ಹಾಸನ ಜಿಲ್ಲೆ ವಿಧಾನ ಸಭಾ ಕ್ಷೇತ್ರ ಚುನಾವಣಾ ಫಲಿತಾಂಶ-2023 ಅವಲೋಕನ


ಅರಕಲಗೂಡು ವಿಧಾನ ಸಭಾ ಕ್ಷೇತ್ರ


    ಅರಕಲಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 193941  ಮತಗಳಲ್ಲಿ  73605 ಇ.ವಿ.ಎಂ ಮತ,  1038 ಅಂಚೆ ಮತ  ಒಟ್ಟು 74643 ಮತಗಳನ್ನು ಪಡೆದ ಜನತಾದಳ(ಜಾತ್ಯತೀತ) ಅಭ್ಯರ್ಥಿ ಎ.ಮಂಜು ರವರು ಶೇ.38.49 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
     ಪ್ರತಿ ಸ್ಫರ್ಧಿಯಾದ ಹಾಗೂ ಸ್ವತಂತ್ರ ಅಭ್ಯರ್ಥಿಯಾದ ಎಂ.ಟಿ.ಕೃಷ್ಣೇಗೌಡರವರು ಸಹ 54160 ಇ.ವಿ.ಎಂ ಮತ, 878 ಅಂಚೆ ಮತ ಒಟ್ಟು 55038 ಮತಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ಸೇಡ್‌ ಹೊಡೆದು 2 ನೇ ಸ್ಥಾನಗಳಿಸಿದ್ದಾರೆ.
    ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ  ಎಚ್.ಪಿ.ಶ್ರೀಧಾರ್‌ ರವರು 35947 ಮತಗಳನ್ನು ಪಡೆದು 3 ನೇ ಸ್ಥನದ್ಲಲಿ ಇದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಚ್.ಯೋಗರಮೇಶ್‌ ರವರು 19575 ಮತಗಳನ್ನು ಪಡೆದು 4 ನೇ ಸ್ಥನ ಪಡೆದಿದ್ದಾರೆ. ಅರಕಲಗೂಡು ವಿಧಾನ ಸಭಾ ಕ್ಷೇತ್ರದಲ್ಲಿ 624 ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 191551 ಇ.ವಿ.ಎಂ ಮತ ಹಾಗೂ 2390 ಅಂಚೆ ಮತಗಳಾಗಿದೆ.

ಅರಸೀಕೆರೆ ವಿಧಾನ ಸಭಾ ಕ್ಷೇತ್ರ


ಅರಸೀಕೆರೆ ವಿಧಾನ ಸಭಾ ಕ್ಷೇತ್ರ ಸ್ಪರ್ಧೆ ಈ ಬಾರಿ ಜಿದ್ದ ಜಿದ್ದಿ ಉಂಟಾಗಿದ್ದು ಜನಾತ ದಳ(ಜಾತ್ಯತೀತ) ವನ್ನು ತೊರೆದ ಕೆ.ಎಂ.ಶಿವಲಿಂಗೇಗೌಡ ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಒಟ್ಟು 186111 ಮತಗಳಲ್ಲಿ 98375 ಮತಗಳನ್ನು ಪಡೆದು ಶೇ.52.86 ಮತಗಳಿಂದ ಜಯಗಳಿಸಿದ್ದಾರೆ. 
    ಭಾರತೀಯ ಜನತಾ ಪಕ್ಷದಿಂದ ವಂಚಿತರಾದ ಎನ್.ಆರ್.ಸಂತೋಷ್‌ ರವರು ಕೊನೆಯ ಕ್ಷಣದಲ್ಲಿ ಜನತಾದಳ(ಜಾತ್ಯತೀತ) ಪಕ್ಷದಿಂದ ಸ್ಪರ್ಧಿಸಿ 77006 ಇ.ವಿ.ಎಂ ಮತಗಳು, 1192 ಅಂಚೆ ಮತ ಒಟ್ಟು 78198 ಮತಗಳನ್ನು ಪಡೆದು ಪ್ರಥಮ ಬಾರಿಗೆ ಸ್ಪರ್ಧಿಸಿ ಅರಸೀಕೆರೆ ಕ್ಷೇತ್ರದಲ್ಲಿ ಶೇ.42.02 ರಷ್ಟು ಮತಗಳನ್ನು ಹೊಂದೆ 2ನೇ ಸ್ಥನದಲ್ಲಿದ್ದಾರೆ. ಹಾಗೂಅ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಜಿ.ವಿ.ಟಿ.ಬಸವರಾಜ ರವರು ಕೇವಲ 6538 ಮತಗಳನ್ನು ಪಡೆದು 3ನೇ ಸ್ಥನದಲ್ಲಿದ್ದಾರೆ.
    ಅರಸೀಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 617ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 18359ಇ.ವಿ.ಎಂ ಮತ ಹಾಗೂ 2562 ಅಂಚೆ ಮತಗಳಾಗಿದೆ.

