತಾ ಬಿ.ಬಿ., ಯುನೈಟೆಡ್ ಹೈಸ್ಕೂಲ್, ಹಾಸನ

* ಪೂರ್ವಿಕ.ಎಸ್., ಯುನೈಟೆಡ್ ಹೈಸ್ಕೂಲ್, ಹಾಸನ

* ಶ್ರೇಯಾ.ಸಿ.ಜೆ., ಯುನೈಟೆಡ್ ಹೈಸ್ಕೂಲ್, ಹಾಸನ

* ಲಿಖಿತ.ಎಚ್.ಡಿ  ಎಸ್.ಆರ್.ಎಸ್. ಪ್ರಜ್ಞ ವಿದ್ಯಾಶಾಲೆ, ಹಾಸನ

1 Comments

  1. God bless you all,guys keep it up in your future studies,with warm wishes. Hasana jilleya hirime nimmindagali !

    ReplyDelete
Previous Post Next Post