ಅನಂತರಾಜೇಅರಸು ಬೇಲೂರು :
ತಾಲ್ಲೂಕಿನ ಮೂಲೆಯೊಂದರ ಹಳ್ಳಿಯ ರಸ್ತೆ ಗುಂಡಿ ಬಿದ್ದಿದ್ದರೆ ಅದು ಪ್ರಮುಖರ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕಾಣಿಸುವುದಿಲ್ಲ ಓಕೆ.
ಆದರೆ ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುವ ರಾಜ್ಯ ಹೆದ್ದಾರಿ ೧೧೨ರ ಸಕಲೇಶಪುರ ಮಾರ್ಗದಲ್ಲಿ ಬೇಲೂರಿನಿಂದ ಬಿಕ್ಕೋಡಿನವರಗೆ ಸಂಚರಿಸುವುದೆAದರೆ ಯಮಯಾತನೆಯೇ ಸರಿ. ೧ ವರ್ಷದ ಹಿಂದೆಯೇ ಈ ರಸ್ತೆಯ ಸನ್ಯಾಸಿಹಳ್ಳಿ, ತಗರೆ, ಕೋಗಿಲಮನೆ, ಬೊಮ್ಮಡಿಹಳ್ಳಿ, ಬಿಕ್ಕೋಡು ಸಮೀಪದ ಕೈಮರ ಈ ಸ್ಥಳದಲ್ಲಿ ಆಳದ ಗುಂಡಿಗಳು ಇವೆ. ೬ ತಿಂಗಳ ಹಿಂದೆ ಗುಂಡಿಯನ್ನು ಮುಚ್ಚಿದರೂ ಪುನಃ ಕಿತ್ತುಬಂದಿದೆ. ಅಂದರೆ ತೇಪೆ ಕೆಲಸಕ್ಕೆ ಬಿಲ್ ಪಾವತಿಯಾಗಿದೆ ಎಂದರ್ಥ.
ಈ ರಸ್ತೆಯಲ್ಲಿ ರಾತ್ರಿವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಸಾಕಷ್ಟು ಜನ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಂತೂ ೧ ಅಡಿಯಷ್ಟು ಆಳದ ಗುಂಡಿಯಲ್ಲಿ ನೀರು ನಿಂತು ಸವಾರರಿಗೆ ತಿಳಿಯದೆ ಬಿದ್ದಿರುವುದು ಇದೆ. ಬೈಕಿನಲ್ಲಿ ಗುಂಡಿ ತಪ್ಪಿಸಿಕೊಂಡು ಬರುವ ವೇಳೆ ಹುಸ್ಕೂರಿನ ಮಲ್ಲೇಶಗೌಡ ಅವರು ಸನ್ಯಾಸಿಹಳ್ಳಿ ಬಳಿ ಬಿದ್ದು ಗಾಯಗೊಂಡಿದ್ದಾರೆ. ಸಾರಿಗೆ ಬಸ್ಸುಗಳು, ಲಾರಿಗಳು ಗುಂಡಿಯನ್ನು ತಪ್ಪಿಸುವ ಉದ್ದೇಶದಿಂದ ವಾಲಾಡಿಕೊಂಡು ಸಂಚರಿಸುತ್ತವೆ.
ಬಹುಷಃ ಈ ರಸ್ತೆಯಲ್ಲಿ ಶಾಸಕರಾದಿಯಾಗಿ ಪ್ರಮುಖ ರಾಜಕಾರಣಿಗಳು, ಈ ಹಿಂದೆ ಜನಪ್ರತಿನಿಧಿಯಾಗಿದ್ದವರು ಸಂಚರಿಸುತ್ತಿದ್ದರೂ ಏಕೆ ಗಮನ ಹರಿಸಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ. ಮಲೆನಾಡು ಭಾಗವನ್ನು ನಿರ್ಲಕ್ಷಿö್ಯಸಲಾಗುತ್ತಿದೆ ಎಂಬ ಕೂಗಿನಲ್ಲಿ ಈ ರಸ್ತೆಯೂ ಸೇರಿರಬಹುದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಾಸಕ ಕೆ.ಎಸ್.ಲಿಂಗೇಶ್ ಅವರು ತಾಲ್ಲೂಕಿನಾದ್ಯಂತ ರಸ್ತೆ ಕೆಲಸಕ್ಕೆ ಸಾಕಷ್ಟು ಅನುದಾನ ವ್ಯಯ ಮಾಡಿರುವುದಾಗಿ ಹೇಳುತ್ತಿದ್ದರೂ ಈ ರಾಜ್ಯ ಹೆದ್ದಾರಿ ಬಗ್ಗೆ ಏಕೆ ಆಸಕ್ತಿ ತೋರಿಲ್ಲ-ತೋರುತ್ತಿಲ್ಲ ಎನ್ನುವುದು ಪ್ರಶ್ನಾತೀತ. ಇನ್ನಷ್ಟು ಅಪಘಾತ-ಅನಾಹುತ ಸಂಭವಿಸುವ ಮುನ್ನ ಕ್ರಮದ ಅಗತ್ಯವಿದೆ, ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು ಹಾಗೂ ಸಂಘಟನೆಯ ಪ್ರಮುಖರು