ಹಾಸನ :- 75 ನೇಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಇಂದು ನಗರದ 01 ನೇ ವಾರ್ಡಿನ ರಾಜಘಟ್ಟ ಭಾಗದ ಭಾರತಿ ಕ್ವಾಟ್ರಸ್ ನಲ್ಲಿ ಕ್ಷೇತ್ರ ಶಾಸಕರಾದ ಪ್ರೀತಂ ಜೆ ಗೌಡ ಹರ್ ಗರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಆಗಬೇಕಾದ ಕೆಲಸದ ಬಗ್ಗೆ ವಿಚಾರಿಸಿ ಈ ಭಾಗದಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಅಗತ್ಯ ಗಮನ ಹರಿಸಲಾಗುವುದು ಎಂದರು ಹಾಗೂ ನಮ್ಮ ರಾಜಘಟ್ಟ ಸರ್ಕಾರಿ ಶಾಲೆ ಮಕ್ಕಳಿಗೆ ರಾಷ್ಟ್ರ ಧ್ವಜ ವಿತರಿಸಿ ನಂತರ ಉಪಯೋಗಿಸುವ ವಿಧಾನವನ್ನು ತಿಳಿಸಲಾಹಿತು.ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಕ್ಷಿತ್ ಸೇರಿದಂತೆ ನಿವಾಸಿಗಳು ಹಾಜರಿದ್ದರು
Tags
ಹಾಸನ