ಬೇಲೂರು ವಿಧಾನ ಸಭಾ ಕ್ಷೇತ್ರ


        ಬೇಲೂರು ವಿಧಾನ ಸಭಾ ಕ್ಷೇತ್ರದಿಂದ 12 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಎಚ್.ಕೆ.ಸುರೇಶ್‌ (ಹುಲ್ಲಳ್ಳಿ ಸುರೇಶ್)‌ ರವರು 62628 ಇ.ವಿ.ಎಂ  ಮತ, 943 ಅಂಚೆ ಮತ ಒಟ್ಟು 63571 ಮತಗಳನ್ನು ಪಡೆದು ಬೇಲೂರು ಕ್ಷೇತ್ರದ 164021 ಒಟ್ಟು ಮತಗಳಲ್ಲಿ 63571 ಮತ ಶೇ.38.76 ರಷ್ಟು ಮತ ಪಡೆಯುವ ಮೂಲಕ ಗೆಲುವು ಪಡೆದಿದ್ದಾರೆ.
    ಪ್ರತಿ ಸ್ಪರ್ಧಿಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ ಅಭ್ಯರ್ಥಿ ಬಿ.ಶಿವರಾಮು ರವರು 55221 ಮತ, 614 ಅಂಚೆ ಮತ ಒಟ್ಟು 55835 ಮತ ಶೇ.34.04 ರಷ್ಟು ಮತಗಳನ್ನು ಪಡೆದು 2 ನೇ ಸ್ಥನವನ್ನು ಹೊಂದಿದ್ದಾರೆ. 
    ಜನತಾದಳ(ಜ್ಯಾತ್ಯತೀತ) ಪಕ್ಷದ ಅಭ್ಯರ್ಥಿಯಾದ ಕೆ.ಎಸ್.ಲಿಂಗೇಶ್‌ ರವರು 38446 ಇ.ವಿ.ಎಂ ಮತ, 447 ಅಂಚೆ ಮತ ಒಟ್ಟು38893 ಶೇ.23.71 ರಷ್ಟು ಮತಗಳನ್ನು ಪಡೆದು 3ನೇ ಸ್ಥನಕ್ಕೆ ಕುಸಿದಿದ್ದಾರೆ. 
    ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ 767 ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 161953 ಇ.ವಿ.ಎಂ ಮತ ಹಾಗೂ 2068 ಅಂಚೆ ಮತಗಳಾಗಿದೆ.

