ಸುಗುಮ ಸಂಚಾರಕ್ಕಾಗಿ ಸೇತುವೆ ತಡೆಗೋಡೆಯ ಮಣ್ಣು ತೆಗೆದ ಗ್ರಾಮಸ್ಥರು

ಬೇಲೂರು : ಪಟ್ಟಣದ ವಿಷ್ಣುಸಮುದ್ರ ಕೆರೆಯ ಕೋಡಿಯ ಸಮೀಪವಿರುವ ಸೇತುವೆಯ ಮೇಲೆ ಸಂಗ್ರಹವಾಗಿದ್ದ ಮಣ್ಣನ್ನು ಗ್ರಾಮಸ್ಥರು ತೆಗೆಯುವ ಮೂಲಕ ನಿಂತ ನೀರು ಹೊರ ಹೋಗುವಂತೆ ಮಾಡಿ ಪ್ರಯಾಣಿಕರ ಪ್ರಶಂಸೆಗೆ ಒಳಗಾಗಿದ್ದಾರೆ.

ಬೇಲೂರು ಪಟ್ಟಣದ ವಿಷ್ಣುಸಮುದ್ರ ಕೆರೆಯ ಕೋಡಿ ಸಮೀಪದ ಬಳಿ ಇರುವ ಸೇತುವೆ ಮೇಲಿನ ತಡೆಗೋಡೆಯ ಕೆಳಗಿನ ಮಣ್ಣನ್ನು ತೆರೆವುಗೊಳಿಸುತ್ತಿರುವ ಗ್ರಾಮಸ್ಥರು

ಲೋಕೋಪಯೋಗಿ ಇಲಾಖೆಗೆ ಸೇರುವ ಈ ರಸ್ತೆಯಲ್ಲಿರುವ ವಿಷ್ಣುಸಮುದ್ರ ಕೆರೆ ಭರ್ತಿಯಾದೊಡನೆ ನೀರು ಕೋಡಿ ಮೂಲಕ ಈ ಸೇತುವೆ ಕೆಳಗೆ ಹರಿದು ಚಿಕ್ಕಹಳ್ಳ ಸೇರುತ್ತದೆ. ಸೇತುವೆಯ ಎರಡೂ ಬದಿಯಲ್ಲಿ ತಡೆಗೋಡೆ ಇದ್ದು ತಡೆಗೋಡೆಯ ಕೆಳಗೆ ಮಣ್ಣು ಸಂಗ್ರಹವಾಗಿದ್ದರಿAದ ಮಳೆಯ ನೀರು ಸೇತುವೆ ಮೇಲೆ ಸಂಗ್ರಹವಾಗುತ್ತಿತ್ತು.

ವಾಹನಗಳು ಸಂಗ್ರಹವಾದ ನೀರಿನೊಳಗೆ ಚಲಿಸುತ್ತಿದ್ದವು. ಈ ಸಂದರ್ಭ ರಸ್ತೆಯ ಮೇಲೆ ನಡೆದುಹೋಗುವವರಿಗೆ ನೀರು ಹಾರುವುದು, ಪರಿಣಾಮ ಘರ್ಷಣೆಗೂ ಕಾರಣವಾಗುತ್ತಿತ್ತು. ಶಾಲಾ ಮಕ್ಕಳು ನೀರಿನೊಳಗೆ ನಡೆದುಕೊಂಡು ಬರುವ ಅನಿವಾರ್ಯತೆ ಇತ್ತು. ತಡೆಗೋಡೆಯ ಕೆಳಗಿನ ಮಣ್ಣನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಕ್ರಮ ಕೈಗೊಳ್ಳಲಿಲ್ಲ.

ಇದರಿಂದ ಬೇಸರಗೊಂಡ ಗ್ರಾಮಸ್ಥರಾದ ಕೋಳಿಚಂದ್ರು, ಮಂಜು, ಯದುಕುಮಾರ್, ಶೇಖರ್ ಇವರುಗಳು ಮಳೆಯ ನಡುವೆಯೆ ಮಣ್ಣು ತೆಗೆದು ನೀರು ಸರಾಗವಾಗಿ ಹೊರ ಹೋಗುವಂತೆ ಮಾಡಿದರು. ಇದನ್ನು ಗಮನಿಸಿದ ವಾಹನ ಮಾಲೀಕರು, ಪಾದಚಾರಿಗಳು ಗ್ರಾಮಸ್ಥರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. 


Post a Comment

Previous Post Next Post