ಬೋಸ್ಮನಹಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಅನಾವರಣ

ಆಲೂರು : ಬೋಸ್ಮನಹಳ್ಳಿ ಗ್ರಾಮದಲ್ಲಿ   ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ  ಅನಾವರಣ ನೆರವೇರಿಸಿದ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ  ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸಿ ಮಾತಾನಾಡಿದ  ಶಾಸಕ ಸಿಮೆಂಟ್ ಮಂಜುರವರು ಸಮಾಜದಲ್ಲಿ ಅಸಮಾನತೆ,ಅಸಹಜತೆ, ಹೆಚ್ಚಾಗಿದ್ದು  ಸಮಾನತೆಗಾಗಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಅಂದಿನ ದಿನದಲ್ಲಿ ಇಂತಹ ಅಸಮಾನತೆ ಮತ್ತು ತಾರತಮ್ಯತೆಯನ್ನು ಹೋಗಲಾಡಿಸಲು ಅಂಬೇಡ್ಕರ್ ರವರು ಹಗಲಿರುಳು ಅವಿರತವಾಗಿ ದುಡಿದವರು. ಅಂಬೇಡ್ಕರ್ ಅವರ ಜೀವನದುದ್ದಕ್ಕೂ ಎಷ್ಟೇ ಕಷ್ಟ ಬಂದರೂ ಎಲ್ಲವನ್ನು ಸಹ ತಾಳ್ಮೆ  ಕಳೆದುಕೊಳ್ಳದೆ ಸಮಾಜ ಮತ್ತು ದೇಶಕ್ಕೆ ಸಂವಿಧಾನವನ್ನು ಕೊಟ್ಟು ವಿಶ್ವ ಮಾನವರಾದರು. ಸ್ವತಂತ್ರ ಬಂದು 75 ವರ್ಷ ಕಳೆದರೂ ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನ ಸಮರ್ಪಕವಾಗಿ ಜಾರಿಯಾಗಿಲ್ಲ. ಭಾರತೀಯ ಸಂವಿಧಾನ ಪೂರ್ಣ ಪ್ರಮಾಣದಲ್ಲಿ ಜಾರಿಯಾದ ಮಾತ್ರ ಸರ್ವತೋಮುಖ ಅಭಿವೃದ್ಧಿ ಆಗಲು ಸಾಧ್ಯ ಎಂದರು.

 ನಂತರ ಮಾತನಾಡಿದ ಮಾಜಿ ಶಾಸಕ ಹೆಚ್  ಕೆ ಕುಮಾರಸ್ವಾಮಿ ಅಂಬೇಡ್ಕರ್ರವರ ಪುತ್ತಳಿಯನ್ನ ಅನಾವರಣ ಮಾಡಿರುವುದು ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದ್ದು. ಅಂಬೇಡ್ಕರ್ ಅವರ ಪುತ್ತಳಿಯನ್ನ ಅನಾವರಣ ಮಾಡಿದ್ದ  ಮಾತ್ರಕ್ಕೆ ನಮ್ಮೆಲ್ಲರ ಜವಾಬ್ದಾರಿ ಮುಗಿದಿಲ್ಲ. ಅಂಬೇಡ್ಕರ್ ರವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ  ನಡೆಯಬೇಕು ಅಂಬೇಡ್ಕರ್ ರವರು ಅವರ ಜೀವನದುದ್ದಕ್ಕೂ ಸಮಾಜಕ್ಕೋಸ್ಕರ ದೇಶಕ್ಕೋಸ್ಕರ ಕಷ್ಟವನ್ನು,  ನೋವು ಅನುಭವಿಸಿ, ಅವರಿಗೆ ಬಂದಂತಹ ಕಷ್ಟಗಳು ನೋವುಗಳು ದೇಶದ ಸಮಸ್ತ ಜನರಿಗೂ ಬರಬಾರದೆಂದು ನಮ್ಮೆಲ್ಲರಿಗೂ ಸಂವಿಧಾನವನ್ನು ಬರೆದು ದೇಶಕ್ಕೆ  ಸುಖವನ್ನು ಕೊಟ್ಟಂತ ಮಹಾನ್ ವ್ಯಕ್ತಿಯಾಗಿದ್ದಾರೆ. ಎಲ್ಲಾ ನನ್ನ ತಾಯಂದಿರು ಮಕ್ಕಳಿಗೆ ಉನ್ನತವಾದ ಶಿಕ್ಷಣವನ್ನು ಕೊಡಿಸಿ. ಮಕ್ಕಳು ಉನ್ನತವಾದ ಶಿಕ್ಷಣವನ್ನು ಪಡೆದಾಗ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.

