ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣಕ್ಕೆ 40ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಪೂಜಾರಿ ಹಾಗೂ ಬೆಳಗೋಡು ಹೋಬಳಿ ಗೌರವಾಧ್ಯಕ್ಷ ಬಸವರಾಜ್ ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ತತ್ವ ಸಿದ್ಧಾಂತವನ್ನು ಒಪ್ಪಿ ಮತ್ತು ಈ ಕನ್ನಡದ ಸಂಸ್ಕೃತಿ ನೆಲ ಜಲ ಕನ್ನಡ ಭಾಷೆ ಪರವಾಗಿ ಹೋರಾಡುವ ಹಾಗೂ ಸ್ಥಳೀಯವಾಗಿ ದೊರಕುವ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕರವೇ ಪ್ರವೀಣ ಶೆಟ್ಟಿ ಬಳಗಕ್ಕೆ ಬಾಳುಪೇಟೆಯ ಯುವಕರು ಮತ್ತು ಆಟೋ ಸಂಘದ ಮಾಲೀಕರು ಹಾಗೂ ಚಾಲಕರು ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ ಹಾಗೂ ಬಡವರ ಪರ ಹೋರಾಡುವ ಸಂಘಟನೆಯನ್ನು ತುಂಬಾ ನಿಷ್ಠೆಯಿಂದ ಇಷ್ಟಪಟ್ಟು ಕರವೇ ಸಂಘಕ್ಕೆ ಸೇರ್ಪಡೆಯಾಗಿರುತ್ತಾರೆ.ಈ ಸಂದರ್ಭದಲ್ಲಿ ಶರಣ್ ನಗರ ಕಾರ್ಯದರ್ಶಿ, ಉಮಾರ್ ನಗರ ಕಾರ್ಯದರ್ಶಿ, ಇಬ್ರಾಹಿಂ ಆಚಂಗಿ ಘಟಕ ಅಧ್ಯಕ್ಷ ನಾಗೇಶ್ ಸ್ಟುಡಿಯೋ, ಸಂಘಟನೆಯ ಸಲಹೆಗಾರರು ಆಚಂಗಿ ಘಟಕದ ಸುರೇಶ್, ಬಾಳುಪೇಟೆಯ ಪರಮೇಶ್, ಬಸವರಾಜ್ ಇತರರು ಇದ್ದರು.
Tags
ಸಕಲೇಶಪುರ