ಬೆಳಗೋಡ್ ನಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಸಕಲೇಶಪುರ ತಾಲೂಕಿನ ಹೆಬ್ಬನ ಹಳ್ಳಿ ಯಲ್ಲಿ ಇಂದು ಪುನಃ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ವ್ಯವಸ್ಥೆಗೆ ತಡೆ ಉಂಟು ಮಾಡಿದೆ.

ಇಂದು ಬುಧವಾರ ಬೆಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬನಹಳ್ಳಿಯಲ್ಲಿ ಬೆಳಗ್ಗಿನ ಹೊತ್ತು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಈ ರಸ್ತೆ ಮುಖ್ಯ ರಸ್ತೆಯಾದುದರಿಂದ ಈ ರಸ್ತೆಯಲ್ಲಿ ಬಹಳ ವಾಹನಗಳು ಓಡಾಟ ಮಾಡುತ್ತಿವೆ.


ತಕ್ಷಣ ಜೆಸಿಬಿ ಮುಖಂತರ ಮರವನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮಾ ಜಗದೀಶ್ ಭೇಟಿ ನೀಡಿ ಮರ ತೆರವು ಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

Post a Comment

Previous Post Next Post