ಅರಕಲಗೂಡು: ನನ್ನನ್ನು ಬಿಜೆಪಿ ಪಕ್ಷದ ಮಂಡ್ಯ ಉಸ್ತುವಾರ ಹೊಣೆಯಿಂದ ಕಿತ್ತು ಹಾಕಲಾಗಿದೆ ಹೊರತು ಪಕ್ಷದಿಂದ ಉಚ್ಛಾಟಿಸಿಲ್ಲ. ನಾನು ಈಗಲೂ ಬಿಜೆಪಿಯಲ್ಲೇ ಉಳಿದಿರುವೆ ಎಂದು ಮಾಜಿ ಸಚಿವ ಎ. ಮಂಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದಕ್ಷಿಣ ಪದವೀಧರ ಚುನಾವಣೆಯಲ್ಲಿ ಬಿಜೆಪಿ ಅರ್ಭ್ಯಥಿಗೆ ನನ್ನ ಬೆಂಬಲವಿದೆ. ಪದವೀಧರ ಮತದಾರರು ಪ್ರಜ್ಞಾವಂತರಾಗಿದ್ದು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಶ್ವಾಸವಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಬಿಜೆಪಿ ಅಭ್ಯರ್ಥಿ ಪರ ಮತದಾರರ ಒಲವಿದೆ ಎಂದು ಎ. ಮಂಜು ಹೇಳಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ತೀರ್ಥ ಶೀರ್ಘದಲ್ಲೇ ಹೊರ ಬರುವ ವಿಶ್ವಾಸವಿದೆ. ಆನಂತರ ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಕಾದು ನೋಡಿ. ಮತದಾರರು ಮತ್ತು ಅಭಿಮಾನಿಗಳ ನಿರ್ಧಾರ ಆಧರಿಸಿ ನಾನು ಯಾವು ಪಕ್ಷದಿಂದ ಸ್ಪರ್ಧಿಸುವ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
Tags
ಅರಕಲಗೂಡು