ಬೇಲೂರು:- ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಚ್ ಕೆ ಸುರೇಶ್ ಇಂದು ತಾಲ್ಲೂಕಿನ ಜಾವಗಲ್ ಗ್ರಾಮದ ಜನತಾ ಬಡಾವಣೆಯಲ್ಲಿ ಮಳೆಯಿಂದ ಮನೆ ಹಾನಿಗೀಡಾಗಿದ್ದ ಕುಟುಂಬಗಳನ್ನು ಭೇಟಿ ಮಾಡಿ ಆರ್ಥಿಕ ಸಹಾಯ ಮಾಡುವುದರೊಂದಿಗೆ ಧೈರ್ಯ ತುಂಬಿದರು .
ಜಾವಗಲ್ ಗ್ರಾಮದ ಜನತಾ ಬಡಾವಣೆಯಲ್ಲಿ ಮಳೆಯಿಂದಾಗಿ ಮೂರು ಮನೆಗಳು ಕುಸಿದು ಅವಘಡ ಸಂಭವಿಸಿದೆ ಎಂದು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಚ್ ಕೆ ಸುರೇಶ್ ಹಾನಿಗೀಡಾದ ಮನೆಗಳಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು .
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಿದ್ದಪ್ಪಶೆಟ್ಟಿ, ದೊರೆ, ಪಾಪಣ್ಣ, ರಮೇಶ್, ಮಧು, ದಯಾನಂದ್, ಜೀವನ್, ಮಾರುತಿ, ಪ್ರಜ್ವಲ್, ಚಂದು ಹಾಗೂ ಇನ್ನೀತರರು ಉಪಸ್ಥಿತರಿದ್ದರು
Tags
ಬೇಲೂರು