ಹಾಸನ ವಿಧಾನ ಸಭಾ ಕ್ಷೇತ್ರ


    ಹಾಸನ ವಿಧಾನ ಸಭಾ  ಕ್ಷೇತ್ರವು ಈ ಬಾರಿ ರಾಜ್ಯದಲ್ಲಿ ಹೈವೋಲ್ಟೆಜ್‌ ಕ್ಷೇತ್ರವಾಗಿದ್ದು, ಭಾರತೀಯ ಜನತಾ ಪಕ್ಷ ಹಾಗೂ ಜನತಾ ದಳ (ಜಾತ್ಯತೀತ) ನೇರ ಜಿದ್ದ ಜಿದ್ದಿ ಸ್ಪರ್ಧೆ ನಡೆದಿದ್ದು, ಜೆಡಿಎಸ್‌ ಭದ್ರಕೋಟೆಯಲ್ಲಿ ಪುನಃ ಜನತಾ ದಳ (ಜಾತ್ಯತೀತ) ಅಭ್ಯರ್ಥಿಯಾದ ಸ್ವರೂಪ್‌ ಪ್ರಕಾಶ್‌ ಇವರು 84005 ಇವಿಎಂ ಮತಗಳು, 11717 ಅಂಚೆ ಮತಗಳು,  ಒಟ್ಟು 85176  ಮತ ಶೇಕಡಾ 49.8 ಮತಗಳನ್ನು ಪಡೆದು ಭರ್ಜರಿ ಗೆಲುವು  ಸಾಧಿಸಿದ್ದಾರೆ. 
    ಮತ್ತೊಬ್ಬ ಪ್ರಬಲ ಅಭ್ಯರ್ಥಿಯಾದಂತಹ  ಭಾರತೀಯ ಜನತಾ ಪಕ್ಷದ ಪ್ರೀತಮ್‌  ಜೆ ಗೌಡ ರವರು  75110 ಇವಿಎಂ ಮತಗಳು, 2212 ಅಂಚೆ ಮತಗಳು ಒಟ್ಟು 77322 ಮತ ಶೇಕಡಾ 45.21 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿದ್ದಿದ್ದಾರೆ. ಮುಂದುವರೆದು  ಭಾರತೀಯ ರಾಷ್ಟ್ರೀ ಕಾಂಗ್ರೆಸ್‌ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಯವರು ಕೇವಲ 4305 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. 
     ಹಾಸನ ವಿಧಾನ ಸಭಾ ಕ್ಷೇತ್ರದ 171038 ಮತಗಳಲ್ಲಿ 888 ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 167534 ಇ.ವಿ.ಎಂ ಮತ ಹಾಗೂ 3504 ಅಂಚೆ ಮತ ಚಲಾಯಿಸಿದ್ದಾರೆ. 

ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರ


    ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರವು ಜೆಡಿಎಸ್‌ ನ  ಭದ್ರ ಕೋಟೆಯಾಗಿದ್ದು, ಈ ಬಾರಿಯು ಸಹ  ಜನತದಳ (ಜಾತ್ಯತೀತ) ಅಭ್ಯರ್ಥಿಯಾದ ಹೆಚ್‌ ಡಿ ರೇವಣ್ಣ ನವರು 86907 ಇವಿಎಂ ಮತಗಳು 1196 ಅಂಚೆ ಮತಗಳು, ಒಟ್ಟು 88103 ಶೇಕಡಾ 47.51 ಮತಗಳನ್ನು ಪಡೆದು ಗೆಲುವಿನ ಜಯಬೇರಿ ಬಾರಿಸಿದ್ದಾರೆ.
    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಭ್ಯರ್ಥಿಯಾದ ಶ್ರೇಯಸ್‌ ಎಂ ಪಟೇಲ್‌ ರವರು 84149   ಇವಿಎಂ ಮತಗಳು 802 ಅಂಚೆ ಮತಗಳು, ಒಟ್ಟು 84951 ಶೇಕಡಾ 45.81 ಮತಗಳನ್ನು ಪಡೆದು ಗೆಲುವಿನ ಅಂತರವನ್ನು ಕುಗ್ಗಿಸಿ  ಎರಡನೇ ಸ್ಥಾನವನ್ನು ಹೊಂದಿದ್ದಾರೆ. 
    ಮುಂದುವರೆದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಜಿ ದೇವರಾಜೇಗೌಡ ರವರು ಕೇವಲ 4764 ಇವಿಎಂ ಮತ, 86 ಅಂಚೆ ಮತ ಒಟ್ಟು 4850 ಶೇಕಡಾ 2.62 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. 
    ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ 760 ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 183332 ಇ.ವಿ.ಎಂ ಮತ ಹಾಗೂ 2112 ಅಂಚೆ ಮತ ಚಲಾಯಿಸಿದ್ದಾರೆ. 

