ಚನ್ನರಾಯಪಟ್ಟಣ :-ವಿದ್ಯುತ್ ಪರಿವರ್ತಕ (Tc) ದುರಸ್ತಿ ಪಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪರಿವರ್ತಕಕ್ಕೆ ವಿದ್ಯುತ್ ಪ್ರವಹಿಸಿ ಕೆಲಸ ನಿರ್ವಹಿಸುತ್ತಿದ್ದ ಲೈನ್ ಮನ್ ಸಾವನ್ನಪ್ಪಿರುವ ಘಟನೆ ಇಂದು ತಾಲ್ಲೂಕಿನ ಸಬ್ಬನಹಳ್ಳಿಯಲ್ಲಿ ನಡೆದಿದೆ .
ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ಮಂಜುನಾಥ (35 )ಮೃತಪಟ್ಟ ಲೈನ್ ಮೆನ್ ಆಗಿದ್ದು ವಿದ್ಯುತ್ ಪರಿವರ್ತಕದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲಾ ಎಚ್ಚರಿಕೆಯನ್ನು ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳ ಬೇಜವಾಬ್ದಾರಿಗೆ ಮಂಜುನಾಥ್ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳದಲ್ಲೇ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ .
ಘಟನೆ ವಿಷಯ ತಿಳಿದ ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ .
Tags
ಚನ್ನರಾಯಪಟ್ಟಣ