ಬಹು ಬೇಡಿಕೆಯ ನಟಿ ರಮ್ಯಾ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈಗ ಕೆಲ ಆಯ್ದ ಸೆಲೆಬ್ರಿಟಿಗಳಿಗೋಸ್ಕರ ಆಯೋಜಿಸಿದ್ದ 777 ಚಾರ್ಲಿ' ವಿಶೇಷ ಶೋ ನಲ್ಲಿ ರಮ್ಯಾ ಭಾಗಿಯಾಗಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾ ಸಾಕಷ್ಟು ಇಷ್ಟವಾಗಿದೆ. 777 ಚಾರ್ಲಿ" ಎಮೋಷನಲ್ ಚಿತ್ರ, ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ ಚಿತ್ರವನ್ನು ಕೊಟ್ಟಿರುವ ರಕ್ಷಿತ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.
Tags
ಸಿನಿಮಾ