ಸಕಲೇಶಪುರ ವಿಧಾನ ಸಭಾ ಕ್ಷೇತ್ರ

    
        ಸಕಲೇಶಪುರ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 164898 ಮತಗಳಲ್ಲಿ ಇ.ವಿ.ಎಂ ಮತಗಳಲ್ಲಿ 58073 ಅಂಚೆ ಮತಗಳಲ್ಲಿ 531 ಮತಗಳು ಒಟ್ಟು 58604 ಮತಗಳನ್ನು ಪಡೆದ ಭಾರತೀಯ ಜನತಾ ಪಕ್ಷ  ಅಭ್ಯರ್ಥಿಯಾದ  ಸಿಮೆಂಟ್‌ ಮಂಜು  ರವರು ಶೇ.35.54  ಮತಗಳನ್ನು ಪಡೆದು ಜಯಗಳಿಸಿದ್ದಾರೆ.

     ಪ್ರತಿಸ್ಫರ್ಧಿಯಾದ ಜನತಾ ದಳ (ಜಾತ್ಯತೀತ) ಅಭ್ಯರ್ಥಿಯಾದ ಕುಮಾರಸ್ವಾಮಿ ಎಚ್.ಕೆ ರವರು   ಇ.ವಿ.ಎಂ ಮತಗಳಲ್ಲಿ 56113 ಅಂಚೆ ಮತಗಳಲ್ಲಿ 435 ಮತಗಳು ಒಟ್ಟು 56548 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದ್ದಿದ್ದಾರೆ. 

     ಕಾಂಗ್ರೆಸ್‌ ನಿಂದ ಸ್ಪರ್ಧಿಸಿದ  ಮುರುಳಿ ಮೋಹನ್‌  ರವರು 42811 ಮತಗಳನ್ನು ಪಡೆದು 3 ನೇ ಸ್ಥನದ್ಲಲಿ ಇದ್ದಾರೆ.  ಸಕಲೇಶಪುರ  ವಿಧಾನ ಸಭಾ ಕ್ಷೇತ್ರದಲ್ಲಿ 1231 ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 163682 ಇ.ವಿ.ಎಂ ಮತ ಹಾಗೂ 1216  ಅಂಚೆ ಮತಗಳಾಗಿದೆ.

ಶ್ರವಣಬೆಳಗೂಳ  ವಿಧಾನ ಸಭಾ ಕ್ಷೇತ್ರ

        ಶ್ರವಣಬೆಳಗೂಳ ವಿಧಾನ ಸಭಾ  ಕ್ಷೇತ್ರದಲ್ಲಿ ಈ ಬಾರಿ ಒಟ್ಟು 175067 ಮತಗಳಲ್ಲಿ  84511 ಇ.ವಿ.ಎಂ ಮತ, 1157  ಅಂಚೆ ಮತ,  ಒಟ್ಟು 85668 ಮತಗಳನ್ನು ಪಡೆದ ಜನತಾ ದಳ (ಜಾತ್ಯತೀತ) ಅಭ್ಯರ್ಥಿಯಾದ  ಸಿ.ಎನ್.‌ ಬಾಲಕೃಷ್ಣ  ರವರು ಶೇ.48.93 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
     ಪ್ರತಿಸ್ಫರ್ಧಿಯಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌  ಅಭ್ಯರ್ಥಿಯಾದ ಎಂ.ಎ. ಗೋಪಾಲಸ್ವಾಮಿ  ರವರು  78416  ಇ.ವಿ.ಎಂ ಮತ, 607 ಅಂಚೆ ಮತ, ಒಟ್ಟು 79023  ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ಹೊಂದಿದ್ದಾರೆ. 
     ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ ಚಿದಾನಂದ ಸಿ.ಆರ್‌   ರವರು ಕೇವಲ  5648  ಮತಗಳನ್ನು ಪಡೆದು 3 ನೇ ಸ್ಥಾನದಲ್ಲಿ ಇದ್ದಾರೆ.  ಶ್ರವಣಬೆಳಗೂಳ  ವಿಧಾನ ಸಭಾ  ಕ್ಷೇತ್ರದಲ್ಲಿ 667 ಮತಗಳು ನೋಟಾ ಮತಗಳಾಗಿದ್ದು ಈ ಕ್ಷೇತ್ರದಲ್ಲಿ 173182 ಇ.ವಿ.ಎಂ ಮತ ಹಾಗೂ 1885 ಅಂಚೆ ಮತಗಳಾಗಿದೆ.





 

2 Comments

Previous Post Next Post