40 ಕಾಡಾನೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಸಕಲೇಶಪುರ: ಮಂಗಳವಾರ ಮುಂಜಾನೆ ಬರೋಬ್ಬರಿ ನಲವತ್ತು ಕಾಡಾನೆಗಳ ಹಿಂಡೊಂದು ರಸ್ತೆ ದಾಟಲು ಮುಂದಾಗಿದ್ದರಿಂದ ತಾಲೂಕಿನ ಮಳಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಹತ್ತಾರು ದೊಡ್ಡ ಹಾಗೂ ಮರಿಯಾನೆಗಳ ಹಿಂಡು ಒಮ್ಮೆಲೇ ರಸ್ತೆ ದಾಟುತ್ತಿರುವ ದೃಶ್ಯ ವೈರಲ್‌ ಆಗಿದೆ.


ಸುಮಾರು 40ಕ್ಕೂ ಹೆಚ್ಚು ಗಜಪಡೆ ಮಳಲಿ ಗ್ರಾಮದ ಕಾಫಿ ತೋಟದಿಂದ ರಸ್ತೆ ದಾಟಿ ಮತ್ತೂಂದು ಕಾಫಿ ತೋಟಕ್ಕೆ ಒಮ್ಮೆಗೇ ದಾಟಿ ಹೋಗಿವೆ. ಇಷ್ಟೂ ಕಾಡಾನೆಗಳು ರಸ್ತೆ ದಾಟುವವರೆಗೂ ವಾಹನ ಸವಾರರು ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸಿಕೊಂಡು ಕಾಯಬೇಕಾಯಿತು.

ಕಾಡಾನೆಗಳ ಸಂಚಾರದಿಂದ ಕಾಫಿ, ಮೆಣಸು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

Post a Comment

Previous Post Next Post