 ಡಾ.ಪ್ರೊಫೆಸರ್ ಮಂಜಯ್ಯ ಡಿ ಕೆ  ಮಾತಾನಾಡಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಯಾವುದೇ ಒಂದೇ ಜಾತಿಗೆ ತಮ್ಮ ಹಕ್ಕನ್ನು ನೀಡಿಲ್ಲ ಎಲ್ಲಾ ಜಾತಿ ಜನಾಂಗದವರಿಗೂ ಸಮಾನತೆಯ ಹಕ್ಕನ್ನು ನೀಡಿದ್ದಾರೆ ದೇಶಕ್ಕೆ ಅತ್ಯಂತ ಅಗತ್ಯವಾದ ಸೂಕ್ತವಾದ ವಿಶ್ವಶ್ರೇಷ್ಠ ಸಂವಿದಾನವನ್ನು ನಮಗೆ ಕೊಟ್ಟಿದ್ದಾರೆ ನಾವು ಅದನ್ನ ಮರೆಯಬಾರದು ಡಾ. ಬಿ ಆರ್ ಅಂಬೇಡ್ಕರ್ ರವರು ಸಂವಿದಾನ ರಚನಾ ಸಮಿತಿಯ ಅಧ್ಯಕ್ಷರಾಗದಿದ್ದಾರೆ ನಾವು ಇಂದು ಸಮಾಜಿಕವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸ್ಥಾನಮಾನ ಪಡೆಯುತ್ತಿರಲಿಲ್ಲ  ಅವರು ನೀಡಿದ ಸಂವಿದಾನದಿಂದ ನಾವು ಇಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಕುರಿತು ಹಾಗಾಗಿ ಅಂಬೇಡ್ಕರ್ ಹೇಳಿದಂತೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಲ್ಲಾರು ವಿದ್ಯಾವಂತರಾದರೆ ಅದೇ ನನಗೆ ಕೊಡುವ ದೊಡ್ಡ ಗೌರವವೆಂದು ಎಲ್ಲರಿಗೂ ತಿಳಿಸಿದರು

ಕಾರ್ಯಕ್ರಮದಲ್ಲಿ ಹೊನ್ನವಳ್ಳಿ ಗಣೇಶ ಸಮಾಜ ಸೇವಕರು,ಸುಜಾತ ಕುಮಾರ್  ತಾ. . ಮಾಜಿ ಅಧ್ಯಕ್ಷರು, ಜೆಡಿಎಸ್ ಮುಖಂಡ ಕಾಂತರಾಜ್, ಸದಾನಂದ, ಹರೀಶ್ ಕಿತಗಳಲೆ, ಗ್ರಾ. . ಸದಸ್ಯ  ಚಂದ್ರಶೇಖರ್, ಪತ್ರಕರ್ತ  ಮೋಹನ್ ಕಾಡ್ಲೂರು, ಪ್ರಶಾಂತ್, ಪುವಯ್ಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು,  ಎಸ್ಸಿ ಮೋರ್ಚದ ತಾಲೂಕು ಅಧ್ಯಕ್ಷ ಬಾಲಲೋಚನ, ಸಾಹಿತಿ ಗುರುಮೂರ್ತಿ, ಹರಿದ್ರ ಶಿಕ್ಷಕರು, ಬಿಸಿ ರಾಮಯ್ಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಡಿ.ಎಸ್.ಎಸ್ ಮುಖಂಡರುಗಳಾದ  ರಂಗಯ್ಯ., ದೇವರಾಜ್, ಬಸವರಾಜ್,  ರವಿ ಕಾರ್ಜುವಳ್ಳಿ  ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಶಿವರಾಜ್ ಬೋಸ್ಮನಹಳ್ಳಿ,

  ಕಾರ್ಯಕ್ರಮದ  ನೇತೃತ್ವವನ್ನ  ಜೈ ಭೀಮ್ ಯುವಕ ಸಂಘ(ರಿ) , ಪ್ರಕೃತಿ ಯುವತಿ ಮಂಡಳಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳು ವಹಿಸಿದರು , ಜಿಲ್ಲಾ ಮತ್ತು ತಾಲ್ಲೂಕಿನ ಎಲ್ಲಾ  , ದಲಿತ ಮುಖಂಡರು, ಎಲ್ಲಾ ಪ್ರಗತಿಪರ ಸಂಘಟನೆಯ ಹೋರಾಟಗಾರರು, ಹಾಗೂ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು, ಎಲ್ಲಾ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ  ಪದಾಧಿಕಾರಿಗಳು  ಉಪಸ್ಥಿತರಿದ್ದರು .


Post a Comment

Previous Post Next Post